ವಿರಾಜಪೇಟೆ ನಗರ ಹಾಗೂ ತಾಲ್ಲೂಕು ವರ್ತಕರ ಸಂಘ ಅಸ್ತಿತ್ವಕ್ಕೆ

ವಿರಾಜಪೇಟೆ ನಗರ ಹಾಗೂ ತಾಲ್ಲೂಕು ವರ್ತಕರ ಸಂಘ ಅಸ್ತಿತ್ವಕ್ಕೆ

ವಿರಾಜಪೇಟೆ:ನಗರ ಮತ್ತು ತಾಲೂಕಿನ ವಿವಿಧೆಡೆಗಳಲ್ಲಿ ವಿವಿಧ ಬಗೆಯ ಅಂಗಡಿ ಮಳಿಗೆ ವ್ಯಾಪಾರ ವೃತ್ತಿಗಳನ್ನು ನಡೆಸುತ್ತಿರುವ ವರ್ತಕರ ಶ್ರೇಯೋಭಿವೃದ್ದಿಗಾಗಿ ನೂತನವಾಗಿ ವಿರಾಜಪೇಟೆ ನಗರ ಮತ್ತು ತಾಲೂಕು ವರ್ತಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ವಿರಾಜಪೇಟೆ ನಗರ‌ ಮತ್ತು ತಾಲೂಕು ವರ್ತಕರ ಸಂಘ , ವಿರಾಜಪೇಟೆ ವತಿಯಿಂದ ಪ್ರಥಮ ಸಭೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು.

ಸಂಘದ ನೂತನ ಆಡಳಿತ ಮಂಡಳಿಯ ಅದ್ಯಕ್ಷರಾದ ಪಿಎ. ಮಂಜುನಾಥ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಜಾತಿ,ಧರ್ಮಕ್ಕೆ ಸೀಮಿತ ವಾಗದೆ,ರಾಜಕೀಯ ರಹಿತವಾಗಿ ಎಲ್ಲಾ ವರ್ಗದ ವರ್ತಕರನ್ನು ಒಂದೇ ವೇದಿಕೆಯಲ್ಲಿ ಕರೆತರುವುದಾಗಿದ್ದು ವರ್ತಕ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹಾಗೂ ಸಂಘದ ಸದಸ್ಯರಲ್ಲಿ ಒಗ್ಗಟ್ಟು ಮನೋಭಾವ ಮೂಡಿಸಿ, ಸಾಮಾರಸ್ಯದ ಸಮಾಜ ಸೃಷ್ಟಿ ಮಾಡುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗಿದೆ. ವರ್ತಕ ಸಮುದಾಯದಲ್ಲಿ ವಿವಿಧ ವರ್ಗಗಳಿದ್ದು ಎಲ್ಲಾ ವರ್ಗಗಳಿಗೆ ಸಮಾನಾಂತರ ಅವಕಾಶ ಕಲ್ಪಿಸಲಾಗಿದೆ. ಸಂಘದಿಂದ ಸದಸ್ಯರಿಗೆ, ಆರೋಗ್ಯ ಶಿಭಿರಗಳ ಅಯೋಜನೆ , ಸಾಮಾಜಿಕ ಉತ್ತೇಜಿಸುವುದು,ಸದಸ್ಯರ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗಾಗಿ ಪ್ರೋತ್ಸಾಹ ನೀಡುವುದು. ಜನಪರ ಯೋಜನೆಗಳಿಗೆ ಬದ್ದರಾಗಿ ಕಾರ್ಯಕ್ರಮ ರೂಪಿಸಲಾಗುವುದು. ನಗರ ಮತ್ತು ತಾಲೂಕಿನಲ್ಲಿ ನಾಗರಿಕರ ಅಭಿವೃದ್ಧಿ ಗಾಗಿ ಸಮಿತಿಗಳು ಹಲವು ಸಮಿತಿಗಳಿವೆ.

