ಸೋಮವಾರಪೇಟೆ 10ನೇ ವರ್ಷದ ಆಟಿ ಸಂಭ್ರಮೋತ್ಸವ:ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ: ಶಾಸಕ ಡಾ.ಮಂತರ್ ಗೌಡ

ಸೋಮವಾರಪೇಟೆ 10ನೇ ವರ್ಷದ ಆಟಿ ಸಂಭ್ರಮೋತ್ಸವ:ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ: ಶಾಸಕ ಡಾ.ಮಂತರ್ ಗೌಡ

ಸೋಮವಾರಪೇಟೆ:ಶ್ರೀ ನಾರಾಯಣ ಗುರು ಸೇವಾ ಸಮಿತಿ, ತುಳುನಾಡು ಬಿಲ್ಲವ ಮಹಿಳಾ ಸಂಘ ಸೋಮವಾರಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ಆಟಿ ಸಂಭ್ರಮೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಸ್ಥಳೀಯ ಮಾನಸ ಸಭಾಂಗಣದಲ್ಲಿ ನಡೆಯಿತು.

 ಕಾರ್ಯಕ್ರಮವನ್ನು ಶಾಸಕ ಡಾ||ಮಂತರ್ ಗೌಡ ಉದ್ಘಾಟನೆ ಮಾಡಿ ಮಾತನಾಡಿ, ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡ ಬೇಕು ಎಂದರು, ಕುಲ ಬಾಂದವರು ಸಂಘಟಕರಾಗ ಬೇಕು. ಈಗಾಗಲೇ ಸೋಮವಾರಪೇಟೆ ಶ್ರೀ ನಾರಾಯಣ ಗುರು ಸೇವಾ ಸಮಿತಿ ನಿವೇಶನ ಖರೀದಿ ಮಾಡಿದ್ದು, ಆ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ 5ಲಕ್ಷ ಅನುದಾನ ನೀಡುತ್ತೇನೆ ನಂತರ ಹೆಚ್ಚಿನ ಅನುದಾನ ಕೊಡಿಸುತ್ತೇನೆ.

 ಮುಂದಿನ ವರ್ಷ ಸೋಮವಾರಪೇಟೆ ತಾಲೂಕು ನಾರಾಯಣ ಗುರು ಸೇವಾ ಸಮಿತಿಯ ಕಾರ್ಯಕ್ರಮ ಸ್ವಂತ ಕಟ್ಟಡದಲ್ಲಿ ಆಗುವಂತಾಗಬೇಕು ಎಂದರು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದ್ದರೆ ನೇರವಾಗಿ ನನ್ನನ್ನು ಭೇಟಿ ಮಾಡ ಬಹುದು ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ಸಹಕಾರ ನೀಡುತ್ತೇನೆ.ಯಾವ ಮಕ್ಕಳು ಸಹ ವಿದ್ಯಾಭ್ಯಾಸದಿಂದ ವಂಚಿತರಗಬಾರದು ಇದು ನಾರಾಯಣ ಗುರುಗಳ ತತ್ವ ಸಿದ್ದಂತ ಆಗಿತ್ತು ನಾವು ಕೇವಲ ಕಾರ್ಯಕ್ರಮ ಮಾಡಿ ಸುಮ್ಮನಾಗಬಾರದು ಅವರ ತತ್ವ ಸಿದ್ದಂತಾಗಳನ್ನು ಪಾಲಿಸಬೇಕು. ನಾವು ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿ ವಿದ್ಯೆ ಪೋಷಕರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕಲಿಸಲು ಮುಂದಾಗಬೇಕು ಯಾವುದೇ ಮಕ್ಕಳು ವಿದ್ಯೆಯಿಂದ ದೂರ ಉಳಿಯಬಾರದು ಎಂದರು.

ಕುದ್ರೋಳಿ ಗೋಕರ್ಣನಾಥೆಶ್ವರ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಮಾತನಾಡಿ ನಾರಾಯಣ ಗುರುಗಳ ತತ್ವ ಸಿದ್ದಂತಾಗಳನ್ನು ನಾವು ಪಾಲಿಸಬೇಕು, ವಿದ್ಯೆಯಿಂದ ಮಾತ್ರ ನಾವು ಉನ್ನತ ಸಾಧನೆ ಮಾಡಲು ಸಾಧ್ಯ, ಸಂಘಟನೆಯನ್ನು ಬಳಪಡಿಸಲು ಎಲ್ಲರ ಸಹಕಾರ ಅತ್ಯವಶ್ಯಕ.ಇದು ನಾರಾಯಣ ಗುರು ಸೇವಾ ಸಮಿತಿಯ ಅನೇಕರು ಉನ್ನತ ಸಾಧನೆ ಮಾಡುತ್ತಿದ್ದಾರೆ ಇವರನ್ನು ನಾವು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು.

