ಸುಂಟ್ಟಿಕೊಪ್ಪ:ಗೋಲ್ಡ್ ಕಪ್ ಫುಟ್ಬಾಲ್: ಆತಿಥೇಯ ಬ್ಲೂ ಬಾಯ್ಸ್ ತಂಡಕ್ಕೆ ಸೋಲಿನ ಆಘಾತ ನೀಡಿದ ಎನ್.ವೈ.ಸಿ ಕೊಡಗರಹಳ್ಳಿ

May 19, 2025 - 21:51
 0  191
ಸುಂಟ್ಟಿಕೊಪ್ಪ:ಗೋಲ್ಡ್ ಕಪ್ ಫುಟ್ಬಾಲ್:  ಆತಿಥೇಯ ಬ್ಲೂ ಬಾಯ್ಸ್ ತಂಡಕ್ಕೆ ಸೋಲಿನ ಆಘಾತ ನೀಡಿದ ಎನ್.ವೈ.ಸಿ ಕೊಡಗರಹಳ್ಳಿ
ಸುಂಟ್ಟಿಕೊಪ್ಪ:ಗೋಲ್ಡ್ ಕಪ್ ಫುಟ್ಬಾಲ್:  ಆತಿಥೇಯ ಬ್ಲೂ ಬಾಯ್ಸ್ ತಂಡಕ್ಕೆ ಸೋಲಿನ ಆಘಾತ ನೀಡಿದ ಎನ್.ವೈ.ಸಿ ಕೊಡಗರಹಳ್ಳಿ

ಸುಂಟಿಕೊಪ್ಪ: ಇಲ್ಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂ ಬಾಯ್ಸ್ ಯುವಕ ಸಂಘದ ವತಿಯಿಂದ ನಡೆಯುತ್ತಿರುವ 26 ನೇ ವರ್ಷದ ಡಿ. ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್ ಫುಟ್ಬಾಲ್ ಟೂರ್ನಿಯ ಸೋಮವಾರ ನಡೆದ ಪಂದ್ಯದಲ್ಲಿ ನೇತಾಜಿ ಯುವಕ ಸಂಘ ಕೊಡಗರಹಳ್ಳಿ ಮತ್ತು ಇಕೆಎನ್ ಎಫ್.ಸಿ‌‌‌. ಇರಿಟಿ ಕಣ್ಣೂರು ತಂಡಗಳು ಜಯಗಳಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ದಿನದ ಮೊದಲ ಪಂದ್ಯವು ಆತಿಥೇಯ ಬಿಬಿವೈಸಿ ಮತ್ತು ಎನ್.ವೈ.ಸಿ ಕೊಡಗರಹಳ್ಳಿ ತಂಡಗಳ ನಡುವೆ ನಡೆಯುತು‌‌.

ಎರಡು ತಂಡದಲ್ಲೂ ಅನುಭವಿ ಯುವ ಆಟಗಾರರನ್ನು ಹೊಂದಿದ್ದು, ಕಳೆದ 25 ವರ್ಷಗಳಿಂದಲೂ ಈ ಎರಡು ತಂಡಗಳ ಜಿದ್ಧಾಜಿದ್ದಿ ಪ್ರದರ್ಶನವು ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದ್ದು, ಅದೇ ಪ್ರದರ್ಶನವು ಈ ಬಾರಿಯೂ ಕಂಡುಬಂದಿತು.2 ತಂಡಗಳು ಹೊಂದಾಣಿಕೆಯ ಆಟಕ್ಕೆ ಒತ್ತು ನೀಡಿದ್ದವು‌‌.ಎರಡು ತಂಡಗಳ ಆಕರ್ಷಕ ಆಟಗಳು ಕ್ರೀಡಾಭಿಮಾನಿಗಳ ಮನಸೂರೆಗೊಂಡಿತು.ಪಂದ್ಯದ ಮೊದಲಾರ್ಧದ 13ನೇ ನಿಮಿಷದಲ್ಲಿ ಕೊಡಗರಹಳ್ಳಿ ತಂಡದ ಮುನ್ನಡೆ ಆಟಗಾರ ನಾಗೇಶ್ ಅವರು ಮೊದಲ ಗೋಲನ್ನು ಹೊಡೆಯುವುದರ ಮೂಲಕ ತಂಡಕ್ಕೆ ಮುನ್ನಡೆಯನ್ನು ತಂದುಕೊಟ್ಟರು. ಆನಂತರ ಬಿರುಸಿನ ಆಟಕ್ಕಿಳಿದ ಬಿಬಿವೈಸಿ ಮತ್ತು ಕೊಡಗರಹಳ್ಳಿ ತಂಡಗಳು ಗೋಲುಪಟ್ಟಿಗೆ ಹೊಡೆಯುವ ವಿಫಲ ಯತ್ನ ನಡೆಸಿದವು‌‌.ಇದರೊಂದಿಗೆ ಕೊಡಗರಹಳ್ಳಿ ತಂಡ ಮೊದಲಾರ್ಧದಲ್ಲಿ 1-0 ಗೋಲುಗಳ ಮುನ್ನಡೆ ಪಡೆದುಕೊಂಡಿತು‌

