ಮೇ18ರಂದು ಕಲ್ಲುಬಾಣೆಯಲ್ಲಿ ಜಿಲ್ಲಾ ತಖ್ವಿಯಾ ಸಂಗಮ ಮತ್ತು ಮುಅಲ್ಲಿಂ ಮಂಝಿಲ್ ಲೋಕಾರ್ಪಣೆ

ಮೇ18ರಂದು ಕಲ್ಲುಬಾಣೆಯಲ್ಲಿ ಜಿಲ್ಲಾ ತಖ್ವಿಯಾ ಸಂಗಮ ಮತ್ತು ಮುಅಲ್ಲಿಂ ಮಂಝಿಲ್ ಲೋಕಾರ್ಪಣೆ

ವಿರಾಜಪೇಟೆ:ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ನಿರ್ಮಿಸಿರುವ ಮುಅಲ್ಲಿಂ ಮಂಝಿಲ್ ಉದ್ಘಾಟನಾ ಸಮಾರಂಭ ಹಾಗೂ ಕೊಡಗು ಜಿಲ್ಲಾ ತಖ್ವಿಯ್ಯ ಸದರ್ ಹಾಗೂ ಮುಅಲ್ಲಿಂ ಜಿಲ್ಲಾ ಮಟ್ಟದ ಸಮಾವೇಶ ಇದೇ ಭಾನುವಾರ ಬೆಳಿಗ್ಗೆ 7.30ಕ್ಕೆ ವಿರಾಜಪೇಟೆ ಸಮೀಪದ ಕಲ್ಲುಬಾಣೆಯಲ್ಲಿ ನಡೆಯಲಿದೆ.ಸಮಸ್ತ ಕೇರಳ ಜಂಇಯತ್ತುಲ್ ಮುಅಲ್ಲಿಮೀನ್ ಕೇಂದ್ರ ಮಂಡಳಿಯು ಸಮಸ್ತದ ಮದರಸಾಗಳಲ್ಲಿ ಕಲಿಸುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಮದ್ರಸ ಶಿಕ್ಷಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳು ಮತ್ತು ಕಾರ್ಯ ವೈಖರಿಗಳು ಜಾರಿಗೊಳಿಸುತ್ತಿದೆ. ಜಂಇಯ್ಯತುಲ್ ಮುಅಲ್ಲಿಮೀನ್ ಈಗಾಗಲೇ ಕೇರಳ ಮತ್ತು ತಮಿಳುನಾಡು ,ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಬಡ ಮುಅಲ್ಲಿಮೀನ್‌ಗಳಿಗೆ ಸುಮಾರು ನೂರಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ . ಕೊಡಗು ಜಿಲ್ಲೆಯಲ್ಲಿ ನಿರ್ಮಿಸಲಾದ ಐದನೇ ಮುಅಲ್ಲಿಂ ಮಂಝಿಲ್ ಕಲ್ಲುಬಾಣೆಯಲ್ಲಿ ನಿರ್ಮಿಸಲಾಗಿದೆ. ಇದರ ಉದ್ಘಾಟನಾ ಸಮಾರಂಭವನ್ನು ಭಾನುವಾರ ಬೆಳಿಗ್ಗೆ 7:30 ಕ್ಕೆ ಜಂಇಯತುಲ್ ಮುಅಲ್ಲಿಮೀನ್ ಕೇಂದ್ರ ಮಂಡಳಿ ಕಾರ್ಯದರ್ಶಿ ಎಂ ಅಬ್ದುರಹ್ಮಾನ್ ಮುಸ್ಲಿಯಾರ್ ನೆರವೇರಿಸಲಿದ್ದಾರೆ. ಅಂದು ಬೆಳಿಗ್ಗೆ 10:30 ಕ್ಕೆ ಕಲ್ಲುಬಾಣೆ ದಾರುಲ್ ಇಸ್ಲಾಂ ಮದರಸಾದಲ್ಲಿ ತಖ್ವಿಯ್ಯಾ ಮುಅಲ್ಲಿಂ ಮತ್ತು ಸದರ್ ಸಂಗಮ ನಡೆಯಲಿದೆ. ಮದರಸಾಗಳನ್ನು ಬಲಪಡಿಸಲು ಮತ್ತು ಶಿಕ್ಷಣ ಕ್ಷೇತ್ರವನ್ನು ಸುಧಾರಿಸಲು ನಡೆಯುತ್ತಿರುವ ಸಭೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಮದರಸಾಗಳ ಶಿಕ್ಷಕರು, ಸದರ್ ಮುಅಲ್ಲಿಮ್‌ಗಳು, ರೇಂಜ್ ಮತ್ತು ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಸಮಸ್ತ ಜಿಲ್ಲಾ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಸಿ. ಉಸ್ಮಾನ್ ಫೈಝಿ ಉದ್ಘಾಟಿಸಲಿದ್ದಾರೆ. 

ಎಂ ಅಬ್ದುರಹ್ಮಾನ್ ಮುಸ್ಲಿಯಾರ್ ಮತ್ತು ಮುಹಮ್ಮದ್ ಖುಬೈಬ್ ವಾಫಿ ಚೆಮ್ಮಾಡ್ ವಿಷಯ ಮಂಡಿಸಲಿದ್ದಾರೆ. ಸಮಕಾಲೀನ ವಿಷಯಗಳಲ್ಲಿ ಸಮರ್ಪಕ ವಿಚಾರ ಧಾರೆಗಳ ಶಿಬಿರ ಮಾದರಿ ತರಗತಿಗಳು ಮತ್ತು ಸಮಸ್ತದ 100ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ ವಿವಿಧ ವಿಷಯಗಳ ಪದ್ದತಿಗಳ ಕಾರ್ಯ ಚಟುವಟಿಕೆಗಳ ಸಮಗ್ರ ಮಾಹಿತಿಗಳನ್ನು ಚರ್ಚಿಸಲಾಗುತ್ತದೆ. ಜಿಲ್ಲೆಯ ಎಲ್ಲಾ ಸಮಸ್ತದ ಮದ್ರಸಗಳಿ ಪ್ರಸಕ್ತ ದಿನ ರಜೆ ಘೋಷಿಸಲಾಗಿದೆ.ಆದ್ದರಿಂದ ಮದ್ರಸ ಆಡಳಿತ ಮಂಡಳಿ ಮತ್ತು ಮದ್ರಸ ಅಧ್ಯಾಪಕರು ಈ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಪಿ.ಎಂ ಆರಿಫ್ ಫೈಝಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.