ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ: ಗ್ರಂಥಾಲಯ ಹೆಚ್ಚು ಬಳಸುವ ಮೂಲಕ ಗ್ರಂಥಾಲಯ ಉಳಿಸಿ: ದೀಪಾಭಾಸ್ತಿ ಕರೆ

ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ:   ಗ್ರಂಥಾಲಯ ಹೆಚ್ಚು ಬಳಸುವ ಮೂಲಕ ಗ್ರಂಥಾಲಯ ಉಳಿಸಿ:  ದೀಪಾಭಾಸ್ತಿ ಕರೆ

ಮಡಿಕೇರಿ ನ 14 - ಭಾಷೆಯಂತೆಯೇ ಗ್ರಂಥಾಲಯಗಳನ್ನು ಹೆಚ್ಚು ಬಳಸುವ ಮೂಲಕ ಗ್ರಂಥಾಲಯಗಳನ್ನೂ ಉಳಿಸುವ ನಿಟ್ಟಿನಲ್ಲಿ ಸಾಹಿತ್ಯ ಪ್ರೇಮಿಗಳು ಕಾಯೋ೯ನ್ಮುಖವಾಗಬೇಕೆಂದು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾಭಾಸ್ತಿ ಕರೆ ನೀಡಿದರು.

.ನಗರದ ಕೈಗಾರಿಕಾ ಬಡಾವಣೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿತ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಂದಭ೯ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ದೀಪಾಭಾಸ್ತಿ, ಮಡಿಕೇರಿಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯ ತನಗೆ ಎರಡನೇ ಮನೆಯಿದ್ದಂತೆ ಎಂದು ಹೇಳಿದ ದೀಪಾಭಾಸ್ತಿ, ಗ್ರಂಥಾಲಯದ ಸಂಬಂಧದಿಂದಾಗಿ ತನ್ನ ಸಾಹಿತ್ಯ ಜ್ಞಾನ ಹೆಮ್ಮರವಾಯಿತೆಂದು ಹೇಳಿದರು.

 ಓದುವ ಪ್ರವೖತ್ತಿಯನ್ನು ಬೆಳೆಸುವಲ್ಲಿ ಅದರಲ್ಲಿಯೂ ಇಂಗ್ಲೀಷ್ ಪುಸ್ತಕ ಓದಲು ಮಡಿಕೇರಿಯ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರೇರಣೆಯಾಯಿತು ಎಂದೂ ದೀಪಾಭಾಸ್ತಿ ಹೆಮ್ಮೆಯಿಂದ ನುಡಿದರು 2184 ಎಂಬ ತನ್ನ ಗ್ರಂಥಾಲಯ ನೋಂದಣಿ ಸಂಖ್ಯೆಯನ್ನೂ ಉಲ್ಲೇಖಿಸಿದ ದೀಪಾಭಾಸ್ತಿ, ಅನೇಕ ಪುಸ್ತಕಗಳಲ್ಲಿ ತಾನು ಆ ಪುಸ್ತಕ ಓದಿರುವ ಕುಹುರಾಗಿ ಈ ಸಂಖ್ಯೆಯನ್ನು ಗಮನಿಸಬಹುದು ಎಂದೂ ದೀಪಾ ಹೇಳಿದರು. ಸಪ್ತಾಹದ ಮೂಲಕ ಗ್ರಂಥಾಲಯಗಳಿಗೆ ಹೆಚ್ಚಿನ ಓದುಗರು ದೊರಕಲಿ. ಹೊಸ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ತರಿಸುವ ನಿಟ್ಟಿನಲ್ಲಿ ಸಕಾ೯ರ ಗ್ರಂಥಾಲಯಗಳಿಗೆ ಹೆಚ್ಚಿನ ಆಥಿ೯ಕ ಶಕ್ತಿ ನೀಡಲಿ ಎಂದೂ ದೀಪಾಭಾಸ್ತಿ ಸಲಹೆ ನೀಡಿದರು.

ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಗ್ರಂಥಾಲಯಗಳು ಓದುಗರ ಪಾಲಿಗೆ ಆಲಯ ಇದ್ದಂತೆ. ಗ್ರಂಥಗಳ ಗುಡಿಯೇ ಆಗಿರುವ ಗ್ರಂಥಾಲಯಗಳು ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿಕೊಂಡು ಬಂದಿವೆ. ವಿದ್ಯಾಥಿ೯ಗಳಲ್ಲಿಯೂ ಓದುವ ಅಭ್ಯಾಸಕ್ಕೆ ಗ್ರಂಥಾಲಯಗಳು ಕಾರಣವಾಗಬೇಕು. ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಂಡುಥನ್ ಮಕ್ಕಳು ಸಾಹಿಣ್ಯತ್ಯ ಕೖತಿಗಳನ್ನು, ದಿನಪತ್ರಿಕೆಗಳನ್ನು ಓದುವಂತಾಗಬೇಕು. ಆಯಾ ಶಿಕ್ಷಣ ಸಂಸ್ಥೆಗಳು ಗ್ರಂಥಾಲಯ ಭೇಟಿಯಂಥ ಕಾಯ೯ಕ್ರಮಗಳ ಮೂಲಕ ವಿದ್ಯಾಥಿ೯ಗಳಲ್ಲಿ ಗ್ಂಥಾಲಯದ ಮಹತ್ವ ತಿಳಿಸಿಕೊಡುವಂಥ ಕಾಯ೯ಕ್ರಮ ಆಯೋಜಿಸಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯವು ಅತ್ಯುತ್ತಮವಾಗಿ ನಿವ೯ಹಿಸಲ್ಪಡುತ್ತಾ ಓದುಗ ಸ್ನೇಹಿಯಾಗಿದೆ. ಇದಕ್ಕೆ ಕಾರಣರಾದ ಗ್ರಂಥಾಲಯದ ಸಿಬ್ಬಂದಿ ವಗ೯ ಅಭಿನಂದನಾಹ೯ರು ಎಂದರು. ಸಾಹಿತಿ ಸುಬ್ರಾಯ ಸಂಪಾಜೆ ಮಾತನಾಡಿ, ಮಡಿಕೇರಿಯಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಸಾಕಷ್ಟು ಮಹತ್ವವಿದೆ. ಇಲ್ಲಿನ ಗ್ರಂಥಾಲಯ ಸಿಬ್ಬಂದಿಗಳು ಸ್ನೇಹಪರರು ಎಂಬುದೇ ಹೆಚ್ಚು ಓದುಗರನ್ನು ಈ ಗ್ಂಥಾಲಯ ಹೊಂದಲು ಕಾರಣವಾಗಿದೆ. ಗ್ರಂಥಾಲಯ ಸಪ್ತಾಹ ಮತ್ತಷ್ಟು ಓದುಗರನ್ನು ಪಡೆಯಲು ಕಾರಣವಾಗಲಿ ಎಂದು ಹಾರೈಸಿದರು.

 ಜ್ಞಾನದ ದೀಪ ಬೆಳಗಿಸುವಂಥ ಗ್ರಂಥಾಲಯದ ಕೀತಿ೯ ಮತ್ತಷ್ಟು ಹೆಚ್ಚಾಗಲಿ ಎಂದು ಆಶಿಸಿದರು. ಕಾಯ೯ಕ್ರಮದಲ್ಲಿ ಜಿಲ್ಲಾ ಮುಖ್ಯ ಗ್ರಂಥಪಾಲಕಿ ಸುರೇಖಾ ಮಾತನಾಡಿ, ಪ್ರಸ್ತುತ ಗ್ರಂಥಾಲಯದಲ್ಲಿ 35 ಸಾವಿರ ಪುಸ್ತಕಗಳಿದ್ದು, 5500 ಓದುಗ ಸದಸ್ಯರಿದ್ದಾರೆ. ಏಳು ದಿನಗಳ ಗ್ರಂಥಾಲಯ ಸಪ್ತಾಹದ ಸಂದಭ೯ ಮತ್ತಷ್ಟು ಸದಸ್ಯರನ್ನು ನೋಂದಣಿ ಮಾಡಿಸಿಕೊಳ್ಳುವ ಗುರಿಯಿದೆ ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನದಲ್ಲಿ ಜಿಲ್ಲೆಯಾದ್ಯಂತ 10 ಗ್ರಂಥಾಲಯಗಳು ಕಾಯ೯ನಿವ೯ಹಿಸುತ್ತಿವೆ ಎಂದೂ ಅವರು ಮಾಹಿತಿ ನೀಡಿದರು. 1970 ರಿಂದ ಮಡಿಕೇರಿಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯವು ಕಾಯ೯ನಿವ೯ಹಿಸುತ್ತಿದೆ ಎಂದೂ ಅವರು ತಿಳಿಸಿದರು. ಸಹಾಯಕ ಗ್ರಂಥಪಾಲಕ ವಿಜಯ್ ನಾಗ್, ಕಾಯ೯ಕ್ರಮ ನಿರೂಪಿಸಿದರು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಗ್ರಂಥಾಲಯ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಓದುಗರಾದ ದಕ್ಷಿಣಮೂತಿ೯ ಅವರಿಗೆ ಸದಸ್ಯತ್ವ ಕಾಡ್೯ ನೀಡುವ ಮೂಲಕ ಗಣ್ಯರು ಚಾಲನೆ ನೀಡಿದರು. ಭಾರತದ ಗ್ರಂಥಾಲಯ ಚಳುವಳಿಯ ಪಿತಾಮಹ ಪದ್ಮಶ್ರೀ ಡಾ.ಎಸ್. ಆರ್.ರಂಗನಾಥನ್ ಭಾವಚಿತ್ರಕ್ಕೆ ಗಣ್ಯರು ಪುಪ್ಪಾಚ೯ನೆ ಮಾಡಿದರು. ಅನೇಕ ಓದುಗರು ಕಾಯ೯ಕ್ರಮದಲ್ಲಿ ಹಾಜರಿದ್ದರು.