ದ್ಚಿತೀಯಾರ್ಧದಲ್ಲಿ ಹೊಂದಾಣಿಕೆ ಮತ್ತು ಚಾಕಚಕ್ಯತೆಯ ಆಟಕ್ಕೆ ಒತ್ತು ನೀಡಿದ ಕೊಡಗರಹಳ್ಳಿ ತಂಡ ಬಿಬಿವೈಸಿ ತಂಡದ ಕಣ್ತಪ್ಪಿಸಿ ಗೋಲು ಪಟ್ಟಿಗೆ ಹೊಡೆಯಲು ಪ್ರಯತ್ನಿಸಿದರೂ ವಿಫಲಗೊಳ್ಳುತ್ತಿದ್ದಂತೆ ಕೊಡಗರಹಳ್ಳಿ ತಂಡದ ನಾಗೇಶ್ 4ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆಯುವ ಮೂಲಕ ತಂಡಕ್ಕೆ ಮುನ್ನಡೆ ತಂದುಕೊಟ್ಟರು.ಈ ಮದ್ಯೆ ಬಿಬಿವೈಸಿ ತಂಡದ ಅನುಭವಿ ಆಟಗಾರ ಚಂದ್ರ 6 ನೇ ನಿಮಿಷದಲ್ಲಿ ಒಂದು ಗೋಲನ್ನು ಬಾರಿಸಿ ಬಿಬಿವೈಸಿ ತಂಡಕ್ಕೆ ಚೇತರಿಕೆ ತಂದುಕೊಟ್ಟರು‌ ನೀಡಿದರು. ಈ ಪಂದ್ಯದ ನಡುವೆ ಬಿಬಿವೈಸಿ ತಂಡದ ಆಟಗಾರ ಮಾಡಿದ ಸಣ್ಣ ತಪ್ಪಿಗಾಗಿ ಕೊಡಗರಹಳ್ಳಿ ತಂಡಕ್ಕೆ ಟ್ರೈ ಬ್ರೇಕರ್ ಅವಕಾಶ ಸಿಕ್ಕಿದರೂ ತಂಡದ ಅನುಭವಿ ಆಟಗಾರ ಚೇತನ್ ಗೋಲು ಗಳಿಸುವಲ್ಲಿ ವಿಫಲರಾಗಿ ನಿರಾಸೆಗೊಂಡರು‌.

ಪಂದ್ಯದ ಕೊನೆಗೆ ಎರಡು ತಂಡಗಳು ಉತ್ತಮ ಪ್ರದರ್ಶನ ದೊಂದಿಗೆ ಕೊಡಗರಹಳ್ಳಿ ತಂಡ 2-1 ಗೋಲುಗಳಿಂದ ಅತಿಥೇಯ ಬಿಬಿವೈಸಿ ಸುಂಟಿಕೊಪ್ಪ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು‌‌.

