ಟಿ20 ವಿಶ್ವಕಪ್‌–2026: ಬಲಿಷ್ಠ ಭಾರತ ತಂಡ ಪ್ರಕಟ; ಗಿಲ್ ಔಟ್!

ಟಿ20 ವಿಶ್ವಕಪ್‌–2026: ಬಲಿಷ್ಠ ಭಾರತ ತಂಡ ಪ್ರಕಟ; ಗಿಲ್ ಔಟ್!

ಹೊಸದಿಲ್ಲಿ: ಭಾರತ–ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌–2026ಕ್ಕೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡವನ್ನು ಮುನ್ನಡೆಸಲಿದ್ದು, ಉಪನಾಯಕನಾಗಿ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ತಂಡದಿಂದ ಯುವ ಬ್ಯಾಟರ್ ಶುಭ ಮನ್ ಗಿಲ್‌ ಅವರನ್ನು ಕೈಬಿಡಲಾಗಿದೆ.

ಒಟ್ಟು 20 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ಭಾರತ ತಂಡ ಗ್ರೂಪ್–1ರಲ್ಲಿ ಸ್ಥಾನ ಪಡೆದಿದೆ. ಫೆಬ್ರವರಿ 7ರಂದು ಯುಎಸ್‌ಎ ವಿರುದ್ಧ ಪಂದ್ಯ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 15ರಂದು ಪಾಕಿಸ್ತಾನ್ ವಿರುದ್ಧದ ಬಹು ನಿರೀಕ್ಷಿತ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಗುಂಪು ಹಂತದ ಪಂದ್ಯಗಳ ಬಳಿಕ ಪ್ರತಿ ಗುಂಪಿನಿಂದ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಸೂಪರ್–8 ಹಂತ ಪ್ರವೇಶಿಸಲಿವೆ. ಸೂಪರ್–8 ಹಂತದಲ್ಲಿ ಅಂಕಪಟ್ಟಿಯ ಮೊದಲ ನಾಲ್ಕು ಸ್ಥಾನಗಳಲ್ಲಿರುವ ತಂಡಗಳು ಸೆಮಿಫೈನಲ್‌ ಗೆ ಅರ್ಹತೆ ಪಡೆಯಲಿವೆ.

ಭಾರತ ತಂಡ:

ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ಭಾರತದ ಪಂದ್ಯಗಳ ವೇಳಾಪಟ್ಟಿ:

ಫೆ. 7: ಭಾರತ vs ಯುಎಸ್‌ಎ – ಮುಂಬೈ

ಫೆ. 12: ಭಾರತ vs ನಮೀಬಿಯಾ – ದಿಲ್ಲಿ

ಫೆ. 15: ಭಾರತ vs ಪಾಕಿಸ್ತಾನ್ – ಕೊಲಂಬೊ

ಫೆ. 18: ಭಾರತ vs ನೆದರ್‌ಲೆಂಡ್ಸ್ – ಅಹಮದಾಬಾದ್