ನಾಪೋಕ್ಲು: ಕಕ್ಕಬ್ಬೆ ಮರಂದೋಡ ಗ್ರಾಮದಲ್ಲಿ 2.288ಕೆಜಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಅಸ್ಸಾಂ ಕಾರ್ಮಿಕರ ಬಂಧನ

ನಾಪೋಕ್ಲು: ಕಕ್ಕಬ್ಬೆ ಮರಂದೋಡ ಗ್ರಾಮದಲ್ಲಿ 2.288ಕೆಜಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಅಸ್ಸಾಂ ಕಾರ್ಮಿಕರ ಬಂಧನ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ಕೊಡಗು ಜಿಲ್ಲಾ ಪೊಲೀಸ್ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕಬ್ಬೆ ಮರಂದೋಡ ಗ್ರಾಮದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಅಸ್ಸಾಂ ರಾಜ್ಯದ ಕಾರ್ಮಿಕರನ್ನು 2.288ಕೆಜಿ ಗಾಂಜಾ ಸಹಿತ ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ಅಸ್ಸಾಂ ರಾಜ್ಯದ ದರೋಂಗ್ ಜಿಲ್ಲೆಯ ನಿವಾಸಿಗಳಾದ ಪ್ರಸ್ತುತ ಮರಂದೋಡ ಗ್ರಾಮದಲ್ಲಿ ವಾಸವಿರುವ ಹಮೀರ್ ಹುಸೈನ್ (34) ಹಾಗೂ ಕುಂಜಿಲ ಗ್ರಾಮದಲ್ಲಿ ವಾಸವಿರುವ ಮುನಾವರ್ ಹುಸೈನ್ (34) ಬಂಧಿತ ಆರೋಪಿಗಳಾಗಿದ್ದಾರೆ.

ದಿನಾಂಕ 01-9-2025ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಮರಂದೋಡ ಗ್ರಾಮದ ಬಿದ್ದಂಡ ತಟ್ಟು ರಸ್ತೆ ಬಳಿ ಇರುವ ಪ್ರಯಾಣಿಕರ ಬಸ್ಸು ತಂಗುದಾಣದಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು. ಆರೋಪಿಗಳಿಂದ ಮಾರಾಟಕ್ಕಿಟ್ಟಿದ್ದ 2.288ಕೆಜಿ ಅಕ್ರಮ ಗಾಂಜಾ ವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್, ಗ್ರಾಮಾಂತರ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ, ಸಿಬ್ಬಂದಿಗಳಾದ ಆನಂದ, ಜೋಸೆಫ್, ವಿಜಯ್ ಕುಮಾರ್, ಸಂಗಮೇಶ್, ಶ್ರೀಧರ್, ನಾಗರಾಜ, ಸತೀಶ್, ಬಸವನಗೌಡ ಪಾಲ್ಗೊಂಡಿದ್ದರು. ಪ್ರಕರಣದ ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಸಿಬ್ಬಂದಿ ವರ್ಗದವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ.