ಮಳೆ ಎಫೆಕ್ಟ್: ವಿರಾಜಪೇಟೆ ಕದನೂರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿರುವ ನೀರು: ವಾಹನ ಸವಾರರ ಪರದಾಟ

ಮಳೆ ಎಫೆಕ್ಟ್: ವಿರಾಜಪೇಟೆ ಕದನೂರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿರುವ ನೀರು: ವಾಹನ ಸವಾರರ ಪರದಾಟ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ವಿರಾಜಪೇಟೆ, ಮಡಿಕೇರಿ ಮುಖ್ಯ ರಸ್ತೆಯ ಕದನೂರು ಬಳಿಯ ವೇ ಬಿಡ್ಜ್ ಸಮೀಪದ ರಸ್ತೆ ಮಧ್ಯದಲ್ಲೇ ಮಳೆ ನೀರು ಶೇಖರಣೆಗೊಂಡು ವಾಹನ ಸವಾರರು ಸಂಚರಿಸಲು ಹರಸಾಹಸ ಪಡುತ್ತಿರುವ ದೃಶ್ಯ ಭಾನುವಾರ ಮಧ್ಯಾಹ್ನ ಕಂಡುಬಂದಿದೆ.ಈ ರಸ್ತೆಯ ಮಾರ್ಗದಲ್ಲಿ ಸಂಚರಿಸಲು ಪ್ರಯತ್ನ ಮಾಡಿದ 2 ಓಮ್ನಿ ವಾಹನಗಳು ನಡು ರಸ್ತೆಯಲ್ಲೇ ಕೆಟ್ಟುನಿಂತ ಘಟನೆ ಕೂಡ ಸಂಭವಿಸಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ವಿರಾಜಪೇಟೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸೈಪುದ್ದೀನ್ ಚಾಮಿಯಾಲ ಮಾತನಾಡಿ ಕದನೂರ್ ಗ್ರಾಮ ಪಂಚಾಯಿತಿಯು ರಸ್ತೆಯ ಬದಿಯ ಚರಂಡಿ ಸ್ವಚ್ಛ ಗೊಳಿಸದ ಕಾರಣ ಇಂತಹ ಘಟನೆಗಳು ಸಂಭವಿಸಿದೆ.ಇದು ರಾಜ್ಯ ಹೆದ್ದಾರಿಯಾಗಿದ್ದು ದಿನನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದೆ.ಮಳೆ ಗಾಲ ಆರಂಭಕ್ಕೂ ಮುನ್ನ ಈ ರೀತಿಯಾದರೆ ಮಳೆಗಾಲದ ಪರಿಸ್ಥಿತಿ ಹೇಗಿರಬಹುದು ಎಂದು ಪ್ರಶ್ನಿಸಿದ ಸೈಫುದ್ದೀನ್ ಕೂಡಲೇ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಂಡು ರಸ್ತೆ ಬದಿಯಲ್ಲಿರುವ ಚೆರಂಡಿಗಳನ್ನು ಸ್ವಚ್ಛ ಗೊಳಿಸಿ ಸಾರ್ವಜನಿಕರ ಹಾಗೂ ವಾಹನ ಸವಾರರ ಸಂಗಮ ಸಂಚಾರಕ್ಕೆ ವ್ಯವಸ್ಥೆಗಲ್ಪಿಸಬೇಕೆಂದು ಒತ್ತಾಯಿಸಿದರು.