ಸೆಪ್ಟೆಂಬರ್ 13ರಂದು ಪಿರಿಯಾಪಟ್ಟಣಕ್ಕೆ ಅಂತರಾಷ್ಟ್ರೀಯ ವಾಗ್ಮಿ ಉಸ್ತಾದ್ ನೌಶಾದ್ ಬಾಖವಿ

ಸೆಪ್ಟೆಂಬರ್ 13ರಂದು  ಪಿರಿಯಾಪಟ್ಟಣಕ್ಕೆ   ಅಂತರಾಷ್ಟ್ರೀಯ ವಾಗ್ಮಿ  ಉಸ್ತಾದ್  ನೌಶಾದ್  ಬಾಖವಿ

ಪಿರಿಯಾಪಟ್ಟಣ:ಮಲಬಾ‌ರ್ ಜುಮಾ ಮಸೀದಿ ಕಮಿಟಿಯಿಂದ ಮಜ್‌ದೇ ಮದೀನ ಮಿಲಾದ್ ಫೆಸ್ಟ್ ಕಾರ್ಯಕ್ರಮ ನಡೆಯಲಿದ್ದು, ಅಂತರಾಷ್ಟ್ರೀಯ ವಾಗ್ಮಿ ಉಸ್ತಾದ್ ನೌಶಾದ್ ಬಾಖವಿ ಇದೇ ಮೊದಲ ಬಾರಿಗೆ ಮೈಸೂರು ಜಿಲ್ಲೆ ಪಿರಿಯಪಟ್ಟಣ ಗ್ರಾಮಕ್ಕೆ ಬರಲಿದ್ದು ಮಲಬಾ‌ರ್ ಜುಮಾ ಮಸೀದಿ ಕಮಿಟಿ ಅಗತ್ಯ ಸಿದ್ದತೆಗಳನ್ನ ಕೈಗೊಂಡಿದ್ದು ಮಿಲಾದ್ ಸಂಭ್ರಮಕ್ಕೆ ಸಜ್ಜಾಗಿದೆ. ಸೆಪ್ಟಂಬರ್ 12ರಂದು ಮದರಸ ಮಕ್ಕಳ ಕಾರ್ಯಕ್ರಮ ಹಾಗೂ ಧಾರ್ಮಿಕ ಪ್ರಭಾಷಣ ನಡೆಯಲಿದ್ದು ದಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 13 ರಂದು ಸಂಜೆ 7 ಗಂಟೆಯಿಂದ ಸ್ವಲಾತ್ ವಾರ್ಷಿಕ ಹಾಗೂ ನಬಿದಿನ ಮಹಾ ಸಮ್ಮೇಳನ ಹಾಗೂ ಅಂತರಾಷ್ಟ್ರೀಯ ವಾಗ್ಮಿ ನೌಶಾದ್ ಬಾಖವಿ ಅವರಿಂದ ಧಾರ್ಮಿಕ ಪ್ರಭಾಷಣ ನಡೆಯಲಿದೆ. ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಲಬಾ‌ರ್ ಜುಮಾ ಮಸೀದಿ ಕಮಿಟಿ ಮನವಿ ಮಾಡಿದ್ದಾರೆ.