ಬೆಟ್ಟದಪುರ ಗ್ರಾಮದಲ್ಲಿ ಕಾಲುವೆಗೆ ಈಜಲು ಹೋದ ವಿದ್ಯಾರ್ಥಿ ಮೃತ್ಯು

ಬೆಟ್ಟದಪುರ ಗ್ರಾಮದಲ್ಲಿ ಕಾಲುವೆಗೆ ಈಜಲು ಹೋದ ವಿದ್ಯಾರ್ಥಿ  ಮೃತ್ಯು

ಕುಶಾಲನಗರ:ಬೆಟ್ಟದಪುರ ಗ್ರಾಮದಲ್ಲಿ ಕಾಲುವೆಗೆ ಈಜಲು ಹೋಗಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಹಾಸನ ಜಿಲ್ಲೆಯ ಕೊಣನೂರು ಗ್ರಾಮದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಲಕ್ಷ್ಮಿಪುರ ಗ್ರಾಮದ ಲೇಟ್ ಹರೀಶ್ ಅವರ ಮಗ ಲವ ಎಂಬ ತಾನೇ ಸಾವಿಗೀಡಾ ಆಗಿರುವಾತ.

 ಈತ ಬೆಟ್ಟದಪುರ ಗ್ರಾಮಕ್ಕೆ ತನ್ನ ಅತ್ತೆ ಪುಟ್ಟಮ್ಮ ಅವರ ಮನೆಗೆ ಹಬ್ಬಕ್ಕೆ ಬಂದಿದ್ದು ಪಕ್ಕದಲ್ಲಿ ಇರುವ ಕರಡಿ ಲಕ್ಕನಕೆರೆ ಏತ ನೀರಾವರಿ ಕಾಲುವೆಗೆ ಈಜಲು ಹೋಗಿ ಮೃತಪಟ್ಟಿದ್ದಾನೆ.

 ಲವ ನ ತಂದೆ ತಾಯಿಗಳು ಮೃತಪಟ್ಟಿದ್ದು, ಈ ಹಿಂದೆ ಮೃತ ಪಟ್ಟಿದ್ದು ಅನಾಥನಾಗಿದ್ದ ಈತ ಕೂಡ ಈಜಲು ಹೋಗಿ ದುರ್ಮರಣ ಹೊಂದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮೃತ ಲವ ನ ಮಾವ ಸಿದ್ದರಾಮ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಳುಗು ಈಜು ತಜ್ಞರನ್ನು ಕರೆಸಿ, ಶವವನ್ನು ಹೊರಗೆ ತೆಗೆದು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.