ಸೋಮವಾರಪೇಟೆ:ಮಕ್ಕಳ ಹಕ್ಕು ಸಂರಕ್ಷಣೆ ಹಾಗೂ ಜಾಗೃತಿಗಾಗಿ ಜಿಲ್ಲಾಮಟ್ಟದ ಮಕ್ಕಳ ಸಂಸತ್ತು ಕಾರ್ಯಕ್ರಮ
ಸೋಮವಾರಪೇಟೆ :- ಮಕ್ಕಳ ಹಕ್ಕು ಸಂರಕ್ಷಣೆ ಹಾಗೂ ಜಾಗೃತಿಗಾಗಿ ಜಿಲ್ಲಾಮಟ್ಟದ ಮಕ್ಕಳ ಸಂಸತ್ತು ಕಾರ್ಯ ಕ್ರಮ ನಡೆಯಿತು.
ಮಕ್ಕಳ ಹಕ್ಕುಗಳ ನಿಗಾಕೇಂದ್ರ,ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು,ಯುನಿಸೆಫ್ ಹಾಗೂ ನಾವು ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಮಾತನಾಡಿ 18ವರ್ಷದ ಒಳಗಿನವರನ್ನು ಮಕ್ಕಳೆಂದು ಪರಿಗಣಿಸಲಾಗುತ್ತದೆ ಅವರಿಗೂ ಹಕ್ಕುಗಳಿವೆ ಅದು ಎಲ್ಲಾರಿಗೂ ಸಿಗುವಂತಾಗಬೇಕು ಮತ್ತು ರಕ್ಷಿಸಬೇಕೆಂದು ತಿಳಿಸಿದರು.
ಎಲ್ಲಾ ಮಕ್ಕಳ ಬದುಕು,ರಕ್ಷಣೆ,ಅಭಿವೃದ್ಧಿ ಹಾಗೂ ಭಾಗವಹಿಸುವ ಹಕ್ಕುಗಳನ್ನು ಖಾತ್ರಿಪಡಿಸುವುದು ಕಾರ್ಯಕ್ರಮದ ಉದ್ದೇಶವೆಂದು ತಿಳಿಸಿದರು. ಪಡುವಲಹಿಪ್ಪೆಯ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ" ಸಂಜೀವಕುಮಾರ ಎಲೆಬಳ್ಳಿ, ನಿವೃತ್ತ ಉಪನ್ಯಾಸಕಿ ತಿಲೋತ್ತಮೆ,ಮಹಿಳಾ ಸಮಾಜದ ಅಧ್ಯಕ್ಷ ವಿಜಯಲಕ್ಷ್ಮಿ,ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ತಿತರಿದ್ದರು.
