ನ.19ರಿಂದ ನಾಪೋಕ್ಲುವಿನಲ್ಲಿ ಎಸ್ ಎನ್ ಡಿ ಪಿ ವತಿಯಿಂದ ಸೌಹಾರ್ಧ ಕ್ರೀಡಾಕೂಟ: ನ.23ಕ್ಕೆವಿಜೃಂಭಣೆಯ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ

ನ.19ರಿಂದ ನಾಪೋಕ್ಲುವಿನಲ್ಲಿ ಎಸ್ ಎನ್ ಡಿ ಪಿ ವತಿಯಿಂದ ಸೌಹಾರ್ಧ ಕ್ರೀಡಾಕೂಟ: ನ.23ಕ್ಕೆವಿಜೃಂಭಣೆಯ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲುವಿನ ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ ಎನ್ ಡಿ ಪಿ) ವತಿಯಿಂದ 171ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆಯನ್ನು ನ.19ರಿಂದ 23ರರ ವರೆಗೆ ವಿವಿಧ ಸೌಹಾರ್ದ ಕ್ರೀಡಾಕೂಟ ಆಯೋಜನೆಯೊಂದಿಗೆ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಆಚರಣೆ ಸಮಿತಿ ಅಧ್ಯಕ್ಷ ಶ್ರೀಧರ್ ತಿಳಿಸಿದರು.

ನಾಪೋಕ್ಲುವಿನ ಎಸ್‌ಎನ್ ಡಿಪಿ ಕಚೇರಿಯಲ್ಲಿ ಕರೆಯಲಾದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ನ. 23ರಂದು ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಜಯಂತಿ ಹಾಗೂ ಓಣಂ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಇದರ ಪ್ರಯುಕ್ತ ನ.19ರಿಂದ 22ರ ವರೆಗೆ ಸರ್ವ ಧರ್ಮದವರಿಗೆ ಕ್ರಿಕೆಟ್,ಹಗ್ಗಜಗ್ಗಾಟ ಹಾಗೂ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ನ.23 ರಂದು ನಾಪೋಕ್ಲು ಮಾರುಕಟ್ಟೆ ಆವರಣದಿಂದ ಬೆಳಿಗ್ಗೆ 10 ಗಂಟೆಗೆ ಪ್ರಸಿದ್ಧ ಕೇರಳದ ಚಂಡೆವಾದ್ಯಗಳೊಂದಿಗೆ ಪಟ್ಟಣದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಸಾಗಿ ಶಾಲಾ ಮೈದಾನಕ್ಕೆ ಬರಲಿದೆ ಎಂದರು.

