ನಾಪೋಕ್ಲು:ನೂತನ ಶಾದಿ ಮಹಲ್ ಕಟ್ಟಡದ ಕಾಮಗಾರಿ ಶಾಸಕ ಎಎಸ್ ಪೊನ್ನಣ್ಣ ಚಾಲನೆ

ನಾಪೋಕ್ಲು:ನೂತನ ಶಾದಿ ಮಹಲ್ ಕಟ್ಟಡದ ಕಾಮಗಾರಿ ಶಾಸಕ ಎಎಸ್ ಪೊನ್ನಣ್ಣ ಚಾಲನೆ

ನಾಪೋಕ್ಲು: ಟೌನ್ ಸುನ್ನೀ ಮುಹಿಯದ್ದೀನ್‌ ಜುಮಾ ಮಸೀದಿ ಇವರ ಆಶ್ರಯದಲ್ಲಿ ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ನ ಚೆರಿಯಪರಂಬುವಿನಲ್ಲಿ, ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶಾದಿ ಮಹಲ್ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

ರಾಜ್ಯ ಸರಕಾರದ ಅಲ್ಪಸಂಖ್ಯಾತರ ಸಚಿವಾಲಯ ವತಿಯಿಂದ ಶಾಸಕರ ಪ್ರಯತ್ನದ ಫಲವಾಗಿ ದೊರಕಿದ ₹ 1 ಕೋಟಿ ಅನುದಾನದಲ್ಲಿ ಈ ಶಿಲನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಶಾದಿ ಮಹಲ್ ಕಟ್ಟಡವನ್ನು ಉತ್ತಮ ರೀತಿಯಲ್ಲಿ ಜನರಿಗೆ ಅನುಕೂಲ ಆಗುವಂತೆ ಕಟ್ಟಿಸಬೇಕೆಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಇದರ ಮುಕ್ತಾಯ ಹಂತದ ಕಾಮಗಾರಿಗಳಿಗೆ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದ ಮಾನ್ಯ ಶಾಸಕರು, ಕ್ಷೇತ್ರಾದ್ಯಂತ ಈಗಾಗಲೇ ₹ 2000 ಕೋಟಿಗೂ ಅಧಿಕ ಹಣದ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಲ್ಲಿದ್ದು, ಹಿಂದೆಂದೂ ಕ್ಷೇತ್ರಕ್ಕೆ ಇಷ್ಟೊಂದು ಅನುದಾನ ಒದಗಿದ ಇತಿಹಾಸವೇ ಇಲ್ಲ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಉಸ್ತಾದ್ ನಿಝಾರ್ ಅಹನಿ ಕಕ್ಕಡಿಪುರಂ, ಶಾದುಲಿ ಸಖಾಫಿ ಕೊಳಕೇರಿ, ಶೇಕುನ ಅಬ್ದುಲ್ಲಾ ಫೈಝಿ ಎಡಪಾಲ, ಡಿಸಿಸಿ ಉಪಾಧ್ಯಕ್ಷರು ಜಮ್ಮತ್ ಅಧ್ಯಕ್ಷರು ಅಬ್ದುಲ್ ರೆಹಮನ್, ಕೆಡಿಪಿ ಸದಸ್ಯರು ಬಾಚಮಾಂಡ ಲವ ಚಿಣ್ಣಪ್ಪ, ಕಕ್ಕಬೆ ಪಂಚಾಯಿತಿ ಸದಸ್ಯರು ಕಲಿಯಂಡ ಸಂಪನ್ ಅಯ್ಯಪ್ಪ, ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷರು ಬೋಳಂಡ ಶೇರಿನ್, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ಕುಶಾಲಪ್ಪ, ಪಂಚಾಯಿತಿ ಸದಸ್ಯರು ಅರುಣ್ ಬೇಬ, ಸಾಬ ಕಾಳಪ್ಪ, ಮಹಮ್ಮದ್, ಕುರೆಸಿ, ವಾಸಿಮ್, ಸಲೀಮ್ ಮಾಜಿ ಪಂಚಾಯಿತಿ ಅಧ್ಯಕ್ಷರು ಹ್ಯಾರಿಸ್, ಹನೀಫ್, ಬಶೀರ್, ಶೌಕತ್ ಅಲಿ, ಮುತ್ತಪ್ಪ, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರು ಹಂಸ ಕೋಡಿ, ಗ್ಯಾರಂಟಿ ಅನುಷ್ಠಾನ ಸದಸ್ಯರು ಸಿರಾಜ್, ಪಕ್ಷದ ಮುಖಂಡರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.