ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸೋಣ ಬನ್ನಿ! ಪ್ಲಾಸ್ಟಿಕ್ ಮುಕ್ತ ಸಮಾಜ ಕಟ್ಟೋಣ ಬನ್ನಿ!! ಇಂದು ವಿಶ್ವ ಪರಿಸರ ದಿನ

Jun 5, 2025 - 00:33
 0  25
ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸೋಣ ಬನ್ನಿ!  ಪ್ಲಾಸ್ಟಿಕ್ ಮುಕ್ತ ಸಮಾಜ ಕಟ್ಟೋಣ ಬನ್ನಿ!!  ಇಂದು ವಿಶ್ವ ಪರಿಸರ ದಿನ
ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸೋಣ ಬನ್ನಿ!  ಪ್ಲಾಸ್ಟಿಕ್ ಮುಕ್ತ ಸಮಾಜ ಕಟ್ಟೋಣ ಬನ್ನಿ!!  ಇಂದು ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ 5ರಂದು ಆಚರಿಸಲಾಗುತ್ತದೆ. ಇದು ಪರಿಸರ ಸಂರಕ್ಷಣೆ ಹಾಗೂ ಜಾಗೃತಿಗಾಗಿ ಆಚರಿಸಲ್ಪಡುವ ಗ್ಲೋಬಲ್ ಕಾರ್ಯಕ್ರಮ.1972 ರಲ್ಲಿ ಸ್ಟೋಕ್ಹೋಮ್ (Stockholm), ಸ್ವೀಡನ್‌ನಲ್ಲಿ ನಡೆದ ಪರಿಸರ ಕುರಿತು ಮೊದಲ ಸಮ್ಮೇಳನ (United Nations Conference on the Human Environment) ಸಮಯದಲ್ಲಿ ಪ್ರತಿ ವರ್ಷ ಜೂನ್ ೫ರಂದು ವಿಶ್ವ ಪರಿಸರ ದಿನವನ್ನು ಸ್ಥಾಪಿಸಲಾಯಿತು.

ಅಂದಿನಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸುತ್ತಾ ಬರುತ್ತಿದೆ.ವಿಪರ್ಯಾಸವೆಂದರೆ ವಿಶ್ವವ್ಯಾಪಿ ನಡೆಯುವ ಈ ಆಚರಣೆಯು ಇತ್ತೀಚಿಗೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿದೆ.ಅದರ ಉದ್ದೇಶಗಳು, ಸಂಪೂರ್ಣ ಮರೆತಂತೆ ಕಾಣುತ್ತಿದೆ.ವಿಶ್ವದಲ್ಲಿ ಮಾನವ ರಾಶಿಗಳಿಗಿಂತಲೂ ಹಸಿರು ಹೆಚ್ಚಿರುವುದು.ಆದರೆ ಸ್ವಾರ್ಥಿಗಳಾದ ಮಾನವರು ತಮ್ಮ ಜೀವಕ್ಕೆ ಕಾರಣವಾದ ಅಂಶವನ್ನು ಬುಡಮೇಲು ಮಾಡುವ ಕಡೆ ನಿಸ್ಸೀಮನಾಗಿದ್ಧಾನೆ.ಕಳೆದ ಹಲವು ವರ್ಷಗಳ ಹಿಂದೆ ಪರಿಸರ ಉಳಿವಿಗಾಗಿ ಅದೆಷ್ಟೋ ಹೋರಾಟಗಳು,ಬಲಿದಾನಗಳು ನಡೆದಿವೆ. ಉದಾಹರಣೆಗೆ ಸೈಲೆಂಟ್ ವ್ಯಾಲಿ ಚಳವಳಿ– 1970, ಅಪ್ಪಿಕೋ ಚಳವಳಿ–1983,ನರ್ಮದಾ ಬಚಾವೊ ಆಂದೋಲನ- 1985,ಚಿಪ್ಕೋ ಚಳವಳಿ -1973 ಮುಂತಾದವುಗಳು.ಈ ಚಳುವಳಿ ಉದ್ದೇಶ ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸುವ ಹಾಗೂ ಅವುಗಳ ಮೇಲೆ ಮಾನವನಿಂದ ಉಂಟಾಗುವ ಹಾನಿಗಳನ್ನು ತಡೆಯುವುದಾಗಿದೆ.