ರಾಜ್ಯ ಶ್ರೀ ನಾರಾಯಣ ಗುರು ವಿಚಾರಣ ವೇದಿಕೆ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ ಶಿಕ್ಷಣ ಪಡೆದು ಸಾಧನೆ ಮಾಡಿ ನಮ್ಮ ಜನಾಂಗದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಸರ್ವ ಜನಾಂಗವು ಒಂದೇ ಜಾತಿ ಮಾತ ಭೇದ ಎಂದು ಕಚ್ಚಡದಿರಿ, ಇಂದು ಅನೇಕ ಸರ್ಕಾರದ ಸೌಲಭ್ಯ ಪಡೆಯಲು ನಮ್ಮ ಸಂಘಟನೆ ಪರೀತಫೀಸುತಿದ್ದ ಇದಕ್ಕೆ ಕಾರಣ ನಾವು ಸಂಘಟಕಾರಗದೆ ಇರುವುದು, ಶ್ರೀ ನಾರಾಯಣ ಗುರು ಸೇವಾ ಸಮಿತಿಯ ಎಲ್ಲಾ ಬೇರೆಬೇರೆ ಸಂಘಟಕರು ಒಂದಾಗಿ ಕೆಲವೊಂದು ಸೌಲಭ್ಯ ಪಡೆಯಲು ಹೋರಾಟ ಮಾಡಬೇಕಿದೆ.ಸಂಘಟನೆ ಬೇರೆ ಇರಬಹುದು ಆದರೆ ಈ ಎಲ್ಲಾ ಸಂಘಟನೆಯ ತತ್ವ ಸಿದ್ದಂತ ಒಂದೇ ಆಗಿದೆ ಎಂದರು.

ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ ನಾವೆಲ್ಲರೂ ಒಂದೇ ಜಾತಿ ಮತದರು ಎಂದು ದಕ್ಷಿಣ ಭಾರತಕ್ಕೆ ಸಾರಿದವರು ಶ್ರೀ ನಾರಾಯಣ ಗುರುಗಳು.ಅಂತಹ ಸಂಘಟನೆ ಇಂತಹ ಕ್ರೀಡಾಕೂಟ ಹಾಗೂ ಮಕ್ಕಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕೊಡಗು ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಲಿಂಗಪ್ಪ ಪೂಜಾರಿ,ಪ್ರವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಪದ್ಮನಾಭ,ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷರಾದ ಬಿ. ಆರ್. ಚಂದ್ರಹಾಸ ರವರು ವಹಿಸಿದ್ದರು. ಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವ ಸಲಹೆಗಾರ ಬಿ. ಎ. ಭಾಸ್ಕರ್, ಜನಕ್ಕಿ ಕನ್ವೆನ್ ಷನ್ ಹಾಲ್ ಮಾಲೀಕರಾದ ಬಿ. ಎಸ್. ಸುಂದರ್, ಸಫಾಲಿ ಬಾರ್ &ಪ್ಯಾಮಿಲಿ ರೆಸ್ಟೋರೆಂಟ್ ಮಾಲೀಕರಾದ ಬಿ. ಎಸ್ ಶ್ರೀಧರ್, ಅಲೋಕ ಬಾರ್ &ಪ್ಯಾಮಿಲಿ ರೆಸ್ಟೋರೆಂಟ್ ಮಾಲೀಕರಾದ ಕಾರ್ತಿಕ್ ಸದಾನಂದ್, , ತುಳುನಾಡ ಬಿಲ್ಲವ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಬೇಬಿ ಚಂದ್ರಹಾಸ, ಮೂಡಬಿದ್ರೆ ಆಳ್ವಾಸ್ ಕಾಲೇಜು ಉಪನ್ಯಾಸಕರಾದ ತೇಜಸ್, ಮೋಹನ್, ಕುಶಾಲನಗರ ತಾಲೂಕು ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ ಅಧ್ಯಕ್ಷ ಸುಧೀರ್, ಸುಂಟಿಕೊಪ್ಪ ಬಿಲ್ಲವ ಸೇವಾ ಸಮಾಜ ಅಧ್ಯಕ್ಷ ಮಣಿ ಮುಖೇಶ್, ನಾಪೋಕ್ಲು ಬಿಲ್ಲವ ಸಂಘದ ಅಧ್ಯಕ್ಷ ಪ್ರದೀಪ್, ಸೋಮವಾರಪೇಟೆ ನಾರಾಯಣ ಗುರು ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಂದಿರಾ ಮೊಣಪ್ಪ ಮುಂತಾದವರಿದ್ದರು.

 ಇದೇ ಸಂದರ್ಭದಲ್ಲಿ ವಿವಿಧ ಕ್ರೀಡಾಕೂಟ ನಡೆಯಿತು ಸಾಧನೆ ಮಾಡಿದ ಜನಾಂಗದ ವಿದ್ಯಾರ್ಥಿಗಳನ್ನು ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಸಾಧನೆ ಮಾಡಿದ ನಾರಾಯಣ ಗುರು ಸೇವಾ ಸಮಿತಿ ಮಕ್ಕಳನ್ನು ಗೌರವಿಸಲಾಯಿತು. ಸೋಮವಾರಪೇಟೆ ಶ್ರೀ ನಾರಾಯಣ ಗುರು ಸೇವಾ ಸಮಿತಿ ನಿರ್ದೇಶಕರು ಹಾಗೂ ತಾಲೂಕಿನ ಎಲ್ಲಾ ಬಾಗದಿಂದ, ಕುಶಾಲನಗರ ಮತ್ತು ನಾಪೋಕ್ಲು ಸುಂಟಿಕೊಪ್ಪ ಬಾಗದಿಂದ ನಾರಾಯಣ ಗುರು ಸೇವಾ ಸಮಿತಿ ಕುಟುಂಬ ಸದಸ್ಯರು ಪಾಲ್ಗೊಂಡಿದ್ದರು. ವಿಶ್ವ ಕುಂಬೂರು ಹಾಗೂ ದಿನೇಶ್ ಮಾಲಂಬಿ ಕಾರ್ಯಕ್ರಮ ನಿರ್ವಹಿಸಿದರು.

 ವರದಿ:ದಿನೇಶ್ ಮಾಲಂಬಿ