ಸೋಮವಾರಪೇಟೆ:ಎಪಿಸಿಎಂಎಸ್ ಅಧ್ಯಕ್ಷರಾಗಿ ಎನ್‌ಟಿ ಪರಮೇಶ್ ಆಯ್ಕೆ

ಸೋಮವಾರಪೇಟೆ:ಎಪಿಸಿಎಂಎಸ್ ಅಧ್ಯಕ್ಷರಾಗಿ ಎನ್‌ಟಿ ಪರಮೇಶ್ ಆಯ್ಕೆ

ಸೋಮವಾರಪೇಟೆ:ನಂ 383 ನೇ ಸೋಮವಾರಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ( ಎ ಪಿ ಸಿ ಎಂ ಎಸ್) ಇದರ ಚುನಾವಣೆ ದಿನಾಂಕ 15:11:2025 ರ ಶನಿವಾರ ನಿಗದಿಯಾಗಿತ್ತು. ಆದರೆ ಎಲ್ಲಾ ಕ್ಷೇತ್ರಗಳಿಗು ಅವಿರೋಧ ಆಯ್ಕೆ ಆದ ಕಾರಣ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣಾ ಪ್ರಕ್ರಿಯೆ ನಡೆದು ಅಧ್ಯಕ್ಷರಾಗಿ ಎನ್ ಟಿ ಪರಮೇಶ್ (ಮಹೇಶ್ ತಿಮ್ಮಯ್ಯ) ಉಪಾಧ್ಯಕ್ಷರಾಗಿ ಎಸ್ ಎ ಪ್ರತಾಪ್ ಆಯ್ಕೆಯಾಗಿದ್ದಾರೆ, ರಿಟರ್ನಿಂಗ್ ಅಧಿಕಾರಿಯಾಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಯಾದಪಿ ಡಿ ಮೋಹನ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ನಿರ್ದೇಶಕರುಗಳು: ಟಿ ಕೆ ರಮೇಶ್, ಎಂ ಸಿ ರಾಘವ, ಯು ಎಂ ಬಸವರಾಜು (ಸುಕಾಂತ್), ಸಿ ಎಸ್ ಧರ್ಮಪ್ಪ ,ಜಿ ಎಸ್ ರಾಜ್ ಕುಮಾರ್, ಪಿ ಡಿ ಮೋಹನ್ ದಾಸ್, ಸಿ ಜಿ ಮಿಥುನ್, ಎಂ ವಿ ಜೀವನ್, ಎಸ್ ಪಿ ಸುಮಿತ್ರ ,ಪಿ ಎ ಅನಿತ ಆಯ್ಕೆಯಾಗಿದ್ದಾರೆ.