ಕುಶಾಲನಗರ: ದಾರುಲ್ ಉಲೂಂ ಹೈಯರ್ ಸೆಕೆಂಡರಿ ಮದರಸದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಕುಶಾಲನಗರ: ದಾರುಲ್ ಉಲೂಂ ಹೈಯರ್ ಸೆಕೆಂಡರಿ ಮದರಸದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಕುಶಾಲನಗರ:ಸಮಸ್ತ ಕೇಂದ್ರ ವಿದ್ಯಾಭ್ಯಾಸ ಬೋರ್ಡ್ ನಿರ್ದೇಶನದ ಮೇರೆಗೆ ಸಮಸ್ತ ಮದರಸಗಳ ಶಕ್ತೀಕರಣ ಮತ್ತು ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ವಿದ್ಯಾರ್ಜನೆ ಮಾಡಲು, ಮಹತ್ವದ ಪಾತ್ರ ವಹಿಸಲು ಉಪಯುಕ್ತ ವಾಗುವ ನಿಟ್ಟಿನಲ್ಲಿ ಮದರಸದ ತರಗತಿಗಳನ್ನುಡಿಜಿಟಲೀಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಎಂದು ಮದರಸದ ಪ್ರಾಂಶುಪಾಲರಾದ ಎಂ ತಮ್ಲೀಖ್ ದಾರಿಮಿ ಮಾಹಿತಿ ನೀಡಿದರು.

ಕುಶಾಲನಗರ ದಾರುಲ್ ಉಲೂಮ್ ಹೈಯರ್ ಸೆಕೆಂಡರಿ ಮದರಸದಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಹಿಲಾಲ್ ಮಸೀದಿ ಖತೀಬರಾದ ಶಾಫಿ ಫೈಝಿ ಇರ್ಫಾನಿ ಉದ್ಘಾಟಿಸಿದರು. ಜಮಾಅತ್ ಕಾರ್ಯದರ್ಶಿ ಅಬ್ದುಲ್ ಮಜೀದ್ ಕುಶಾಲನಗರ ಸ್ವಾಗತಿಸಿದರು.

ಜಮಾಅತ್ ಅಧ್ಯಕ್ಷರಾದ ಎಂ.ಎಂ ಎಸ್ ಹುಸೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ,ಮದರಸದ ಐದು ತರಗತಿಗಳಲ್ಲಿ ಸ್ಮಾರ್ಟ್ ತರಗತಿಗಳಾಗಿ ಪರಿವರ್ತಿಸಲಾಗಿದೆ ಎಂದರು. ಉಪಾಧ್ಯಕ್ಷರಾದ ಹಂಸ ಹಾಜಿ,ಸಹ ಕಾರ್ಯದರ್ಶಿ ಮುಹಮ್ಮದಾಲಿ ಸದಸ್ಯರಾದ ರಫೀಖ್ ಮತ್ತು ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮದರಸ ಸಹ ಅಧ್ಯಾಪಕರಾದ ಅಶ್ರಫ್ ಅಝ್ ಹರಿ,ಉನೈಸ್ ಪೈಝಿ ನಫೀರ್ ಮುಸ್ಲಿಯಾರ್, ಶಕೀರ್ ಫೈಝಿ,ಯಾಸೀನ್ ಫೈಝಿ ,ಜಾಬಿರ್ ಅಝ್ ಹರಿ, ಹಂಝ ಮೌಲವಿ, ರಾಝಿಕ್ ರಹ್ಮಾನಿ ಇದ್ದರು.