ಸಹೋದರತೆ ಸಾರುವ ಹಬ್ಬ ರಕ್ಷಾ ಬಂಧನ

(ವಿಶೇಷ ಲೇಖನ:ಸುಕುಮಾರ್ ಹಾಕತ್ತೂರು)
ನಮ್ಮ ದೇಶ ವಿವಿಧತತೆಯಲ್ಲಿ ಏಕತೆ ಯನ್ನು ಕಂಡ ದೇಶ.. ತನ್ನದೇ ಅದ ಆಚಾರ ವಿಚಾರ ಸಂಸ್ಕೃತಿಯನ್ನು. ಹೊಂದಿದೆ. ಇದಕ್ಕೆ ಸಂಬಂಧ ಪಟ್ಟ ಕೆಲವು ಆಚರಣೆಗಳು ನಮ್ಮ ದೇಶದಲ್ಲಿ ಇದೆ ಅದರಲ್ಲಿ ರಾಕಿ ಹಬ್ಬ ( ರಕ್ಷಾ ಬಂಧನ) ಕೂಡ ಒಂದಾಗಿದೆ. ರಕ್ಷಾ ಬಂಧನ ಒಂದು ಹಬ್ಬದಂತೆ ಆಚರಣೆ ಆಚರಿಸುತ್ತಾ ಇದ್ದರೂ. ಇದೀಗ ಕಾಲ ಬದಲಾದಂತೆ. ಆಚರಣೆಗಳು ಬದಲಾಗುತಿದೆ. ಈ ದಿನ ಸಹೋದರ- ಸಹೋದರಿಯರಿಗೆ ಸಮರ್ಪಣೆಯಾಗಿದೆ, ರಕ್ಷಾ ಬಂಧನ.
ರಕ್ಷಾ ಹಾಗೂ ಬಂಧನ ಎಂಬ ಎರಡು ಪದಗಳಿಂದ ಕೂಡಿದ್ದು ಪ್ರಸ್ತುತ ಈ ದಿನ ಸಹೋದರ ಸಹೋದರಿಯರ ಪ್ರೀತಿ ಬಂಧನ ದ ಸಮಾನಾರ್ಥಕವಾಗಿದೆ. ಹಾಗೂ ಸಹೋದರ. ಸಹೋದರಿ ಯರ ಪ್ರೀತಿ ಯನ್ನು ಬಲ ಪಡಿಸುವ ಹಾಗೂ ಬಾತೃತ್ವದ ಸಂಕೇತ. ಏನಾಬಹುದು ಅಣ್ಣ ತಂಗಿಯರ ಅನುಬOದ. ಶ್ರೇಷ್ಠತೇಯನ್ನು ಪ್ರತಿಬಿಂಬಿಸುವ ಅರ್ಥ ಗರ್ಭಿತ ಹಬ್ಬವೇ ರಕ್ಷಾ ಬಂಧನ. ಇದು ಶ್ರಾವಣ ಮಾಸದ ಹುಣ್ಣಿಮೆ ದಿನದಂದು ಆಚರಣೆ ಮಾಡುತ್ತಾರೆ ಇದು ಸಹೋದರ ಸಹೋದರಿಯರ ಭಾಂದವ್ಯ ವನ್ನು ಎತ್ತಿ ತೋರಿಸುತದೆ. ಪ್ರತಿವರ್ಷ ರಕ್ಷಾ ಬಂಧನ ದಿನದಂದು ಅಣ್ಣನ ಕೈಗೆ. ತಂಗಿ ಕಟ್ಟುವ. ರೇಷ್ಮಯ ಧಾರವು ಕೇವಲ ದಾರವಲ್ಲ. ಅದು ಇಬ್ಬರ ನಡುವಿನ ಬಾಂದವ್ಯವನ್ನು ಬಲ ಪಡಿಸುವ ಸಂಕೇತ. ಎಲ್ಲಾ ವಿಧದಲ್ಲೂ ನನ್ನನ್ನು ಕಾಪಾಡು ಎಂದು ತಂಗಿ ಅಣ್ಣನನ್ನು ರಾಕಿ ಕಟ್ಟುವ ಮೂಲಕ ಬೇಡಿ ಕೂಳ್ಳುವ ದಿನವಾಗಿದೆ. ಇತಿಹಾಸ ಪ್ರಕಾರ ಅಲೆಕ್ಸ್ಯಾಂಡರ್ ಚಕ್ರವರ್ತಿ ಭಾರತ ದೇಶದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯ ದಿಂದ ಎದುರಿಸಲು ಪೋರಸ್ ಎಂಬ ರಾಜನ ಮಧ್ಯ ಯುದ್ಧ ಆರಂಭ ಗೊಂಡಿತು ಇದೆ ಸಮಯಕ್ಕೆ ಅಲೆಕ್ಷಾ0ಡರ್ ನ ಪತ್ನಿ ರೋಕ್ಸನಳು ಪೋರಸ್ ಮಹಾರಾಜನಿಗೆ ಒಂದು ಪವಿತ್ರ ದಾರ ವನ್ನು ( ರಾಕಿ) ಒಂದು ಪತ್ರ ದ ಜೊತೆಗೆ ಕಳುಹಿಸಿದಳು. ತನ್ನ ಪತಿ ಅಲೆಕ್ಸಾಂಡರನನ್ನು . ಕೊಲ್ಲದಂತೆ ಇರುವ ಮಾನವಿ ಪತ್ರ ಇದಾಗಿತ್ತು. ನಂತರ ನಡೆದ ಯುದ್ಧದಲ್ಲಿ ಅಲೆಕ್ಸಾಂಡರನು ಉಳಿಸಿದನು ಇದಕ್ಕೆಲ್ಲ ಕಾರಣ ಅಲೆಕ್ಸಾಂಡರನ ಪತ್ನಿ ಕಳುಹಿಸಿದ ದಾರ ಕೈಗೆ ಕೊಟ್ಟಿದ್ದು ಆತನನ್ನು ಕೊಲ್ಲದೆ ಉಳಿಸಿತು. ಮತ್ತೊಂದು ಘಟನೆಯಲ್ಲಿ ಕರ್ಕಾವತಿಯು ರಾಣಿ ಗಂಡನನ್ನು ಕಳೆದುಕೊಂಡು ವೈವಾದ್ಯದ ಜೀವನ ನಡೆಸುತ್ತಿದ್ದಳು ಆಗ ಆಕೆಯು ಚಕ್ರವರ್ತಿ ಹೋಮಯುನನಿಗೆ. ರಾಕಿಯನ್ನು ಕಳುಹಿಸಿದಳು ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಶಾಲು ಈಕೆ ರಾಜ್ಯದ ಮೇಲೆ ದಂಡೆತ್ತಿ ಬರುವ ಕರೆದಾರಕ್ಕೆ ಬಂದಿದ್ದನು ಆಗ ಆಕೆಯು ಕುಮಾರ್ಯು ನನ ಸಹಾಯವನ್ನು ಬಯಸಿ ರಾಕಿಯನ್ನು ಕಳುಹಿಸಿದಳು ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯನನು ಸೇನೆಯನ್ನು ಕರುಣಾವತಿಯ ಸಹಾಯಕ್ಕೆ ಧಾವಿಸುವಂತೆ ಆದರೆ ಅಲ್ಲಿಗೆ ತಡವಾದ ಕಾರಣ ಆ ವೇಳೆಗಾಗಲೇ ರಾಣಿ ಕರ್ಣಾ ವತಿ ಯು ಇತರ ಮಹಿಳೆ ಯಾರೊಡನೆ. ತನ್ನ ಮಾನ. ರಕ್ಷಣೆ ಗಾಗಿ ಜವ್ಹಾರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದಳು. ಎಂದು ಪ್ರಭೀತಿ ಇದೆ. ಇದು ಅಣ್ಣ ತಂಗಿ ಸಂಬಂಧ ವನ್ನು ಎತ್ತಿ ತೋರಿಸುತಿದೆ. ಇದು ಕೇವಲ ಒಂದು ರೇಷ್ಮೆ ದಾರದ ಮೂಲಕ ಏನೇ ಆಗಲಿ ಅಣ್ಣ- ತಂಗಿ ಆಚರಿಸುವ ಸಹೋದರ-ಸಹೋದರಿ ನಡುವಿನ ಪಾತೃತ್ವದ ಸಂಕೇತ ರಾಕಿ ಹಬ್ಬ. ನನ್ನ ಎಲ್ಲ ಅಣ್ಣ ತಂಗಿಯರಿಗೆ ರಕ್ಷಾ ಬಂಧನ ದ ಶುಭಾಶಯಗಳು.