ಭೂಮಿ ಇರುವ ತನಕವೂ ಬಸವೇಶ್ವರರ ಆದರ್ಶಗಳು ಜೀವಂತ: ಉಪನ್ಯಾಸಕಿ ಜಯಲಕ್ಷ್ಮಿ ಅಭಿಮತ

ಭೂಮಿ ಇರುವ ತನಕವೂ ಬಸವೇಶ್ವರರ ಆದರ್ಶಗಳು ಜೀವಂತ: ಉಪನ್ಯಾಸಕಿ ಜಯಲಕ್ಷ್ಮಿ ಅಭಿಮತ

ಗೋಣಿಕೊಪ್ಪ : ಹನ್ನೆರಡನೇ ಶತಮಾನದ ಶಿವಶರಣ ಬಸವೇಶ್ವರರ ಚಿಂತನೆಗಳು ಸಾರ್ವಕಾಲಿಕ ಎಂದು ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕಿ ಜಯಲಕ್ಷ್ಮಿ ಹೇಳಿದರು.ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಸವೇಶ್ವರರ ಕುರಿತು ಉಪನ್ಯಾಸ ನೀಡಿದ ಅವರು, 12 ನೇ ಶತಮಾನದಲ್ಲಿ ಘಟಿಸಿದ ಸಮಾನತೆ, ಸ್ತ್ರೀ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಆಶಯಗಳು 21 ನೇ ಶತಮಾನದ ಈವರೆಗೂ ಹಾಗೂ ಯಾವತ್ತಿಗೂ ಶ್ರೇಷ್ಠವಾದ ವಿಚಾರಗಳಾಗಿವೆ.

ಅಂದು ಸಮಾಜದಲ್ಲಿದ್ದ ಅಸಮತೆ ಹಾಗೂ ಅನ್ಯಾಯಗಳ ವಿರುದ್ಧ ಜನರ ಜೀವಪರವಾದ ನಿಲುವು ಕೈಗೊಂಡು ಹೋರಾಡಿದ ಕ್ರಾಂತಿಕಾರಿ ಬಸವೇಶ್ವರರ ಆದರ್ಶಗಳನ್ನು ಎಲ್ಲರೂ ಅರಿಯುವ ಮೂಲಕ ಶಾಂತಿ - ಸಮಾನತೆಯ ನಾಡು ಕಟ್ಟಲು ಕಂಕಣ ಬದ್ದರಾಗಬೇಕೆಂದು ಜಯಲಕ್ಷ್ಮಿ ಕರೆಕೊಟ್ಟರು.

ಇದೇ ಸಂದರ್ಭ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ವಚನಗಳನ್ನು ಪಠಿಸಲಾಯಿತು.ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಬಿ.ಎನ್.ಸತೀಶ್, ಡಾ.ನಿಂಗರಾಜು ದಳವಾಯಿ, ಡಾ.ಸಿದ್ಧಾರೂಢ ಸಿಂಗಡಿ, ಮಣಿಕಂಠ ಇದ್ದರು.