ನಾಯ್ಡುಸ್ ಕ್ರಿಕೆಟ್ ಪಂದ್ಯಾಟ: ಪ್ಯಾಂಥರ್ಸ್ ಪೆರುಂಬಾಡಿ ಚಾಂಪಿಯನ್ ಆರ್.ಸಿ.ಬಿ ಬೈಲುಕೊಪ್ಪ ರನ್ನರ್ಸ್
ವಿರಾಜಪೇಟೆ:ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡುಸ್ ಸ್ಪೋರ್ಟ್ಸ ಕ್ಲಬ್ ಕೊಡಗು ವತಿಯಿಂದ ಮೂರ್ನಾಡು ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ಕ್ರಿಕೆಟ್ ಪಂದ್ಯಾಟಗಳು ನಡೆಯಿತು. ಪಂದ್ಯಾಟಗಳು ಲೀಗ್ ಮಾದರಿಯಲ್ಲಿದ್ದು ಒಟ್ಟು 06 ಓವರ್ ಗಳಿಗೆ ಸೀಮಿತವಾಗಿತ್ತು. ಜಿಲ್ಲೆಯ ನುರಿತ ತೀರ್ಪುಗಾರರಿಂದ ತೀರ್ಪುಗಾರಿಕೆ ನಿರ್ವಹಿಸಲಾಗಿತ್ತು. ಪಂದ್ಯಾಟದಲ್ಲಿ ಒಟ್ಟು ಜಿಲ್ಲೆಯ ಒಟ್ಟು 08 ತಂಡಗಳು ಭಾಗವಹಿಸಿದ್ದವು. ನಾಲ್ಕು ತಂಡಗಳು ಅಂತಿಮ ಸುತ್ತಿಗೆ ಪ್ರವೇಶ ಪಡೆಯಿತು.ಪ್ರಥಮ ಸೆಮಿಫೈನಲ್ ಪಂದ್ಯಾಟದಲ್ಲಿ ಸ್ಪಾರ್ಟನ್ಸ್ ನಾಪೋಕ್ಲು ತಂಡ 06 ಓವರ್‌ಗಳಲ್ಲಿ 5 ವಿಕಿಟ್ ನಷ್ಟಕ್ಕೆ 45 ರನ್ ಗಳಿಸಿತು. ಪ್ಯಾಂಥರ್ಸ್ ಪೆರುಂಬಾಡಿ 2.5 ಓವರ್ ಗಳಲ್ಲಿ 2 ವಿಕೇಟ್ ನಷ್ಟಕ್ಕೆ 48 ರನ್ ಗಳಿಸಿ ಫೈನಲ್ ಪ್ರವೇಶ ಪಡೆಯಿತು. ದ್ವೀತಿಯ ಸೆಮಿಫೈನಲ್ ಪಂದ್ಯಾಟ ಆರ್.ಸಿ.ಬಿ. ಬೈಲುಕುಪ್ಪೆ 06 ಓವರ್ ಗಳಲ್ಲಿ ವಿಕಿಟ್ ನಷ್ಟವಿಲ್ಲದೆ 58 ರನ್ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಕೊಡಗು ಯೂತ್ ವಾರಿರ‍್ಸ್ ತಂಡ 06 ಓವರ್ ಗಳಲ್ಲಿ 5 ವಿಕೇಟ್ ನಷ್ಟಕ್ಕೆ 54 ರನ್ ಗಳಿಸಿ ಸೋಲು ಅನುಭವಿಸಿತು. ಫೈನಲ್ ಪಂದ್ಯಾಟ ಆರ್.ಸಿ.ಬಿ ಬೈಲುಕುಪ್ಪೆ ಮತ್ತು ಪೆರುಂಬಾಂಡಿ ಪ್ಯಾಂಥರ್ಸ್ ತಂಡಗಳ ಮಧ್ಯೆ ಪಂದ್ಯಾಟ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ. ಬೈಲುಕುಪ್ಪೆ ತಂಡ ನಿಗದಿತ 06 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 43 ರನ್ ಗಳಸಿತು. 44 ರನ್ ಗುರಿ ಬೆನ್ನಟ್ಟಿದ ಪೆರುಂಬಾಡಿ ಪ್ಯಾಂಥರ್ಸ್ ತಂಡ ಬಿರುಸಿನ ಆಟ ಪ್ರದರ್ಶನ ಮಾಡಿತು. 3.3 ಓವರ್ ಗಳಲ್ಲಿ ತನ್ನ ನಾಲ್ಕು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿ ಗೆಲುವು ಸಾಧಿಸಿತು
ಚಾಂಪಿಯನ್ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು 15,000 ರು ನಗದು, ದ್ವೀತಿಯ ತಂಡಕ್ಕೆ ಟ್ರೋಫಿ ಮತ್ತು 10,000 ನಗದು ನೀಡಿ ಗೌರವಿಸಲಾಯಿತು.ಪಂದ್ಯಾಟದಲ್ಲಿ ಸರಣಿ ಶ್ರೇಷ್ಟ,ಪಂದ್ಯ ಪರುಶೋತ್ತಮ, ಮತ್ತು ಇನ್ನಿತರ ವಯುಕ್ತಿಕ ಪರಿತೋಷಕಗಳನ್ನು ನೀಡಿ ಗೌರವಿಸಲಾಯಿತು.
ಸಂಸ್ಥೆಯಾದ ನಾಯ್ಡುಸ್ ಸ್ಪೋರ್ಟ್ಸ ಕ್ಲಬ್ ಕೊಡಗು ನ ಚೇತನ್ ಟಿ.ಪಿ. ವಿನೋದ್ ಟಿ.ಜಿ., ತೇಜಸ್ ಟಿ.ವಿ, ಕಾರ್ತಿಕ್, ಪದ್ಮನಾಭ ಕೆ, ಅವರುಗಳು ಸೇರಿದಂತೆ, ಬಲಿಜ ಸಮಾಜದ ಪ್ರಮುಖರು, ಸಮಾಜ ಬಾಂಧವರು, ಮಹಿಳೆಯರು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ:ಕಿಶೋರ್ ಕುಮಾರ್ ಶೆಟ್ಟಿ
What's Your Reaction?






