ಮಾಹಿತಿ ಕೊರತೆಯಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬ ಆರೋಪ: ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ

ಮಡಿಕೇರಿ:ಇತ್ತೀಚೆಗೆ ಕೊಡಗು ಏಕೀಕರಣ ರಂಗ ಸಂಘಟನೆಯ ಪ್ರಮುಖರು ಮಾಹಿತಿ ಕೊರತೆಯಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ,ಈ ಆರೋಪ ಸರಿಯಲ್ಲ ಎಂದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದ್ದಾರೆ.ಈ ಕುರಿತು ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯಬಡ್ಡಿ ದರದಲ್ಲಿ 36,756 ರೈತರಿಗೆ ರೂ.830.32 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮಾಡಲಾಗಿದೆ.
ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌ ಜಿಲ್ಲೆಯ ರೈತರ ಸಮಗ್ರ ಕೃಷಿ ಅಭಿವೃದ್ಧಿಗೆ ಬಾಂಕ್ ಪ್ರೋತ್ಸಾಹ ನೀಡುತ್ತಿದೆ. 2024-25ನೇ ಸಾಲಿನಲ್ಲಿ ಡಿಸಿಸಿ ಬ್ಯಾಂಕ್‌ನಿಂದ 39390 ರೈತರಿಗೆ ರೂ.1066.47 ಕೋಟಿ ಎನ್‌ಸಿಎಲ್ ಮಂಜುರಾತಿಯಾಗಿತ್ತು. ಈ ಪೈಕಿ ಶೂನ್ಯ ಬಡ್ಡಿ ದರದಲ್ಲಿ 36,756 ರೈತರಿಗೆ ರೂ.830.32 ಕೋಟಿ ರೈತರಿಗೆ ಸಾಲ ವಿತರಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನರ್ಬಾಡ್‌ನಿಂದ ರಿಯಾಯಿತಿ ಬಡ್ಡಿದರದಲ್ಲಿ 2024-25ನೇ ಸಾಲಿಗೆ ರೂ.105.39 ಕೋಟಿ ಮಾತ್ರ ಪುರ್ನಧನ ಬಿಡುಗಡೆಗೊಳಿಸಲಾಗಿದೆ. ಉಳಿದಂತೆ ರೂ.724.93 ಕೋಟಿ ಬ್ಯಾಂಕಿನ ಹಾಗೂ ಸಂಘದ ಸ್ವಂತ ಬಂಡವಾಳದಿಂದ ಸಾಲ ವಿತರಿಸಲಾಗಿದೆ. ಜಿಲ್ಲೆಯಲ್ಲಿ 74 ಕೃಷಿಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲೇ ಮಾದರಿ ಬ್ಯಾಂಕ್ ಆಗಿ ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸರ್ಕಾರ ಇಂದು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಹೊರತು ಸಹಕಾರ ಬ್ಯಾಂಕ್‌ಗಳಿಗೆ ಕ್ರೂಢೀಕರಣ ಮಾಡುತ್ತಿಲ್ಲ. ರೈತರ ಏಳಿಗೆಗಾಗಿ ದೂರದೃಷ್ಠಿಯಿಂದ ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನ ಸ್ವಂತ ಬಂಡವಾಳದಿಂದ ರೂ.368.58 ಕೋಟಿ ಮೊತ್ತವನ್ನು ಶೇ.8.25, 8.20ರ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ಪಡೆದು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ತನ್ನ ಸ್ವಂತ ಬಂಡವಾಳದಿಂದ ನೀಡಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಜಮ್ಮ ಸಮಸ್ಯೆ, ಪೌತಿಖಾತೆ ನ್ಯೂನತೆಯಿಂದ ಸಾಲ ಪಡೆಯಲು ರೈತರು ವಿಫಲರಾಗುತ್ತಿದ್ದಾರೆ ಹೊರತು ಡಿಸಿಸಿ ಬಾಂಕ್ ನಿಯಮದಿಂದಲ್ಲ. ಇದನ್ನು ಕಂದಾಯ ಇಲಾಖೆ ಮೊದಲು ಸರಿಪಡಿಸಬೇಕು ಎಂದ ಅವರು, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದಿಂದ ವಿಶೇಷ ಅಧಿಕಾರಿಯನ್ನು ನೇಮಿಸಬೇಕು. ಶಾಸಕರು, ರೈತರು, ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಮಿತಿ ರಚಿಸಿ ಸರ್ಕಾರದ ಗಮನ ಸೆಳೆಯುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ಹರೀಶ್ ಪೂವಯ್ಯ, ನಿರ್ದೇಶಕರಾದ ಟಿ.ಆರ್.ಶರವಣ ಕುಮಾರ್, ಕಿಲನ್ ಗಣಪತಿ, ಎಚ್.ಕೆ.ಮಾದಪ್ಪ, ಹೊಸೂರು ಸತೀಶ್ ಕುಮಾರ್ ಉಪಸ್ಥಿತರಿದ್ದರು.