ಗುಜರಾತ್: ವಿಮಾನ ಪತನವಾಗಿ ನೂರಾರು ಮಂದಿಯ ಸಾವಿನ ಸುದ್ದಿ ತೀವ್ರ ಆಘಾತವುಂಟು ಮಾಡಿದೆ: ಎ.ಎಸ್‌ ಪೊನ್ನಣ್ಣ

ಗುಜರಾತ್: ವಿಮಾನ ಪತನವಾಗಿ ನೂರಾರು ಮಂದಿಯ ಸಾವಿನ ಸುದ್ದಿ ತೀವ್ರ ಆಘಾತವುಂಟು ಮಾಡಿದೆ:  ಎ.ಎಸ್‌ ಪೊನ್ನಣ್ಣ

ಮಡಿಕೇರಿ:ಗುಜರಾತಿನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನವಾಗಿ ನೂರಾರು ಜನರು ದುರಂತ ಸಾವಿಗೀಡಾದ ಸುದ್ದಿ ತೀವ್ರ ದುಃಖ ಉಂಟು ಮಾಡಿದೆ. ಭಾರತೀಯರು ಸೇರಿದಂತೆ ಹಲವು ವಿದೇಶಿ ಪ್ರಯಾಣಿಕರಿದ್ದ ಈ ವಿಮಾನದ ಪತನ ಅತ್ಯಂತ ದುರಾದೃಷ್ಟಕರ. ವಿಮಾನವು ಮೆಡಿಕಲ್ ಹಾಸ್ಟೆಲ್ ಮೇಲೆ ಪತನ ಆಗಿ ವಿದ್ಯಾರ್ಥಿಗಳೂ ಸಾವನ್ನಪ್ಪಿರುವ ಸುದ್ದಿ ಮತ್ತಷ್ಟು ಆಘಾತ ನೀಡಿದೆ.ಈ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸುತ್ತಾ, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.