ಬಾಕ್ಸಿಂಗ್ ನಲ್ಲಿ ಅವಳಿ ಸಹೋದರರ ಸಾಧನೆ
ಗೋಣಿಕೊಪ್ಪ:ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ಸಮೀಪದ ಅರ್ವತ್ತೊಕ್ಲುವಿನ ಸರ್ವದೈವತ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳಾದ ಮಿನ್ನಂಡ ಲೇಖಕ್ ಚಂಗಪ್ಪ ಹಾಗೂ ಮಿನ್ನಂಡ ಲಿಖಿತ್ ಚಿಣ್ಣಪ್ಪ ಇವರು ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಿನ್ನಂಡ ಜೋಯಪ್ಪ ಹಾಗೂ ಪ್ರೀತ್ ಲಲಿತ ಇವರ ಸುಪುತ್ರ ರಾಗಿರುತ್ತಾರೆ. ಇವರ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ, ಮುಖ್ಯ ಶಿಕ್ಷಕರು ಮನೆಯಪಂಡ ಶೀಲಾ ಬೋಪಣ್ಣ, ತರಬೇತುದಾರರಾದ ನವೀನ್ ಗೌಡ ಹಾಗೂ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
