ಅಪ್ಪಂಗಳ: ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಭೇಟಿ

ಮಡಿಕೇರಿ: ಐಸಿಎಆರ್-ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಲಕ್ಕೆ ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಭೇಟಿ ನೀಡಿದರು.
ಲೋಕಸಭೆಯ ಗೌರವಾನ್ವಿತ ಸಂಸದ ಚರಣ್ ಜಿತ್ ಸಿಂಗ್ ಚನ್ನಿ ಅವರ ಅಧ್ಯಕ್ಷತೆಯಲ್ಲಿ ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಮೇ 23, 2025 ರಂದು ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ, ಅಪ್ಪಂಗಲಕ್ಕೆ ಭೇಟಿ ನೀಡಿದರು. ನಿಯೋಗವು ಲೋಕಸಭಾದ 12 ಸದಸ್ಯರು, ರಾಜ್ಯಸಭೆಯ 4 ಸದಸ್ಯರು ಮತ್ತು ಲೋಕಸಭಾ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡಿತ್ತು.
ಭೇಟಿಯ ಸಮಯದಲ್ಲಿ, ಐಸಿಎಆರ್-ಐಐಎಸ್ಆರ್ ಅಭಿವೃದ್ಧಿಪಡಿಸಿದ ಸಾಂಬಾರ ಬೆಳೆಗಳ ತಳಿಗಳು ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನವನ್ನು ಆಯೋಜಿಸಿಲಾಗಿತ್ತು. ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಚರಣ್ ಜಿತ್ ಸಿಂಗ್ ಚನ್ನಿ ಅವರು ಪ್ರದರ್ಶನವನ್ನು ಉದ್ಘಾಟಿಸಿದರು.
ಅಧಿಕೃತ ಸಭೆಯಲ್ಲಿ ಡಾ. ಆರ್. ದಿನೇಶ್, ನಿರ್ದೇಶಕರು, ಐಸಿಎಆರ್-ಐಐಎಸ್‌ಆರ್, ಕೋಜಿಕೋಡ್ ಅವರು ಸಂಸ್ಥೆಯ ಚಟುವಟಿಕೆಗಳು ಮತ್ತು ಸಾಧನೆಗಳ ಸಮಗ್ರ ಅವಲೋಕನವನ್ನು ಪ್ರಸ್ತುತ ಪಡಿಸಿದರು. ಸಮಿತಿಯು ಐಸಿಎಆರ್-ಐಐಎಸ್ಆರ್‌ನ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದಾತ್ಮಕ ಚರ್ಚೆ ನಡೆಸಿತು.
ಈ ಕಾರ್ಯಕ್ರಮದಲ್ಲಿ ಡಾ. ಸುಧಾಕರ್ ಪಾಂಡೆ, ಸಹಾಯಕ ಮಹಾನಿರ್ದೇಶಕರು, ಐಸಿಎಆರ್, ನವದೆಹಲಿ; ಡಾ. ಎಸ್. ಜೆ. ಅಂಕೇಗೌಡ, ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್-ಐಐಎಸ್‌ಆರ್, ಪ್ರಾದೇಶಿಕ ಕೇಂದ್ರ, ಅಪ್ಪಂಗಲ ಐಸಿಎಆರ್-ಐಐಎಸ್‌ಆರ್ ಮತ್ತು ಅದರ ಪ್ರಾದೇಶಿಕ ಕೇಂದ್ರದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರೇಮಾ ಗಣೇಶ್, ಪ್ರಗತಿಪರ ರೈತ ಮಹಿಳೆ, ಮರಗೋಡು ಇವರು ಸಂಬಾರ ಬೆಳೆಗಳ ಕೃಷಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.