ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಸಾಂಪ್ರದಾಯಿಕ ಪಲ್ಲೋತ್ಸವದಲ್ಲಿ ಭಾಗವಹಿಸಿದ ಯದುವೀರ್ ಒಡೆಯರ್

ತಿರುಪತಿ:ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿರುವ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯವರ ಸನ್ನಿಧಾನದಲ್ಲಿ ಮೈಸೂರು-ಕೊಡಗು ಸಂಸದರಾದ ಯದುವೀರ್ ಒಡೆಯರ್ ತಮ್ಮ ತಾಯಿಯವರಾದ ಶ್ರೀಮತಿ ಡಾ| ಪ್ರಮೋದಾ ದೇವಿ ಒಡೆಯರ್ ಅವರೊಂದಿಗೆˌ 300 ವರ್ಷಗಳಷ್ಟು ಪುರಾತನವಾಗಿರುವ ಸಾಂಪ್ರದಾಯಿಕ ಪಲ್ಲವೋತ್ಸವ ಸಮಾರಂಭದಲ್ಲಿ ಭಾಗವಹಿಸಿˌ ಶಾಸ್ತ್ರೋಕ್ತವಾಗಿ ಸಕಲ ಪೂಜಾ ಕೈಂಕರ್ಯಗಳನ್ನು ನೆರವೇರಿಸಿˌ ನಾಡಿನ ಒಳಿತಿಗಾಗಿ ಭಕ್ತಿಯಿಂದ ಪ್ರಾರ್ಥಿಸಲಾಯಿತು. ತಿರುಪತಿಯ ಶ್ರೀದೇವಿ ಮತ್ತು ಭೂದೇವಿ ಹಾಗೂ ಶ್ರೀಮಲಯಪ್ಪ ಸ್ವಾಮಿ ದೇವರ ಉತ್ಸವ ಮೂರ್ತಿಗಳ ಮೆರವಣಿಗೆಯೊಂಗಿದೆ ವಿಶೇಷ ಮಂಗಳಾರ್ತಿಯನ್ನು ನೆರವೇರಿಸಿದರು.