ಸಿದ್ದಾಪುರ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 1.11 ಕೋಟಿ ನಿವ್ವಳ ಲಾಭ

ಸಿದ್ದಾಪುರ : ಗುಹ್ಯ, ಕರಡಿಗೋಡು, ಸಿದ್ದಾಪುರ ಸುತ್ತಮುತ್ತಲ ಸದಸ್ಯರ ಸಹಕಾರದಿಂದ ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಗತಿಯತ್ತ ಸಾಗುತ್ತಿದ್ದು, 2024 -25ನೇ ಸಾಲಿನ ಪ್ರಸಕ್ತ ವರ್ಷ 1.11ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ. ಎಸ್ ವೆಂಕಟೇಶ್ ತಿಳಿಸಿದ್ದಾರೆ.
ಸಿದ್ದಾಪುರ ಎಂ.ಜಿ.ರಸ್ತೆಯಲ್ಲಿರುವ ಸಂಘದ ಕಟ್ಟಡ ಸಭಾಂಗಣದಲ್ಲಿ ನಡೆದ 95ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ ಗುಹ್ಯ, ಕರಡಿಗೋಡು, ಸಿದ್ದಾಪುರ ಈ ಮೂರು ಗ್ರಾಮಗಳ ವ್ಯಾಪ್ತಿಯನ್ನೊಳಗೊಂಡ ಗುಹ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬಂಡವಾಳ ರೂ. 2.55 ಕೋಟಿಗಳಿದ್ದು, ಠೇವಣಿಗಳು ರೂ.47.09 ಕೋಟೆ ಹಾಗೂ ಸದಸ್ಯರುಗಳಿಗೆ ಕೃಷಿ ಹಾಗೂ ಕೃಷಿಯೇತರ ಸಾಲ ಸೇರಿ ಒಟ್ಟು ರೂ. 36.57 ಕೋಟೆ ಹೊರಬಾಕಿ ಸಾಲವಿರುತ್ತದೆ. ಸಂಘದಲ್ಲಿ ದುಡಿಯುವ ಬಂಡವಾಳ ರೂ. 60.96 ಕೋಟಿ ಹಾಗೂ 2024-25 ನೇ ಸಾಲಿನಲ್ಲಿ ರೂ. 258.93 ಕೋಟಿ ವ್ಯವಹಾರ ನಡೆಸಲಾಗಿದೆ.
ಪ್ರಸಕ್ತ ವರ್ಷ ರೂ. 1.11 ಕೋಟಿ ಲಾಭ ಗಳಿಸಿರುತ್ತದೆ. ಇದರಿಂದ ಸಂಘದ ಸದಸ್ಯರುಗಳಿಗೆ ಶೇ20. ಡಿವಿಡೆಂಡ್ ನೀಡಲು ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ ಡೀಸಲ್/ ಪೆಟ್ರೋಲ್ ವ್ಯಾಪಾರದಲ್ಲಿ ರೂ. 21.17 ಕೋಟಿ ವ್ಯವಹಾರ ನಡೆಸಲಾಗಿದೆ. ಸಂಘದಿಂದ ಈ ಬಾರಿ ಸದಸ್ಯರುಗಳಿಗೆ ಸಂಘದಲ್ಲಿ ವ್ಯವಹಾರ ನಡೆಸಿರುವುದನ್ನು ಗುರುತಿಸಿ ಗುಹ್ಯ ಗ್ರಾಮದಿಂದ ಶ್ರೀಮತಿ. ಯಶೋದ ಟಿ ಪಿ, ಸಿದ್ದಾಪುರ ಗ್ರಾಮದಿಂದ ದೇವಣಿರ ವಿಜಯ ಮತ್ತು ಕರಡಿಗೋಡು ಗ್ರಾಮದಿಂದ ಕುಕ್ಕನೂರು ಆರ್ ಪುರುಷೋತ್ತಮ ಮತ್ತು ಕೃಷಿಯಲ್ಲಿ ಉತ್ತಮ ಕೃಷಿಕನಾಗಿ ಸಾಧನೆ ಮಾಡಿದ ಗುಹ್ಯ ಗ್ರಾಮದ ರೋಶನ್ ಜಾರ್ಜ್ ಇವರುಗಳನ್ನು ಸಂಘದ ವತಿಯಿಂದ ಮಹಾಸಭೆಯಲ್ಲಿ ಸನ್ಮಾನಿಸಿ ಕಿರುಕಾಣಿಕೆ ಗೌರವಿಸಲಾಯಿತು.
ಹಾಗು ಉತ್ತಮ ವ್ಯವಹಾರ ನಡೆಸಿದ ದುರ್ಗ ಭಗವತಿ,ನಿಸರ್ಗ, ಎಸ್ ಎನ್ ಡಿ ಪಿ ವನಿತಾ ಯುನಿಯನ್ 3 ಸ್ವಸಹಾಯ ಗುಂಪುಗಳಿಗೆ ತಲಾ ರೂ. 5 ಸಾವಿರ ಬಹುಮಾನ ನೀಡಲಾಯಿತು.
ಸಂಘದ ಸದಸ್ಯರ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದವರಲ್ಲಿ ಮೊದಲನೆಯದಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಸಂಘದ ಸದಸ್ಯ ಚಾಕೋ ಎಂಬವರ ಮಗಳು ಅನ್ನಮಿಕಲ್ ಚಾಕೋ ಅವರನ್ನ ಮಹಾಸಭೆಯಲ್ಲಿ ಪ್ರಶಸ್ತಿ ಪುರಸ್ಕಾರ ನೀಡಲಾಯಿತು. ಸಂಘವು ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ಸಿ ಅಂಕ ಪಡೆದ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ತಲಾ ರೂ. 2ಸಾವಿರ ಮತ್ತು ಪದವಿ ಹಾಗು ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ತಲಾ ರೂ.5ಸಾವಿರ ವಿತರಿಸಿರಿಸಲಾಗಿದೆ.
ಹಾಗೂ ಮರಣವೊಂದಿರುವ ಸದಸ್ಯ ಕುಟುಂಬದವರಿಗೆ ಅಂತ್ಯಕ್ರಿಯೆ ಹಣವೆಂದು ತಲಾ ರೂ. 5ಸಾವಿರ ಸಹಾಯಧನವನ್ನು ನೀಡಲಾಗಿದೆ ಎಂದರು ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಬಿಜಾಯ್, ಸದಸ್ಯರುಗಳಾದ ಕೆ.ಕೆ.ಚಂದ್ರ ಕುಮಾರ್, ಎಸ್.ಬಿ. ಪ್ರತೀಶ್ , ವಾಸು, ಚಂದ್ರನ್ , ಶೀಬು, ಪ್ರಮೀಳ ಸುನಿಲ್, ವಿ ಕೆ ಬಶೀರ್, ದೇವಯಾನಿ, ಮಿಲನ್ , ಚೆಲುವಯ್ಯ, ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಮತ್ತಿತ್ತರು ಹಾಜರಿದ್ದರು.