ದಿನದ ಎರಡನೇ ಪಂದ್ಯವು ಇಕೆಎಸ್ ಎಫ್‌‌‌ಸಿ ಕೋಳಿಕಡವ್ ಇರಿಟಿ ಕಣ್ಣೂರು ಮತ್ತು ಶೀತಲ್ ಎಫ್.ಸಿ.ಮೈಸೂರು ತಂಡಗಳ ನಡುವೆ ನಡೆಯಿತು‌.ಎರಡು ತಂಡಗಳು ಸಮಬಲದ ಪ್ರದರ್ಶನ ವನ್ನು ನೀಡುವುದರ ಮೂಲಕ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದವು.ಈ ಹಂತದಲ್ಲಿ ಇರಿಟಿ ತಂಡ ಬಿರುಸಿನ ಆಟಕ್ಕೆ ಒತ್ತು ನೀಡಿದವು.ಅತ್ಯಕರ್ಷಕ ಹೊಡೆತಗಳ ಮೂಲಕ ಮೈಸೂರು ತಂಡದ ಮೇಲೆ ಹಿಡಿತ ಸಾಧಿಸಿತು‌‌.ಈ ನಡುವೆ ಇರಿಟಿ ತಂಡದ ಮುನ್ನಡೆ ಆಟಗಾರ ವಿಷ್ಣು ಅವರು ಹೊಡೆದ ಚೆಂಡು ಗೋಲುಪಟ್ಟಿಗೆ ತಗುಲಿ ಕೀಪರ್ ಕಣ್ತಪ್ಪಿಸಿ ಗೋಲಾಗಿ ಪರಿವರ್ತನೆಗೊಂಡಿತು. ಇರಿಟಿ ತಂಡದ ಆಟಗಾರರು ಹೊಡೆದ ಚೆಂಡನ್ನು ಮೈಸೂರು ಗೋಲುಕೀಪರ್ ಆಕರ್ಷಕವಾಗಿ ತಡೆಯುವುದರ ಮೂಲಕ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು‌‌.

ಪಂದ್ಯದ ದ್ವಿತೀಯಾರ್ಧದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಇರಿಟಿ ತಂಡ ಮೈಸೂರು ತಂಡಕ್ಕೆ ಅಡ್ಡಿಯಾಗಿ ನಿಂತಿತು.ಸಿಕ್ಕ ಅವಕಾಶವನ್ನು ಬಳಸಿಕೊಂಡ ಇರಿಟಿ ತಂಡದ ಆಟಗಾರ ಸುಜಿತ್ ಅವರು 13 ನೇ ನಿಮಿಷದಲ್ಲಿ ಬಿರುಸಿನ ಹೊಡೆತದ ಮೂಲಕ ಗೋಲು ಗಳಿಸುವುದರಲ್ಲಿ ಸಫಲರಾದರು.ಕೊನೆಗೆ ಇಎಸ್ ಕೆ ಕೋಳಿಕಡವ್ ಎಫ್.ಸಿ ಇರಿಟಿ ಕಣ್ಣೂರು ತಂಡವು 2-0 ಗೋಲುಗಳಿಂದ ಮೈಸೂರು ತಂಡವನ್ಜು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಫುಟ್ ಬಾಲ್ ಟೂರ್ನಿಯ ಉದ್ಘಾಟನೆಯನ್ನು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಚೆಂಡು ಒದೆಯುವುದರ ಮೂಲಕ ಚಾಲನೆ ನೀಡಿ ಆಟಗಾರರನ್ನು ಪರಿಚಯ ಮಾಡಿಕೊಂಡರು.ಇದೇ ವೇಳೆ ಬಿಬಿವೈಸಿ ಅಧ್ಯಕ್ಷ ಆಲಿಕುಟ್ಟಿ, ಗೌರವಾಧ್ಯಕ್ಷ ಟಿ.ವಿ.ಪ್ರಸನ್ನ, ಪದಾಧಿಕಾರಿಗಳಾದ ಬಿ.ಕೆ.ಪ್ರಶಾಂತ್, ಅನಿಲ್ ಕುಮಾರ್,ಹರದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎ ಮುಸ್ತಫಾ, ಹಮೀದ್ ,ಆದಿಶೇಷ, ಉಲುಗುಲಿ ತೋಟದ ವ್ಯವಸ್ಥಾಪಕ ಕೆ.ಎಂ‌.ಅಬ್ಧುಲ್ ಸಲಾಂ, ಗ್ರಾಮ ಪಂಚಾಯಿತಿ, ಸದಸ್ಯರಾದ ಶಬೀರ್,ರಫೀಕ್ ಖಾನ್,ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಉಧ್ಯಮಿ ಧನುಕಾವೇರಪ್ಪ ಇತರರು ಇದ್ದರು.

ನಾಳಿನ‌ ಪಂದ್ಯಗಳು:

ಮದ್ಯಾಹ್ನ 3 ಗಂಟೆಗೆ ಸಿಟಿಜನ್ ಎಫ್.ಸಿ‌ ಉಪ್ಪಳ ಮತ್ತು ನೇತಾಜಿ ಎಫ್.ಸಿ ಮಂಡ್ಯ

ಸಂಜೆ 4 ಗಂಟೆಗೆ ಪೈಟರ್ಸ್ ಎಫ್.ಸಿ ಕೂತುಪರಂಬು ಮತ್ತು ಅಶೋಕ ಎಫ್.ಸಿ ಮೈಸೂರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0