ಹುಣಸೂರಿನ ಗೋಣಿಕೊಪ್ಪ ಕ್ರಾಸ್ ಬಳಿ ಅಪಘಾತ: ಸಂಪಾಜೆಯ ಕಾರು ಜಖಂ: ಅಪಾಯದಿಂದ ಪಾರು

ಹುಣಸೂರಿನ ಗೋಣಿಕೊಪ್ಪ ಕ್ರಾಸ್ ಬಳಿ ಅಪಘಾತ:  ಸಂಪಾಜೆಯ ಕಾರು ಜಖಂ: ಅಪಾಯದಿಂದ ಪಾರು

ಹುಣಸೂರು:ಹುಣಸೂರಿನ ಗೋಣಿಕೊಪ್ಪ ಕ್ರಾಸ್ ಬಳಿ ಬಸ್ಸೊಂದು ಲಾರಿ ಮತ್ತು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿ ಕಾರು ಜಖಂಗೊಂಡ ಘಟನೆ ವರದಿಯಾಗಿದೆ. ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಖಾಸಗಿ ಬಸ್ಸೊಂದು ಹುಣಸೂರಿನ ಗೋಣಿಕೊಪ್ಪ ಕ್ರಾಸ್ ಬಳಿ ಬರುತ್ತಿದ್ದಾಗ ಕಲ್‌ಬೆಟ್ಟ ಕಡೆಯಿಂದ ಬಂದ ಲಾರಿ ರಸ್ತೆಗೆ ಅಡ್ಡವಾಗಿ ಬಂದು ನಿಂತಸಂದರ್ಭ ಬಸ್ ಚಾಲಕ ಬಸ್ಸನ್ನು ನಿಯಂತ್ರಿಸಲಾಗದೆ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಆ ಸಂದರ್ಭ ಸಂಪಾಜೆಯ ಉದಯಕುಮಾರ್ ಕುಕ್ಕೆಟ್ಟಿಯವರು ಚಲಾಯಿಸುತ್ತಿದ್ದ ಕಾರು ಪಕ್ಕದಲ್ಲಿ ಬರುತ್ತಿದ್ದು, ಬಸ್ ಕಾರಿನ ಮೇಲೆ ಉರುಳಿಬಿದ್ದಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಬಸ್ಸಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಆದರೆ ಉದಯಕುಮಾರ್ ಕುಕ್ಕೆಟ್ಟಿ ಮತ್ತು ಕುಟುಂಬಿಕರಿಗೆ ಅದೃಷ್ಟವಶಾತ್ ಗಾಯಗಳಾಗಿಲ್ಲ ಎಂದು ತಿಳಿದಿದ್ದು ಆದರೆ ಕಾರು ಜಖಂಗೊಂಡಿದೆ.