ಸಂಸದರ ಬ್ಯಾಡ್ಮಿಂಟನ್ ಪಂದ್ಯಾವಳಿ ಪೋಸ್ಟರ್ ಬಿಡುಗಡೆ
ಮೈಸೂರು: ಸಂಸದರ ಕ್ರೀಡಾ ಮಹೋತ್ಸವದ ಅಂಗವಾಗಿ ಮೈಸೂರು-ಕೊಡಗು ಸಂಸದರಾದ ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ನಡೆಯಲಿರುವ "ಸಂಸದರ ಕಪ್ ಬ್ಯಾಡ್ಮಿಂಟನ್ ಕಪ್" ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಮೈಸೂರಿನ ಬೋಗಾದಿ ಎರಡನೇ ಹಂತದ ರಾಜರಾಜೇಶ್ವರಿ ನಗರದಲ್ಲಿರುವ ಸ್ಫೋರ್ಟ್ಸ್ ಪಾರ್ಕ್‌ನಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಮೈಸೂರಿನ ಕ್ರೀಡಾಸಕ್ತರು ಈ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ. ಜ್ಯೂನಿಯರ್, ಸೀನಿಯರ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ. ಬಾಲಕ-ಬಾಲಕಿಯರಿಗಾಗಿ ಮೂರು ವಿಭಾಗದಲ್ಲಿ ಹಾಗೂ ಸೀನಿಯರ್‌ನಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.
ನವೆಂಬರ್ 15ರಂದು ನಡೆಯಲಿರುವ ಪಂದ್ಯಗಳಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಲು ನವೆಂಬರ್ 14ರಂದು ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಸ್ಕೂಲ್ 10x, ಎಪಿಎನ್ ಪ್ರಾಪರ್ಟೀಸ್, SWISS, ರಾಜೇಂದ್ರ ಹಾರ್ಡ್‌ವೇರ್ ಅಂಡ್ ಪ್ಲೈವುಡ್ ಸ್ಫೋರ್ ಪ್ರಾಯೋಜಕತ್ವದಲ್ಲಿ ಈ ಪಂದ್ಯಾವಳಿ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ 99166 73300 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಈ ವಿಭಾಗದಲ್ಲಿ ಸ್ಪರ್ಧೆಗಳು: ಜೂನಿಯರ್ಸ್ (ಪ್ರವೇಶ ಶುಲ್ಕ ₹300) * 11 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು) * 13 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು) * 15 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು) ಸೀನಿಯರ್ಸ್ (ಪ್ರವೇಶ ಶುಲ್ಕ ₹600): * ಪುರುಷರ ಡಬಲ್ಸ್ * ಪುರುಷರ ಡಬಲ್ಸ್ 35+ * ಪುರುಷರ ಡಬಲ್ಸ್ 80+ * ಮಿಶ್ರ ಡಬಲ್ಸ್ * ಮಹಿಳೆಯರ ಜಂಬಲ್ಡ್ 60+
