ನಳಂದ ಶಾಲಾ ವಿದ್ಯಾರ್ಥಿ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ನಳಂದ ಶಾಲಾ ವಿದ್ಯಾರ್ಥಿ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕುಶಾಲನಗರ : ಇಲ್ಲಿಗೆ ಸಮೀಪದ ನಳಂದ ಗುರುಕುಲ ವಿದ್ಯಾಸಂಸ್ಥೆಯ ಎಂಟನೆಯ ತರಗತಿ ವಿದ್ಯಾರ್ಥಿ ನಿಶಾನ್ ಪಿ.ಗೌಡ ಇತ್ತೀಚೆಗೆ ಬೆಂಗಳೂರಿನ ಲಿಟ್ಲ್ ಪ್ಲವರ್ ಶಾಲಾ ಕ್ರೀಡಾಂಗಣದಲ್ಲಿ ನಡೆದ ಪ್ರಾದೇಶಿಕ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 14 ರ ವಯೋಮಾನದ ಒಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಿಶಾನ್, ಅಂತಿಮ ಸುತ್ತಿನಲ್ಲಿ ಮಂಗಳೂರಿನ ರಚಿತ್ ಎಂಬ ವಿದ್ಯಾರ್ಥಿ ಯನ್ನು ಮಣಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾನೆ. ಈ ವಿದ್ಯಾರ್ಥಿಗೆ ಶಾಲೆಯ ಕ್ರೀಡಾ ತರಬೇತುದಾರರೂ ಆದ ನಿಶಾನ್ ಅವರ ತಾತ ರಾಜಶೇಖರ್ ತರಬೇತಿ ನೀಡಿದ್ದರು ಎಂದು ಶಾಲಾ ಪ್ರಾಂಶುಪಾಲ ಡಾ.ಸಿ.ಅಂತೋಣಿ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.