ಮಾಪಿಳೆತೋಡು:ರಸ್ತೆಯ ಮಧ್ಯದಲ್ಲೇ ಹಾಕಿರುವ ಜೆಲ್ಲಿಕಲ್ಲು: ಬೈಕ್ ಅಪಘಾತ ಸಂಭವಿಸಿ ಕೈ ಮುರಿದುಕೊಂಡ ಚಾಲಕ
ಗೋಣಿಕೊಪ್ಪ: ಪೊನ್ನಂಪೇಟೆ-ಕುಟ್ಟ ರಾಜ್ಯ ಹೆದ್ದಾರಿಯ ಮಾಪಿಳೆತೋಡುವಿನ ಮಸೀದಿ ಮುಂಭಾಗದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಮಾಡಲು ಕಳೆದ ಹತ್ತು ದಿನಗಳ ಹಿಂದೆ ರಸ್ತೆಯಲ್ಲಿ ಸುರಿದ ಜೆಲ್ಲಿ ಕಲ್ಲು ರಸ್ತೆಯ ಮಧ್ಯ ಭಾಗದಲ್ಲೇ ಇದ್ದು ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಹಲವು ದ್ವಿಚಕ್ರ ವಾಹನಗಳು ಜೆಲ್ಲಿ ಕಲ್ಲಿನಲ್ಲಿ ಬಿದ್ದು ಮಾರಣಾಂತಿಕ ಗಾಯಗೊಂಡಿದ್ದಾರೆ.ಇತ್ತೀಚಿಗೆ ಬೈಕ್ ಸವಾರರಿಬ್ಬರು ಬಿದ್ದು ಕೈ ಮುರಿದುಕೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.ಅದಲ್ಲದೇ ಬೈಕ್ ಕೂಡ ಹಾನಿಯಾಗಿದೆ.ರಸ್ತೆಯ ಮಧ್ಯದಲ್ಲೇ ಇರುವ ಜೆಲ್ಲಿ ಕಲ್ಲು ತೆರವುಗೊಳಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕಾಗಿದೆ ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.