ಶನಿವಾರಸಂತೆ- ಕೊಡ್ಲಿಪೇಟೆ:ರಸ್ತೆ ಬದಿಯ ಬೃಹತ್ ಒಣಮರಗಳ ತೆರವಿಗೆ ಒತ್ತಾಯ

May 11, 2025 - 10:16
 0  46
ಶನಿವಾರಸಂತೆ- ಕೊಡ್ಲಿಪೇಟೆ:ರಸ್ತೆ ಬದಿಯ ಬೃಹತ್ ಒಣಮರಗಳ ತೆರವಿಗೆ ಒತ್ತಾಯ

ಮಡಿಕೇರಿ: ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಸೇರಿದಂತೆ ಅನೇಕ ಈ ಭಾಗದ ರಸ್ತೆ ಬದಿಗಳಲ್ಲಿ ಬೃಹತ್ತಾದ ಒಣಗಿಹೋಗಿರುವ ಮರಗಳು ನಿಂತಿದ್ದು ಯಾವ ಕ್ಷಣದಲ್ಲಾದರೂ ಬಿದ್ದುಹೋಗುವ ಸಾಧ್ಯತೆ ಇದೆ. ಈ ರಸ್ತೆಯಲ್ಲಿ ಸಂಚರಿಸುವವರು ಪ್ರಾಣ ಕೈಯಲ್ಲಿ ಹಿಡಿದು ಸಂಚಾರಿಸುವ ಪರಿಸ್ಥಿತಿ ಎದುರಾಗಿದೆ.ಈ ಭಾಗದಲ್ಲಿ ಅನೇಕ ಒಣ ಮರ ಈಗಾಗಲೆ ಸಂಪರ್ಣೂವಾಗಿ ಒಣಗಿಹೋಗಿದೆ.ಕೆಲವು ರಸ್ತೆ ಬದಿಯ ಮರಗಳ ಬುಡಭಾಗದಲ್ಲಿ ಅರ್ಧದಷ್ಟು ತಿರುಳು ಉದುರಿ ಹೋಗಿರುವುದರಿಂದ ಮರ ಯಾವಕ್ಷಣದಲ್ಲಾದರೂ ಬಿದ್ದುಹೋಗುವ ಸಾಧ್ಯತೆ ಇದೆ. ಒಣಗಿರುವ ಕೆಲವು ಗ್ರಾಮೀಣ ಭಾಗದಲ್ಲಿ ಕೆಲವು ಮರಗಳು ವಾಸದ ಮನೆಗಳ ಮುಂಭಾಗದಲ್ಲಿದ್ದರೆ, ಮತ್ತೊಂದು ಕಡೆಯಲ್ಲಿ ಒಣಗಿದ ಮರದ ಸಮೀಪವೇ 11 ಕೆವಿ ವಿದ್ಯುತ್ ಮಾರ್ಗ ಹಾದುಹೋಗಿದೆ. ಒಂದುವೇಳೆ ಒಣಗಿರುವ ಈ ಮರ ಯಾವಕ್ಷಣದಲ್ಲಾದರೂ ಕೆಲವರ ಮನೆಗಳ ಮೇಲೆ ಅಥವಾ ವಿದ್ಯುತ್ ಮಾರ್ಗದ ತಂತಿಯ ಮೇಲೆ ಬಿದ್ದುಹೋಗುವ ಸಾಧ್ಯತೆ ಇದೆ. ಮುಖ್ಯರಸ್ತೆ ಮೂಲಕ ಪ್ರತಿದಿನ ಬಸ್ಸುಗಳು ಸೇರಿದಂತೆ ನೂರಾರು ವಾಹನಗಳು ಓಡಾಡುತ್ತವೆ. ಇದೀಗ ಒಣಗಿ ಹೋಗಿರುವ ಮರದಿಂದ ಸಾರ್ವಜನಿಕವಾಗಿ ಅಪಾಯವಾಗಲಿದೆ, ಈಗ ಕೆಲವರು ವಾಸದಮನೆಗಳ ಮೇಲೆ ಒಣಗಿದ ಮರ ಯಾವ ಕ್ಷಣದಲ್ಲಾದರೂ ಬಿದ್ದುಹೋಗಬಹುದೆಂದು ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದ್ದರು ಅದು ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಹೇಳುತ್ತಾರೆ.

