ಕುಮಂಡ ಐನ್ ಮನೆಗೆ ಭೇಟಿ ನೀಡಿದ ಶಾಸಕ ಎಎಸ್ ಪೊನ್ನಣ್ಣ: ರಸ್ತೆ ಅಭಿವೃದ್ಧಿಗೆ ಅನುದಾನದ ಭರವಸೆ
ಮಡಿಕೇರಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ, ಮಡಿಕೇರಿ ತಾಲೂಕು ಕೊಕೇರಿ ಗ್ರಾಮದ ಕುಮಂಡ ಐನ್ ಮನೆಗೆ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೇಟಿ ನೀಡಿದರು. ಕುಮಂಡ ಐನ್ ಮನೆ ಪ್ರಮುಖರ ವಿಶೇಷ ಆಹ್ವಾನದ ಮೇರೆಗೆ ಭೇಟಿ ನೀಡಿದ ಶಾಸಕರು, ಸನ್ಮಾನವನ್ನು ಸ್ವೀಕರಿಸಿ ಅಹವಾಲುಗಳನ್ನು ಆಲಿಸಿದರು. ಪ್ರಮುಖವಾಗಿ ಐನ್ ಮನೆಗೆ ತೆರಳುವ ರಸ್ತೆಯ ಅಭಿವೃದ್ಧಿಗೆ ಇವರು ಬೇಡಿಕೆ ಸಲ್ಲಿಸಿದು ಅದನ್ನು ಪುರಸ್ಕರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕುಮಂಡ ಕುಟುಂಬಸ್ಥರು, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೌಶಿ ಕಾವೇರಪ್ಪ, ವಲಯ ಅಧ್ಯಕ್ಷರು ವಿನೋದ್ ನಾಣಯ್ಯ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
