ತಲಕಾವೇರಿಯಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಎ.ಎಸ್ ಪೊನ್ನಣ್ಣ

ತಲಕಾವೇರಿಯಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಎ.ಎಸ್ ಪೊನ್ನಣ್ಣ

ಭಾಗಮಂಡಲ: ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಪುಣ್ಯಕ್ಷೇತ್ರ ತಲಕಾವೇರಿಗೆ ಸನ್ನಿಧಿಗೆ ಕೈಗೆತ್ತಿಕೊಂಡ ಹಲವಾರು ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಯನ್ನು ಮಾಡಿದರು. ಬಳಿಕ ಈ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ರಮದಲ್ಲಿ ಸಹ ಭಾಗವಹಿಸಿದರು.

ಅನ್ನದಾಸೋಹ ಕಾರ್ಯಕ್ರಮದ ಕೊಡುಗೆಯಲ್ಲಿ ಶಾಸಕರ ಭಾಗವು ಇದ್ದು, ಮಾನ್ಯ ಶಾಸಕರು ಸ್ವತಃ ಭಕ್ತಾದಿಗಳಿಗೆ ಅನ್ನ ಬಡಿಸುವ ಮೂಲಕ ತಾಯಿ ಕಾವೇರಿ ಮಾತೆಯ ಸೇವೆಯ ಪುಣ್ಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಭಾಗಮಂಡಲ ವಲಯ ಅಧ್ಯಕ್ಷರು ವೆಂಕಟೇಶ್, ತಮ್ಮಯ್ಯ, ಮೋಟಯ್ಯ, ಸಂಪನ್ ಅಯ್ಯಪ್ಪ, ಮಿಥುನ್ ಮಾಚಯ್ಯ, ನಂದ ದೇವಯ್ಯ, ರವಿರಾಜ್ ಹೊಸೂರು ಹರ್ಷ, ಪ್ರಕಾಶ್, ಸೂರಜ್ ಹೊಸೂರು, ಹಂಸ ಕೋಡಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.