ನ6(ನಾಳೆ) ವಿರಾಜಪೇಟೆ ವಿವಿಧೆಡೆ ವಿದ್ಯುತ್ ವ್ಯತ್ಯಯ
ವಿರಾಜಪೇಟೆ; 66/11 ಕೆ.ವಿ ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದ ವಿರಾಜಪೇಟೆ ಶಾಖಾ ವ್ಯಾಪ್ತಿಯ ಪಂಜರಪೇಟೆ ಹಾಗೂ ಹೆಗ್ಗಳ ಫೀಡರ್‌ಗಳಲ್ಲಿ ದಿನಾಂಕ 06.11.2025 ರಂದು ಬೆಳಿಗ್ಗೆ 09.00ರಿಂದ ಸಂಜೆ 6.00 ಗಂಟೆಯವರೆಗೆ ಕೊಡಗು ವಿದ್ಯುತ್ ಜಾಲದ ಬಲವರ್ಧನೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ ಪಟ್ಟಣದ ತೆಲುಗರ ಬೀದಿ, ನೆಹರು ನಗರ, ಗೋಣಿಕೊಪ್ಪ ರಸ್ತೆ, ಶಾಂತಿ ನಗರ, ವಿದ್ಯಾನಗರ, ನಿಸರ್ಗ ಬಡಾವಣೆ, ಮೀನುಪೇಟೆ, ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಆರ್ಜಿ, ಬೇಟೋಳಿ, ಕಲ್ಲುಬಾಣೆ. ಹೆಗ್ಗಳ, ರಾಮನಗರ, ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.