ಕೆಲವು ಶಾಲಾ ಕಾಲೇಜು ಮಕ್ಕಳು ಕಾಲ್ನಡಿಗೆಯಲ್ಲಿ ಸಂಚಾರಿಸುವ ಮಾರ್ಗದಲ್ಲೂ ಇಂತಹ ಒಣಗಿದ ಮರಗಳಿದ್ದು ಇದರಿಂದ ಶಾಲಾ ಮಕ್ಕಳು ಪ್ರಾಣ ಭಯದಲ್ಲೇ ಸಂಚಾರುಸುವಂತಾಗಿದೆ ಎಂದು ಫ್ರಾನ್ಸಿಸ್ ಡಿಸೋಜ ಹೇಳಿದರು.ಅನೇಕ ಸಂದರ್ಭದಲ್ಲಿ ಆಸ್ಪತೆಗೆ ಅನಾರೋಗ್ಯದಿಂದ ರೋಗಿಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಳೆ ಗಾಳಿಗೆ ಅಲ್ಲಲ್ಲಿ ಮರಗಳು ಈ ಭಾಗದಲ್ಲಿ ರಸ್ತೆಗೆ ಬಿದ್ದಿದೆ.ಇದರಿಂದ ಆಸ್ಪತ್ರೆ ಸೇರುವ ಮುನ್ನ ರೋಗಿಯ ಪ್ರಾಣ ಹೋಗಿರುತ್ತದೆ. ಇಲಾಖೆಗೆ ಎಲ್ಲಾ ಸಮಸ್ಯೆಗಳು ಗೊತ್ತಿದ್ದರೂ ಸಹ ಜಾಣ ಮೌನವಹಿಸಿರುವುದು ದುರಂತ ಎಂದು ಅವರು ಹೇಳಿದರು.

ಮರ ತೆರವಿಗೆ ಅರ್ಜಿ ಸಲ್ಲಿಸಿದರು ಸಹ ಅದನ್ನು ಸಂಬಂಧ ಪಟ್ಟ ಅರಣ್ಯ ಇಲಾಖೆ ತೆರವುಗೊಳಿಸಲು ಮುಂದಾಗುತ್ತಿಲ್ಲ. ತೆರವುಗೊಳಿಸಲು ಜಿಲ್ಲಾ ಅರಣ್ಯ ಅಧಿಕಾರಿಯವರ ಪರವಾನಿಗೆಬೇಕಾಗಿದ್ದು ಅವರಿಗೆ ಅರ್ಜಿ ತಲುಪುವಷ್ಟರಲ್ಲಿ ಮರ ನೆಲಕ್ಕುರುಳಿರುತ್ತದೆ.ಆ ರೀತಿಯ ಪರಿಸ್ಥಿತಿ ನಾಗರಿಕದ್ದು. ಇನ್ನಾದರೂ ಎಚ್ಚೆತು ಕ್ರಮಕ್ಕೆ ಮುಂದಾಗಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ‌.

ಈಗಾಗಲೆ ಒಣಗಿಹೋಗಿರುವ ಬೃಹತ್‌ಕಾರದ ಮರವನ್ನು ಸಂಬಂಧಪಡುವ ಲೋಕೋಪಯೋಗಿ ಇಲಾಖೆಯವರಾಗಲಿ, ಅರಣ್ಯ ಇಲಾಖೆಯವರಾಗಲಿ ಮತ್ತು ವಿದ್ಯುತ್ ಇಲಾಖೆಯವರಾಗಲಿ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಮಳೆಗಾಲ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿಸಾರ್ವಜನಿಕವಾಗಿ ಅಪಾಯವಾಗುವ ಮುಂಚೆ ಎಚ್ಚೆತ್ತುಕೊಂಡು ಮರವನ್ನು ತೆರವುಗೊಳಿಸಿ ಮುಂದಾಗುವ ಅಪಾಯವನ್ನು ತಪ್ಪಿಸಬೇಕಾಗಿದೆ.

