ಪೊನ್ನಂಪೇಟೆ: ಸಮವಸ್ತ್ರ ಧರಿಸಿದ್ದವನಿಂದಲೇ ಹಾಲು ಕಳ್ಳತನ, ದೃಶ್ಯ ಸಿಸಿಟಿವಿಯಲ್ಲಿ ಸೆರೆ ಕಳ್ಳನನ್ನು ಪತ್ತೆ ಮಾಡಲು ಪೊಲೀಸರಿಗೆ ದೂರು

ಪೊನ್ನಂಪೇಟೆ: ಪೊನ್ನಂಪೇಟೆ- ಗೋಣಿಕೊಪ್ಪಲು ಮುಖ್ಯ ರಸ್ತೆಯ ಹಿಂದಿನ ಮುತ್ತಮ್ಮ ಕಲ್ಯಾಣ ಮಂಟಪ ಬಳಿ ಇರುವ ಹರೀಶ್ ಎಂಬುವರ ನಂದಿನಿ ಹಾಲು ಕೇಂದ್ರದಿಂದ ಇಂದು ಬೆಳಿಗ್ಗಿನ ಜಾವ ಅಂದಾಜು ಎರಡುವರೆ ಗಂಟೆ ಸಮಯಕ್ಕೆ ವ್ಯಕ್ತಿಯೊಬ್ಬರು ಕ್ರೇಟ್ ನಿಂದ ಹಾಲಿನ ಪ್ಯಾಕೆಟ್ ಹಾಗೂ ಮೊಸರು ಪ್ಯಾಕೆಟನ್ನು ಕದ್ದು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸರೆಯಾಗಿದೆ.

 ಎರಡು ಲೀಟರ್ ಹಾಲು ಹಾಗೂ ಒಂದುವರೆ ಲೀಟರ್ ಮೊಸರು ಕದ್ದಿರೋ ಬಗೆ ಅಂದಾಜಿಸಲಾಗಿದೆ. ಕಳೆದ ಒಂದು ವಾರದಿಂದ ದಿನ ಬಿಟ್ಟು ದಿನ ಇದೇ ರೀತಿ ಕಳ್ಳತನ ಆಗುತ್ತಿರುವ ಬಗೆ ಸಿಸಿಟಿವಿ ಪರಿಶೀಲಿಸಿದಾಗ ತಿಳಿದಿದೆ. ಈ ಬಗ್ಗೆ ಅಂಗಡಿ ಮಾಲೀಕ ಹರೀಶ್ ಅವರು ಪೊನ್ನಂಪೇಟೆ ಪೊಲೀಸ್ ಠಾಣೆಗೆ ಲಿಖಿತ ದೂರ ನೀಡಿದ್ದು ಠಾಣಾಧಿಕಾರಿ ಇಲ್ಲದರಿಂದ ನಾಳೆ ಬರಲು ಸೂಚಿಸಿ ಅಲ್ಲಿನ ಮಹಿಳಾ ಸಿಬ್ಬಂದಿ ದೂರುದಾರಿಗೆ ಹೇಳಿ ಕಳುಹಿಸಿದ್ದಾರೆ.

ಸಿಸಿಟಿವಿಯಲ್ಲಿ ಸರೆಯಾದ ದೃಶ್ಯವನ್ನು ಗಮನಿಸಿದಾಗ ಸಮವಸ್ತ್ರ ಧರಿಸಿ, ಹೆಲ್ಮೆಟ್ ಹಾಕಿರುವ ಈ ವ್ಯಕ್ತಿ ಯಾರು ಎಂಬುದು ತಿಳಿಯದಾಗಿದೆ. ಪೊಲೀಸರ ಸಮರ್ಪಕ ತನಿಖೆಯಿಂದಷ್ಟೇ ಇದು ಬಯಲಾಗಬೇಕಾಗಿದೆ. ಕಳೆದ ಏಳು ದಿನಗಳ ಹಿಂದೆ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿರುವ ಹಾಲಿನ ಕೇಂದ್ರದಲ್ಲೂ ಹಾಲು ಹಾಗು ಮೊಸರು ಪ್ಯಾಕೆಟ್ ಕಾಣೆ ಆಗುತ್ತಿದ್ದವು ಎಂದು ಹೇಳಲಾಗಿದೆ.

ಈ ಬಗ್ಗೆ ಅದರ ಮಾಲೀಕರು ಬೆಳಿಗ್ಗೆ ಬೇಗ ಎದ್ದು ಹಾಲಿನ ಬೂತಿಗೆ ಆಗಮಿಸುತ್ತಿದ್ದರಿಂದ ಹಾಲು ಕಳುವು ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಹರೀಶ್ ಎಂಬುವರ ಅಂಗಡಿಯಿಂದ ಹಾಲು ಮೊಸರು ಕಳುವಾಗುತ್ತಿದ್ದೆ ಎನ್ನಲಾಗಿದೆ. ಬೇಲಿಯೇ ಎದ್ದು ಹೊಲ ಮೇಯುತಿದೆಯೋ ಎಂಬ ಸಂಶಯ ಇದೀಗ ಸಾರ್ವಜನಿಕರಲ್ಲಿ ಕಾಡುತ್ತಿದೆ.