ಕೇವಲ ಕುಡಿದು ತಿರುಗುವುದಷ್ಟೇ ಹೊಸ ವರ್ಷದ ಆಚರಣೆಯಲ್ಲ: ಇತಿಹಾಸವನ್ನು ತಿಳಿದುಕೊಂಡು ಇಡೀ ವರ್ಷ ಖುಷಿಯಾಗಿರಿ

ಕೇವಲ ಕುಡಿದು ತಿರುಗುವುದಷ್ಟೇ ಹೊಸ ವರ್ಷದ ಆಚರಣೆಯಲ್ಲ:   ಇತಿಹಾಸವನ್ನು ತಿಳಿದುಕೊಂಡು ಇಡೀ ವರ್ಷ ಖುಷಿಯಾಗಿರಿ

ಡಿಸೆಂಬರ್ ಮುಗಿಯುತ್ತಿದ್ದಂತೆ ಹೊಸ ವರ್ಷದ ಸ್ವಾಗತಕ್ಕೆ ಇಡೀ ವಿಶ್ವವೇ ಕಾಯುತ್ತಿರುತ್ತದೆ. ಎಲ್ಲಾ ದೇಶಗಳ ಸಂಸ್ಕೃತಿ, ಆಚಾರ ವಿಚಾರಗಳು ವಿಭಿನ್ನವಾಗಿದ್ದರು ಎಲ್ಲಾ ದೇಶಗಳು ಒಟ್ಟಾಗಿ ಒಂದೇ ದಿನ ಹೊಸ ವರ್ಷವನ್ನು ಆಚರಿಸುತ್ತೇವೆ. 

ಶತಮಾನಗಳ ಹಿಂದೆ ಹೊಸ ವರ್ಷ ಜನವರಿ 1 ಆಗಿರಲಿಲ್ಲ. ವಿವಿಧ ದೇಶಗಳಲ್ಲಿ ವಿವಿಧ ದಿನಗಳಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತಿತ್ತು. ಕೆಲವರು ಡಿಸೆಂಬರ್ 25 ಆಚರಿಸಿದರೆ ಮತ್ತೆ ಕೆಲವರು ಮಾರ್ಚ್ 25 ರಂದು ಆಚರಿಸುತ್ತಿದ್ದರು. ಆನಂತರ ಜನವರಿ 1 ರಂದು ಹೊಸ ವರ್ಷದ ಆಚರಣೆ ಶುರುವಾಯಿತು. ನಾಲ್ಕು ಸಾವಿರ ವರ್ಷಗಳ ಮುಂಚೆ ಪ್ರಾಚೀನ ಬ್ಯಾಬಿಲೋನಿಯನ್ನರು ( ಈಗಿನ ಇರಾಕ್ ) ಹೊಸ ವರ್ಷದ ಆಚರಣೆ ಮಾಡುತ್ತಿದ್ದರು. ಕ್ರಿ.ಪೂ 2000 ದಲ್ಲಿ ಚಳಿಗಾಲದ ಮೊದಲು ಪಾಡ್ಯದ ದಿನ ಅಂದರೆ ಮಾರ್ಚ್ 1 ರ ಆಸುಪಾಸಿನಲ್ಲಿ ಇದನ್ನು ಆಚರಿಸುತ್ತಿದ್ದ ಬಗ್ಗೆ ಮಾಹಿತಿಯಿದೆ. ರೋಮ್ ನಾಗರಿಕತೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಹೊಸ ವರ್ಷದ ಆಚರಣೆ ಪ್ರಾರಂಭವಾಯಿತು.