     ಉಮಾಶಂಕರ್, ಶನಿವಾರಸಂತೆ ಕಾಫಿ ಬೆಲೆಗಾರರ ಸಂಘದ ಅಧ್ಯಕ್ಷ.

ಅನೇಕ ಬೆಲೆಬಾಳುವ ದೊಡ್ಡ ಮರಗಳು ರಸ್ತೆಗೆ ಬೀಳುವ ಸ್ಥಿತಿಯಲ್ಲಿ ಒಣಗಿ ನಿಂತಿದೆ.ಇದೀಗ ಮಳೆ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿ ಕೆಲ ಭಾಗದಲ್ಲಿ ಒಣಗಿದ ಮರದ ರೆಂಬೆಗಳು ರಸ್ತೆಗೆ ಬೀಳುತ್ತಿದೆ. ಇದರಿಂದ ಅನೇಕ ಬಾರಿ ರಸ್ತೆ ಬಂದ್ ಆಗಿದೆ. ಇನ್ನಾದರೂ ಎಚ್ಚೆತ್ತು ಮರ ತೆರವುಗೊಳಿಸಲಿ.

         ವೇದಕುಮಾರ್,ಕೊಡ್ಲಿಪೇಟೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷ.

ಒಣ ಮರ ತೆರವು ಮಾಡಲು ಸಂಬಂಧ ಪಟ್ಟ ಇಲಾಖೆಗೆ ಮನವಿ ನೀಡಿದರು ಪ್ರಯೋಜನವಾಗುತ್ತಿಲ್ಲ, ಅರ್ಜಿ ಕೊಟ್ಟರೆ ಅವರೇ ಕಡಿದು ತಂದು ಇಲಾಖೆಯ ಮುಂಭಾಗ ಹಾಕಲು ತಿಳಿಸುತ್ತಾರೆ.ಈ ವ್ಯವಸ್ಥೆ ಬದಲಾಗಬೇಕು. ರಸ್ತೆ ಬದಿಯ ಒಣಗಿದ ಮರಗಳನ್ನು ತಕ್ಷಣ ತೆರವುಗೊಳಿಸಬೇಕು.ಶಾಲಾ ಕಾಲೇಜು ಮಕ್ಕಳು ಕಾಲ್ನಡಿಗೆಯಲ್ಲಿ ತೆರಳುವ ರಸ್ತೆ ಬದಿ ಅನೇಕ ಮರಗಳು ಒಣಗಿದೆ ಹಾಗೂ ಬಾಗಿದೆ.

      -ಪ್ರಾನ್ಸಿಸ್ ಡಿಸೋಜ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ, ಸೋಮವಾರಪೇಟೆ ತಾಲೂಕು.

ಕೊಡ್ಲಿಪೇಟೆಯಿಂದ ಬಾಣಾವರ ಪ್ರಮುಖ ರಸ್ತೆ ಬದಿಯಲ್ಲಿ ಅನೇಕ ಒಣಗಿದ ಮರಗಳು ಅನೇಕ ವರ್ಷಗಳಿಂದ ಇದೆ‌‌. ಸಂಬಂಧ ಪಟ್ಟ ಅಧಿಕಾರಿಗಳು ಇದೆ ರಸ್ತೆಯಲ್ಲಿ ತೆರಳುತ್ತಾರೆ ಆದರೆ ಈ ಮರಗಳನ್ನು ತೆರವುಗೊಳಿಸಲು ಮನಸು ಮಾಡುತ್ತಿಲ್ಲ.

          ಹನೀಫ್, ಬ್ಯಾಡಗೋಟ್ಟ ಗ್ರಾಮ ಪಂಚಾಯತ್ ಸದಸ್ಯ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0