ನ.19 ರಂದು ಬೆಳಿಗ್ಗೆ 9.30 ಗಂಟೆಗೆ ನಡೆಯುವ ಸೌಹಾರ್ಧ ಕ್ರೀಡಾಕೂಟವನ್ನು ಎಸ್‍ಎನ್‍ಡಿಪಿ ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಅಧ್ಯಕ್ಷ ವಿ.ಕೆ.ಲೋಕೇಶ್ ಉದ್ಘಾಟಿಸಲಿದ್ದಾರೆ.ನ.23 ರಂದು ಬೆಳಿಗ್ಗೆ 10 ಗಂಟೆಗೆ ಮೆರವಣಿಗೆಯನ್ನು ನಾಪೋಕ್ಲು ಎಸ್ ಎನ್ ಡಿ ಪಿ ಸಂಘಟನಾ ಕಾರ್ಯದರ್ಶಿ ರಿತೇಶ್ (ಚಿನ್ನ) ಉದ್ಘಾಟಿಸಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣಅವರು ಉದ್ಘಾಟಿಸುವರು. ಕಳoಚೇರಿ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಆಶೀರ್ವಚನ ನೀಡಲಿರುವರು. ಎಸ್.ಎನ್.ಡಿ.ಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ.ಲವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಎಸ್ ಎನ್.ಡಿ.ಪಿ ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಅಧ್ಯಕ್ಷ ವಿ.ಕೆ.ಲೋಕೇಶ್, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ,ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಕಾರ್ಯದರ್ಶಿ ಪ್ರೇಮಾನಂದ, ನಾಪೋಕ್ಲು ಟೌನ್ ಜುಮ್ಮಾ ಮಸೀದಿಯ ಗುರುಗಳಾದ ಹಾಫಿಲ್ ಶೌಕತ್ ಅಲಿ ಸಖಾಫಿ, ವಿರಾಜಪೇಟೆ ಸಂತ ಅನ್ನಮ್ಮ ಚರ್ಚ್ ನ ಧರ್ಮಗುರು ಜೇಮ್ಸ್ ಡೊಮೆನಿಕ್ ಫಾದರ್, ಕೊಡಗು ಎಸ್ ಎನ್ ಡಿ ಪಿ ಯೂನಿಯನ್ ಮಹಿಳಾ ಘಟಕದ ಅಧ್ಯಕ್ಷೆ ರೀಷಾ ಸುರೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಆರ್ ಎಂ ಸಿ ಮಾಜಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ,ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಎ.ಹಂಸ, ಕಾಫಿಬೆಳೆಗಾರ ಅರೆಯಡ ರತ್ನಾ ಪೆಮ್ಮಯ್ಯ, ಕೊಡಗು ಜಿಲ್ಲಾ ಕಾಂಗ್ರೆಸ್ ಡಿಸಿಸಿ ಉಪಾಧ್ಯಕ್ಷ ಹಾಗೂ ನಾಪೋಕ್ಲು ಜಮಾಅತ್ ಅಧ್ಯಕ್ಷರಾದ ಎಂ. ಎಚ್ ಅಬ್ದುಲ್ ರಹ್ಮಾನ್, ಪಂಚಾಯತ್ ಸದಸ್ಯರು ಕಾಳೆಯಂಡ ಸಾಬ ತಿಮ್ಮಯ್ಯ,ಕಾಫಿ ಬೆಳೆಗಾರರು ವಕೀಲರಾದ ಕೂಡಿಮಣಿಯಂಡ ಶರಣು ಕುಟ್ಟಪ್ಪ, ಜೆಡಿಎಸ್ ಮುಖಂಡ ಮನ್ಸೂರು ಆಲಿ ಎಂ ಎ, ನಾಪೋಕ್ಲು, ಕೊಳಕೇರಿಯ ಕಾಫಿ ಬೆಳೆಗಾರ ಎ.ಕೆ.ಹಾರಿಸ್, ನಾಪೋಕ್ಲು ಉದ್ಯಮಿ ಮಂಡಿರ ಕಿಶೋರ್ ತಮ್ಮಯ್ಯ, ಕಾಫಿ ಬೆಳೆಗಾರ ಹಾಗೂ ದಾನಿಗಳಾದ ಬಿದ್ದಾಟಂಡ ಟಿ. ಕಾರ್ಯಪ್ಪ, ಭಾಗಮಂಡಲದ ಉದ್ಯಮಿಗಳಾದ ರಾಜೀವ್, ಜಯನ್ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

 ಸೌಹಾರ್ಧ ಕ್ರೀಡಾ ಕೂಟದ ಕ್ರಿಕೆಟ್ ಪಂದ್ಯಾಟದ ವಿಜೇತ ತಂಡಕ್ಕೆ ಪ್ರಥಮ ಬಹುಮಾನ 33,333 ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 15,555ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಗುವುದು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ವಿಜೇತರಿಗೆ 30,000 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 15,000 ನಗದು ಹಾಗೂ ಟ್ರೋಫಿ ವಿತರಿಸಲಾಗುವುದು.

ಕಾರ್ಯಕ್ರಮದ ಅಂಗವಾಗಿ ಸಂಜೆ 7ಗಂಟೆಗೆ ಪ್ರಸಿದ್ಧ ಮಿಮಿಕ್ರಿ ಕಲಾವಿದರಾದ ಚಾಲಕುಡಿ ರಂಜು ನೇತೃತ್ವದ 7ಬೀಟ್ಸ್ ಆರ್ಕೆಸ್ಟ್ರಾ ಕ್ಯಾಲಿಕೆಟ್ ಇವರಿಂದ ಗಮನ ಸೆಳೆಯುವ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಧರ್ ಮಾಹಿತಿ ನೀಡಿದರು. ಕ್ರೀಡಾ ಕೂಟದಲ್ಲಿ ಭಾಗವಹಿಸುವ ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಮೊ.ನಂ.9741339029, 8310265327. ಸುದ್ದಿ ಗೋಷ್ಟಿಯಲ್ಲಿ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ ಲವ, ಕಾರ್ಯದರ್ಶಿ ಪಿ.ಸಿ. ಕಿಶೋರ್, ಸಹ ಕಾರ್ಯದರ್ಶಿ ಎಂ.ಆರ್.ಅಜಿತ್ ಉಪಸ್ಥಿತರಿದ್ದರು.