ಸಾರಿಗೆ ನೌಕರರ ಪ್ರೊಟೆಸ್ಟ್, ನಾಳೆ(ಆಗಸ್ಟ್ 05) KSRTC ಬಸ್ಸ್ ಗಳು ರಸ್ತೆಗಿಳಿಯಲ್ಲ!

ಬೆಂಗಳೂರು : ಮೂವತ್ತೆಂಟು ತಿಂಗಳ ವೇತನ ಬಾಕಿ ಸೇರಿದಂತೆ ಸಾರಿಗೆ ನೌಕರರ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರಕಾರ ನಿರಾಕರಿಸಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ನೌಕರರ ಜಂಟಿ ಕ್ರಿಯಾ ಸಮಿತಿ, ನಿಗಮಗಳ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗಿನ ಸಂಧಾನ ಸಭೆ ವಿಫಲವಾಗಿದೆ.
ಹೀಗಾಗಿ ನೌಕರರು ಕರೆ ನೀಡಿರುವ ಸಾರಿಗೆ ಮುಷ್ಕರ ನಿಶ್ಚಿತವಾಗಿದ್ದು, ನಾಳೆ(ಆ.5) ಬೆಳಗ್ಗೆ 6ಗಂಟೆಯಿಂದಲೇ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳು ರಸ್ತೆಗೆ ಇಳಿಯುವುದಿಲ್ಲ. ಬೆಳಗ್ಗೆ 6ಗಂಟೆಯಿಂದ ಸಾರಿಗೆ ಸಂಸ್ಥೆಗಳ ಯಾವುದೇ ನೌಕರ ಕರ್ತವ್ಯಕ್ಕೆ ಹಾಜರಾಗುವುದಿಲ್ಲ, ಬಸ್‍ಗಳನ್ನು ಓಡಿಸುವುದಿಲ್ಲ. ಸರಕಾರದ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ, ಎಲ್ಲ ಬಸ್ ಎಲ್ಲ ಬಸ್‍ಗಳನ್ನು ಡಿಪೋಗಳಲ್ಲೇ ನಿಲ್ಲಿಸಿ, ಶಾಂತ ರೀತಿಯಲ್ಲೇ ಮುಷ್ಕರ ನಡೆಸಲಿದ್ದೇವೆ’ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಎಚ್ಚರಿಸಿದ್ದಾರೆ