ಸೋಮವಾರಪೇಟೆ ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಸೋಮವಾರಪೇಟೆ: ಮಾದಾಪುರ ಬಿ.ಚನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪಿಯು ಕಾಲೇಜಿನ ತಾಲ್ಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಸೋಮವಾರಪೇಟೆ ಕುವೆಂಪು ವಿದ್ಯಾಸಂಸ್ಥೆಯ ಬಿಟಿಸಿಜಿ ಪಿಯು ಕಾಲೇಜು ತಂಡ ಮತ್ತು ಬಾಲಕರ ವಿಭಾಗದಲ್ಲಿ ಕುಶಾಲನಗರ ವಿವೇಕಾನಂದ ಪಿಯು ಕಾಲೇಜು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದವು.
ಬಿಟಿಸಿಜಿ ಬಾಲಕಿಯರ ತಂಡ ಫೈನಲ್‌ನಲ್ಲಿ ಕೊಡ್ಲಿಪೇಟೆ ಪಿಯು ಕಾಲೇಜು ತಂಡದ ವಿರುದ್ಧ ಜಯಗಳಿಸಿತು. ವಿಜೇತ ತಂಡದ ಪರವಾಗಿ ಎಚ್.ಅರ್.ಜೀವಿತ, ಎಚ್.ಆರ್. ದಿಶಿತಾ, ಧನಲಕ್ಷ್ಮಿ, ವೈಭವಿ ಹಾಗು ಕೊಡ್ಲಿಪೇಟೆ ತಂಡದ ಪರವಾಗಿ ಯಮುನಾ, ಪುಷ್ಪಲತ ಆಟವಾಡಿದರು.
ಬಾಲಕರ ವಿಭಾಗದಲ್ಲಿ ವಿವೇಕಾನಂದ ಕಾಲೇಜು ತಂಡ, ಕುಶಾಲನಗರ ಜ್ಞಾನಭಾರತಿ ಪಿಯು ಕಾಲೇಜು ತಂಡವನ್ನು ಮಣಿಸಿತು. ವಿಜೇತ ತಂಡದ ಪರವಾಗಿ ಹೇಮಂತ್, ಅರುನ್ ಇಬ್ರಾಹಿಂ, ಧಿರೇಂದ್ರಮೋದಿ, ಹರ್ಷ, ಉಮರ್‌ಸಾದ್, ಜ್ಞಾನಭಾರತಿ ತಂಡದ ಪರವಾಗಿ ಮಹಮ್ಮದ್ ಅನ್ವರ್, ರಾಕೇಶ್, ಅಕ್ಷಯ್, ಮೋಹಿತ್ ಆಟವಾಡಿದರು. ಮಾದಪುರ ಪ್ಲಾಂರ‍್ಸ್ ಕ್ಲಬ್ ಹಾಗು ಚನ್ನಮ್ಮ ಕಾಲೇಜಿನ ಒಳಂಗಣ ಕ್ರೀಡಾಂಗಣದಲ್ಲಿ ಪಂದ್ಯಾಟಗಳು ನಡೆದವು.