ಅಲ್ಲಿನ ರಾಜ ನುಮಾ ಪೋಂಪಿಲಸ್ ರೋಮನ್ ಕ್ಯಾಲೆಂಡರ್ ನ್ನು ಬದಲಾಯಿಸಿದನು. ಈ ಕ್ಯಾಲೆಂಡರ್ ಬಂದ ನಂತರ ಹೊಸ ವರ್ಷವನ್ನು ಜನವರಿ 1 ರಂದು ಆಚರಿಸಲಾಗುತ್ತಿದೆ. ಅಂದರೆ ಕ್ರಿ.ಪೂ 153 ರಲ್ಲಿ ಜನವರಿ 1ನ್ನು ಹೊಸ ವರ್ಷದ ಆರಂಭದ ದಿನ ಎಂದು ಘೋಷಿಸಿದರು. ವರ್ಷದ ಮೊದಲ ತಿಂಗಳನ್ನು ಮೊದಲು ಜಾನಸ್ ಎಂದು ಕರೆಯಲಾಗುತ್ತಿತ್ತು. ರೋಮನ್ ದೇವರ ಹೆಸರು ಜಾನಸ್. ಆದರೆ ಕೆಲ ಸಮಯದ ನಂತರ ಜಾನಸ್ ಹೆಸರು ಜನವರಿಯಾಗಿ ಬದಲಾಯಿತು. ಶತಮಾನಗಳ ಹಿಂದೆ ಇಜಾದ್ ಕ್ಯಾಲೆಂಡರ್ ನಲ್ಲಿ ಕೇವಲ 10 ತಿಂಗಳಿದ್ದವು. ನಂತರ 12 ತಿಂಗಳುಗಳಾಯಿತು. ಜಾನಸ್ ನ್ನು ಹೊರತುಪಡಿಸಿ ಮಂಗಳ ಎಂಬ ತಿಂಗಳಿನ ಹೆಸರಿತ್ತು. ಮಂಗಳ ಎಂದರೆ ಯುದ್ಧದ ದೇವರ ಹೆಸರು.  

ನಂತರ ಮಂಗಳ ಎಂಬ ಹೆಸರನ್ನು ಮಾರ್ಚ್ ಎಂದು ಕರೆಯಲಾಯಿತು. ಈ ಹಿಂದೆ ಇಡೀ ವರ್ಷದಲ್ಲಿ ಕೇವಲ 310 ದಿನಗಳಿದ್ದವು. ರೋಮನ್ ಆಡಳಿತಗಾರ ಜ್ಯೂಲಿಯಸ್ ಸೀಜರ್ ಕ್ರಿ.ಪೂ 46 ರಲ್ಲಿ ಜನವರಿ 1 ನ್ನು ಹೊಸ ವರ್ಷದ ಮೊದಲ ದಿನ ಎಂದು ನಿರ್ಧರಿಸಿ ಜ್ಯೂಲಿಯಸ್ ಕ್ಯಾಲೆಂಡರ್ ರಿಗೆ ನಾಂದಿ ಹಾಡಿದನು . ನಂತರ ಈತ ರೋಮನ್ ಕ್ಯಾಲೆಂಡರ್ ನ್ನು ಬದಲಾವಣೆ ಮಾಡಿದಾಗ ತಿಂಗಳುಗಳು 12 ಆಯಿತು. ಒಂದು ವರ್ಷವನ್ನು 365 ದಿನಗಳಿಗೆ ನಿಗದಿಪಡಿಸಲಾಯಿತು. ಭೂಮಿಯು ಸೂರ್ಯನ ಸುತ್ತ 365 ದಿನಗಳು ಮತ್ತು 6 ಗಂಟೆಗಳಲ್ಲಿ ಸುತ್ತು ತ್ತದೆ ಎಂದು ಖಗೋಳಶಾಸ್ತ್ರಜ್ಞ ರಿಂದ ಸೀಜರ್ ಕಲಿತರು. ಆನಂತರ ಕ್ಯಾಲೆಂಡರ್ ಅನ್ನು ಬದಲಾಯಿಸಿದರು.

ವರ್ಷದ ಆರಂಭದ ದಿನದಂದು ನವಜಾತ ಶಿಶುಗಳ ಪೆರಡು ಮಾಡುವ ಸಂಪ್ರದಾಯ ಗ್ರೀಕ್ ಮತ್ತು ಈಜಿಪ್ಟ್ ನಾಗರಿಕತೆಯಲ್ಲಿ ಇತ್ತಂತೆ.ಹೊಸ ವರ್ಷದ ಹುಟ್ಟು ಮಗುವಿನ ಜನನಕ್ಕೆ ಸಮ ಎಂದು ಅವರು ಭಾವಿಸಿದ್ದರಂತೆ.ಹೊಸ ವರ್ಷದ ಮೊದಲ ದಿನ ತಾವು ಮಾಡುವ ಕಾರ್ಯಗಳು/ತಿನ್ನುವ ಪದಾರ್ಥಗಳು ವರ್ಷ ಪೂರ್ತಿಯಾ. ಶುಭಾಶುಭಗಳಿಗೆ ಕಾರಣವಾಗುತ್ತದೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿತ್ತು.

