ಆರು ವರ್ಷ ಕಳೆದರೂ ಉದ್ಘಾಟನಾ ಭಾಗ್ಯ ಕಾಣದ ಹೆಬ್ಬಾಲೆ ಸಾರ್ವಜನಿಕ ಶೌಚಾಲಯ!!! ಬಿರುಕು ಬಿಟ್ಟ ಶೌಚಾಲಯದ ಕಟ್ಟಡ!

ಆರು ವರ್ಷ ಕಳೆದರೂ ಉದ್ಘಾಟನಾ ಭಾಗ್ಯ ಕಾಣದ ಹೆಬ್ಬಾಲೆ ಸಾರ್ವಜನಿಕ ಶೌಚಾಲಯ!!!  ಬಿರುಕು ಬಿಟ್ಟ ಶೌಚಾಲಯದ ಕಟ್ಟಡ!
ಆರು ವರ್ಷ ಕಳೆದರೂ ಉದ್ಘಾಟನಾ ಭಾಗ್ಯ ಕಾಣದ ಹೆಬ್ಬಾಲೆ ಸಾರ್ವಜನಿಕ ಶೌಚಾಲಯ!!!  ಬಿರುಕು ಬಿಟ್ಟ ಶೌಚಾಲಯದ ಕಟ್ಟಡ!
ಆರು ವರ್ಷ ಕಳೆದರೂ ಉದ್ಘಾಟನಾ ಭಾಗ್ಯ ಕಾಣದ ಹೆಬ್ಬಾಲೆ ಸಾರ್ವಜನಿಕ ಶೌಚಾಲಯ!!!  ಬಿರುಕು ಬಿಟ್ಟ ಶೌಚಾಲಯದ ಕಟ್ಟಡ!

ಕೂಡಿಗೆ :ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ.ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಳೆದ ಆರು ವರ್ಷಗಳ ಹಿಂದೆ 4ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ಇದುವರೆಗೆ ಉದ್ಘಾಟನೆ ಭಾಗ್ಯವೇ ಕೂಡಿ ಬಂದಿಲ್ಲ.

ಸಾರ್ವಜನಿಕರ ಶೌಚಾಲಯವನ್ನು ಉದ್ಘಾಟನೆಗೊಳ್ಳದರ ವಿರುದ್ಧ ಅಂಗಡಿ ವರ್ತಕರು ಹಾಗೂ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಬ್ಬಾಲೆ ಗ್ರಾಮ ಪಂಚಾಯಿತಿ ಗ್ರೇಡ್ 1 ಗ್ರಾಮ ಪಂಚಾಯಿತಿ ಆದರೂ ಗ್ರಾಮ ಪಂಚಾಯಿತಿಗೆ ಖಾಯಂ ಪಿಡಿಒ ನೇಮಕವಾಗದ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಸ್ವಚ್ಛತಾ ಕೆಲಸಗಳು ಕೂಡ ಸಮರ್ಪಕವಾಗಿಲ್ಲ. ಸಾರ್ವಜನಿಕರು ಹೆಚ್ಚು ಸಂಧಿಸುವ ಆಯಕಟ್ಟಿನ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದ ಕಾರಣ ಗ್ರಾಮದ ಮೂಲಕ ಸಾಗುವವರು ಸ್ಥಳೀಯ ಪಂಚಾಯಿತಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಹೆಬ್ಬಾಲೆ ಗ್ರಾಮದ ನಿವಾಸಿ ಪರಮೇಶ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ವತಿಯಿಂದ ಕಳೆದ 6 ವರ್ಷಗಳ ಹಿಂದೆ ರೂ. 4 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯ ಆರು ವರ್ಷಗಳ ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ.ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ.ಪಾಳು ಬಿದ್ದ ಶೌಚಾಲಯದಲ್ಲಿ ಈ ಹಿಂದೆ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.ಹಾಗಾಗಿ ಈ ಕಟ್ಟಡವನ್ನು ಬಳಸದೇ ಕಡೆಗಣಿಸಿದ ಪರಿಣಾಮ ಕಟ್ಟಡದ ಗೋಡೆಗಳು ಬಿರುಕುಗೊಂಡಿವೆ ಎಂದು ಪರಮೇಶ್ ದೂರಿದರು.

ಪಂಚಾಯಿತಿಗೊಬ್ಬರೇ ಪೌರ ಕಾರ್ಮಿಕರು :

ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಈ ಹೆಬ್ಬಾಲೆ ಗ್ರೌಂಡ್ 1ಪಂಚಾಯಿತಿ ಸುತ್ತಲೂ ವಿಶಾಲವಾಗಿ ಬೆಳೆದಿದೆ. ಬೆಳೆಯುತ್ತಲೇ ಇದೆ.ಆದರೆ ಅಭಿವೃದ್ದಿ ಮಾತ್ರ ಶೂನ್ಯವಾಗಿದೆ. ಸ್ವಚ್ಛತೆಗೆ ಕೇವಲ ಓರ್ವ ಪೌರ ಕಾರ್ಮಿಕರಿದ್ದಾರೆ.ಆದ್ದರಿಂದ ಹೆಚ್ಚುವರಿ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರದ ಸಂತೆ ಮಾರುಕಟ್ಟೆಯೂ ನಡೆಯುತ್ತಿದ್ದು ಅದೂ ಕೂಡ ಸ್ವಚ್ಛತೆ ಇಲ್ಲದೆ ಸೊರಗುತ್ತಿದ್ದು ಮುಂದಿನ ದಿನಗಳಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿಗೆ ಕಾಯಂ ಪಿಡಿಓ ನೇಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ:ಕೆ.ಆರ್ ಗಣೇಶ್ ಕೂಡಿಗೆ