ಒಂದು ಕಡೆ ಸಾಲುಮರದ ತಿಮ್ಮಕ್ಕ ನಂತಹ ಪರಿಸರ ಪ್ರೇಮಿಗಳು ತಮ್ಮ ಮಕ್ಕಳಿಗಿಂತ ವೃಕ್ಷಗಳನ್ನು ಪೋಷಿಸುತ್ತಿದ್ದಾರೆ. ಮತ್ತೊಂದೆಡೆ ತಮ್ಮ ಮಕ್ಕಳಿಗಾಗಿ ಪರಿಸರದ ಮಾರಣ ಹೋಮವು ಮುಚ್ಚು ಮರೆ ಇಲ್ಲದೆ ನಡೆಯುತ್ತಿದೆ.ಕೇವಲ ಒಂದು ಗಳಿಗೆಯ ಆನಂದಕ್ಕಾಗಿ ಇಡೀ ತಲೆಮಾರಿನ ಜೀವನದ ಬೇರನ್ನು ನಾಶಪಡಿಸುವ ಕ್ರೂರ್ಯ ಕೃತ್ಯವನ್ನು ಮನುಷ್ಯ ಮಾಡುತ್ತಿದ್ದಾನೆ.ಇದನ್ನು ತಪ್ಪಿಸಲು ಬೇಕಾಗಿ ಸರ್ಕಾರ ಹಲವಾರು ಕಾನೂನು ತಂದರು ಕೂಡ ಅದನ್ನು ಸರಿಯಾದ ರೀತಿಯಲ್ಲಿ ಚಾಲ್ತಿಗೆ ತರವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಡವಿದೆ.ವಾಯು ಮಾಲಿನ್ಯ, ಜಲಮಾಲಿನ್ಯ,ಭೂ ಮಾಲಿನ್ಯ ಎಲ್ಲವೂ ವಿಶ್ವದ,ದೇಶದ, ರಾಜ್ಯದ,ಮಹಾನಗರಗಳಲ್ಲಿ ತುಂಬಿಕೊಂಡಿದೆ.ಗಗನಚುಂಬಿ ಕಟ್ಟಡಗಳನ್ನು ಕಟ್ಟಲು ಬೇಕಾಗಿ ಅದೆಷ್ಟೋ ಏಕರೆ ಗಟ್ಟಲೆ ವೃಕ್ಷ ಸಂಪತ್ತನ್ನು ನಾಶಪಡಿಸಿಯಾಗಿದೆ.

ಆದ್ದರಿಂದ ಮಾನವ ತನ್ನ ಸ್ವಾರ್ಥಿತನವನ್ನು ಬಿಟ್ಟು ಪ್ರತಿಯೊಂದು ಮರಕ್ಕೆ ಕೊಡಲಿ ಹಾಕುವ ವೇಳೆ ಸ್ವಲ್ಪ ಚಿಂತಿಸಿ,ನಮ್ಮ ಉಸಿರನ್ನು ನಾವು ಕಡಿಯುತ್ತಿದೆ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು.ಮುಂದಿನ ನಮ್ಮ ತಲೆಮಾರು ಆಕ್ಸಿಜನ್ ಸಿಲಿಂಡರ್ ಬೆನ್ನ ಹಿಂದೆ ಹಾಕಿ ನಡೆದಾಡುವ ಕಾಲವು ಸನಿಹವಾಗುತ್ತಿದೆ.

ಪ್ರಪಂಚದಲ್ಲಿನ ಹಲವಾರು ಜೀವರಾಶಿಗಳು ಮರಗಳನ್ನು ಪರಿಸರವನ್ನು ಅವಲಂಬಿಸಿ ಜೀವಿಸುತ್ತಿದೆ.ಅದನ್ನು ನಾವು ಮರೆಯಬಾರದು.ಈ ವರ್ಷದ ಪರಿಸರ ಧ್ಯೇಯ ವಾಕ್ಯ *"beat plastic polution ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸಿ"* ಎಂಬುದಾಗಿದೆ.ಈ ಸಂಕಲ್ಪವನ್ನು ನಮ್ಮ ಪ್ರತಿನಿತ್ಯದ ಜೀವನದಲ್ಲಿ ಪಾಲಿಸೋಣ. ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಕಟ್ಟೋಣ.ಹಸಿರೇ ಉಸಿರು ಎಂಬುದನ್ನು ಸಹ ನಾವು ನೆನಪಿನಲ್ಲಿಡಬೇಕು.ಆದ್ದರಿಂದ ನಮ್ಮ ಹಾಗೂ ನಮ್ಮ ಮುಂದಿನ ತಲೆಮಾರಿನ ಬದುಕನ್ನು ಸುಗಮಗೊಳಿಸಲು ಪರಿಸರ ಸಂರಕ್ಷಣೆಯ ಪಣವನ್ನು ತೊಡೋಣ.ಪರಿಸರ ಸಂರಕ್ಷಣೆ ನಮ್ಮಿಂದ ಸಾಧ್ಯವಾಗದಿದ್ದರೂ ಪರಿಸರ ನಾಶ ಮಾಡದೇ ಇರೋಣ.ಸಾರಾಂಶವಾಗಿ, ಪರಿಸರ ದಿನ 2025 ಹೇಳುವುದೇನೆಂದರೆ ಭೂಮಿ ಕೇವಲ ನಮ್ಮದೇ ಅಲ್ಲ, ಭವಿಷ್ಯದ ಪೀಳಿಗೆಗಳ ಹಕ್ಕುಗೂ ಕೂಡ. ಹೀಗಾಗಿ, ನಾವು ಪರಿಸರ ರಕ್ಷಣೆಗೆ ಬದ್ಧರಾಗಬೇಕು, ಜವಾಬ್ದಾರಿಯುತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಪರಿಸರಶಾಸ್ತ್ರದ ಜ್ಞಾನವನ್ನು ಸಾಮಾಜಿಕ ಆಯಾಮದ ಭಾಗವನ್ನಾಗಿ ಮಾಡಬೇಕು.ಪರಿಸರ ಉಳಿಸೋಣ, ಭವಿಷ್ಯವನ್ನು ರಕ್ಷಿಸೋಣ.

ಬರಹ: ಆಶಿಕ್ ನಲ್ವತೇಕರೆ,ಕೊಡಗು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0