 ಆದರೆ ಸಂಕಷ್ಟ ಎದುರಿಸುತ್ತಿರುವ ವರ್ತಕ ಸಮುದಾಯದ ಧ್ವನಿಯಾಗಿ ಕರ್ತವ್ಯ ನಿರ್ವಹಿಸಲು ಸಂಘಟನೆಗಳು ಇಲ್ಲಾದಾಗಿರುವುದನ್ನು ಮನಗಂಡು ಸಂಘ ಸ್ಥಾಪನೆ‌ ಮಾಡಲಾಗಿದೆ ಎಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಹಮ್ಮದ್ ರಾಫಿ ಕೆ.ಹೆಚ್ ಅವರು ಮಾತನಾಡಿ, ಕಳೆದ ಐದು ವರ್ಷಗಳ ಹಿಂದೆ ವಾಟ್ಸ್ ಆಪ್ ಗ್ರೂಪ್ ರಚನೆಗೊಂಡು ವರ್ತಕರ ಹಾಗುಹೋಗುಗಳ ಬಗ್ಗೆ ಮಾಹಿತಿ ಕಲೆಹಾಕಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಿದ್ದು,ವರ್ತಕರಿಗೆ ಹೆಚ್ಚಿನ ಸೇವೆ ಒದಗಿಸಬೇಕು.ಎನ್ನುವ ಮನೋಭಾವದಿಂದ ಕಾನೂನು ಬದ್ಧವಾಗಿ ಸಂಘವನ್ನು ನೋಂದಾಯಿಸಿ, ಇದೀಗ ಅಧಿಕೃತವಾಗಿ ಸಂಘವನ್ನು ಘೋಷಣೆ ಮಾಡಲಾಗಿದೆ. ಸಂಘವು ಯಾರ ಪರ ಮತ್ತು ವಿರುದ್ಧವಾಗಿಲ್ಲಾ ಇದು ವರ್ತಕರ ಪರವಾಗಿರುವ ಸಂಘವಾಗಿದೆ ಎಂದು ಹೇಳಿದರು.

 ಸಭೆಯನ್ನು ಉದ್ದೇಶಿಸಿ ಸುರೇಶ್ ಆರ್ ಮತ್ತು ರಾಜೇಶ್ ಅರ್. ಶೇಟ್ ಮಾತನಾಡಿದರು.ವಿರಾಜಪೇಟೆ ನಗರ ಮತ್ತು ತಾಲೂಕು ವರ್ತಕರ ಸಂಘದ ಉಪ ಅಧ್ಯಕ್ಷರಾಗಿ ಪಟ್ಟಡ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಯಾಗಿ ಮತೀನ್ ಎಸ್. ಹೆಚ್, ಖಜಾಂಚಿ ಯಾಗಿ ಸುರೇಶ್ ಆರ್ ಮತ್ತು ನಿರ್ದೇಶಕರಾಗಿ ಡಿ. ರಾಜೇಶ್ ಪದ್ಮನಾಭ, ರಾಜೇಶ್ ಅರ್. ಶೇಟ್, ವೆಂಕಟೇಶ ಟಿ.ಜೆ. ಶಶಿ ಕೆ. ಆರ್, ಮೊಹಮ್ಮದ್ ಹನೀಫ್ ಎಂ.ಎಸ್, ಹಸನ್ ಮನ್ನಾ, ಮದನ್ ಲಾಲ್ ಬದರಾಮ್ ಎಸ್.ಕೆ. ಮತ್ತು ಚೇತನ್ ಚೌಧರಿ. ಆಯ್ಕೆಗೊಂಡಿದ್ದು ಮುಂದಿನ ಸಭೆಯಲ್ಲಿ ವರ್ತಕರ ಮಳಿಗೆಗಳಿಗೆ ನೇರ ಭೇಟಿ ನೀಡಿ ದಾಖಲೆಗಳನ್ನು ಪಡೆದು. ಸಂಘಕ್ಕೆ ಸದಸ್ಯರಾಗಿ ನೊಂದಣಿ ಮಾಡಿಕೊಳ್ಳಲಾಗುತ್ತದೆ. ಎಂದು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಯಿತು.

 ವರದಿ:ಕಿಶೋರ್ ಕುಮಾರ್ ಶೆಟ್ಟಿ