ಮಡಿಕೇರಿ:ಉದ್ಭವ ಶ್ರೀ ವಿನಾಯಕ ಸೇವಾ ಸಮಿತಿಯ ಗಣಪತಿ ವಿಸರ್ಜನೆ: ಒಂಭತ್ತು ದಿನಗಳ ಪೂಜೆಗೆ ವರ್ಣರಂಜಿತ ತೆರೆ

ಮಡಿಕೇರಿ:-ಗೌರ; ಗಣೇಶ ಹಬ್ಬದ ಸಂಭ್ರಮ ಇನ್ನು ಜಿಲ್ಲೆಯ ನಾನಾ ಭಾಗಗಳಲ್ಲಿ ಮುಂದುವರಿದೆ.ಇನ್ನು ಕೆಲವು ಕಡೆಗಳಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಸರ್ಜನೆಯನ್ನು ಮಾಡಲಾಗಿದೆ.ಅದರಂತೆ ಕಳೆದ ಒಂಬತ್ತು ದಿನಗಳಿಂದ ಮಡಿಕೇರಿ ನಗರದ ಪುಟಾಣಿ ನಗರದಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಒಂಭತ್ತು ದಿನಗಳ ಕಾಲ ವಿಶೇಷ ಪೂಜೆ ಪ್ರಾರ್ಥನೆ ನೇರವೇರಿಸಿದ ಬಡಾವಣೆಯ ನಿವಾಸಿಗಳು ನಿನ್ನೆ ಸಂಜೆ ಶ್ರದ್ದ ಭಕ್ತಿಯಿಂದ ರಂಗ ಪೂಜೆಯನ್ನು ಮಾಡಿದರು.ನಂತರ ಇಂದು ಒಂಭತ್ತನೆಯ ದಿನದ ಅಂಗವಾಗಿ ಗಣಪತಿ ಮೂರ್ತಿಯ ವಿಸರ್ಜನೆ ಮಹೋತ್ಸವ ನಡೆಯಿತು.
ಪುಟಾಣಿನಗದಿಂದ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮಂಟಪದಲ್ಲಿ ಗಣಪತಿ ಮೂರ್ತಿಯ ಮೆರವಣಿಗೆ ನಡೆಯಿತು. ಡಿ.ಜೆ ಸದ್ದಿಗೆ ಮಕ್ಕಳು, ಯುವಕರು ಕುಣಿದು ಸಂಭ್ರಮಿಸಿದರು. ಕೇಸರಿ ಶಾಲು, ಬಾವುಟಗಳು ರಾರಾಜಿಸಿದವು. ಗಣಪತಿ ಬಪ್ಪ ಮೊರಿಯಾ ಎಂದು ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಡಿಕೇರಿ ನಗರದ ಪೊಲೀಸ್ ಠಾಣೆಯ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಒಟ್ಟಿನಲ್ಲಿ ಕಳೆದ ಒಂಬತ್ತು ದಿನಗಳಿಂದ ವಿಭಿನ್ನ ರೀತಿಯಲ್ಲಿ ಕ್ರೀಡಾಕೂಟ ವಿಶೇಷ ಪೂಜೆ ನಿತ್ಯ ಅನ್ನಸಂತರ್ಪಣೆ ಮಾಡಿದ ಉದ್ಭವ ಶ್ರೀ ವಿನಾಯಕ ಸೇವಾ ಸಮಿತಿಯ ಸದಸ್ಯಯರ ಕಾರ್ಯಕ್ಕೆ ಇಂದು ವರ್ಣ ರಂಜಿತಾ ತೆರೆ ಬಿದ್ದಿದೆ.