ಅಮೆರಿಕದಲ್ಲಿ ಹೊಸ ವರ್ಷ ಆಚರಿಸುವ ಪದ್ಧತಿಯನ್ನು ಜರ್ಮನ್ನರು ಪರಿಚಯಿಸಿದರು ಎನ್ನಲಾಗಿದೆ .14 ನೇ ಶತಮಾನದಿಂದ ಗ್ರೆಗೋರಿಯನ್ ಕ್ಯಾಲೆಂಡರ್ ಅಳವಡಿಸಿಕೊಳ್ಳುವವರೆಗೆ ರಷ್ಯಾದಲ್ಲಿ ಸೆಪ್ಟೆಂಬರ್ 1 ರಂದು ಹೊಸ ವರ್ಷದ ಆಚರಣೆ ಮಾಡುತ್ತಿದ್ದರು. 

ಪ್ರಪಂಚಾದ್ಯಂತ ಡಿಸೆಂಬರ್ 31 ರ ಮಧ್ಯರಾತ್ರಿ ಕ್ಯಾಲೆಂಡರ್ ಬದಲಾಗುತ್ತದೆ. ಹೊಸ ವರ್ಷವು ಜನವರಿಯಿಂದ ಪ್ರಾರಂಭವಾಗುತ್ತದೆ .ಆದರೆ ಭಾರತದಲ್ಲಿ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ವರ್ಷ ಪ್ರಾರಂಭ ಎಂದು ಪರಿಗಣಿಸುತ್ತಾರೆ. ಹೊಸ ವರ್ಷವನ್ನು ಭಾರತದಲ್ಲಿ ಬೇರೆ ಬೇರೆ ಪ್ರಾಂತ್ಯದಲ್ಲಿ ಜನರು ಬೆರೆಸಿ ಬೇರೆ ದಿನ ಆಚರಿಸುತ್ತಾರೆ ಕರ್ನಾಟಕದಲ್ಲಿ ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ .ಪಂಜಾಬ್ ನಲ್ಲಿ ಹೊಸ ವರ್ಷವು ಬೈಸಾಕಿಯಿಂದ ಶುರುವಾಗುತ್ತದೆ.

ಹೀಗೆ ಬೇರೆ ಬೇರೆ ರಾಜ್ಯಗಳಲ್ಲಿ ಹೊಸ ವರ್ಷ ಬೇರೆ ಬೇರೆ ದಿನ ಶುರುವಾಗುತ್ತದೆ. ಪಾರ್ಸಿ ಹೊಸ ವರ್ಷವನ್ನು ಆಗಸ್ಟ್ 16 ರಂದು ಆಚರಿಸಲಾಗುತ್ತದೆ. ಇರಾನಿಯನ್ ಕ್ಯಾಲೆಂಡರ್ ಪ್ರಕಾರ ಇದುವೇ ಹೊಸ ವರ್ಷ ಅವರಿಗೆ ಪಾರ್ಸಿ ಜನರು ಇದನ್ನು ಹೊಸ ವರ್ಷ ಎಂದು ಆಚರಿಸುತ್ತಾರೆ. ಭಾರತದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಈ ದಿನವನ್ನು ಸಾರ್ವಜನಿಕ ರಜೆಯಾಗಿ ಘೋಷಿಸಿದ್ದಾರೆ . ಈ ರೀತಿಯಲ್ಲಿ ಬೇರೆ ಬೇರೆ ಪ್ರಾಂತ್ಯದಲ್ಲಿ ಬೇರೆ ಬೇರೆ ದಿನ ಹೊಸ ವರ್ಷವನ್ನು ಆಚರಿಸುತ್ತಾರೆ. 

ನಾವು ವಾಸಿಸುವ ಭೂಮಿ ಸೂರ್ಯನ ಸುತ್ತ ಸುತ್ತಲು ಒಂದು ವರ್ಷದ ಕಾಲ ತೆಗೆದುಕೊಳ್ಳುತ್ತದೆ .ಹಾಗೆಯೇ ಪುನರಾವೃತ್ತಿಯಾಗುವ ಸಂದರ್ಭ ಸೂಚಿಸಲು ಹೊಸ ವರ್ಷದ ಆಚರಣೆ ಬಳಕೆಗೆ ಬಂದಿದೆ.  

ಕೇವಲ ಕುಡಿದು ತಿರುಗುವುದಷ್ಟೇ ಹೊಸ ವರ್ಷದ ಆಚರಣೆಯಲ್ಲ ಇತಿಹಾಸವನ್ನು ತಿಳಿದುಕೊಂಡು ಇಡೀ ವರ್ಷ ಖುಷಿಯಾಗಿರಿ.