ಗುತ್ತಿಗೆದಾರ ಸಂಪತ್ ಹತ್ಯೆ ಪ್ರಕರಣ:ಆರೋಪಿಗಳು ಪೊಲೀಸರ ವಶಕ್ಕೆ: ಹೆಣ್ಣಿನ ಮೋಹಕ್ಕೆ ಜೀವ ಕಳೆದುಕೊಂಡನೇ ಗುತ್ತಿಗೆದಾರ ಸಂಪತ್!

ಗುತ್ತಿಗೆದಾರ ಸಂಪತ್ ಹತ್ಯೆ ಪ್ರಕರಣ:ಆರೋಪಿಗಳು ಪೊಲೀಸರ ವಶಕ್ಕೆ:  ಹೆಣ್ಣಿನ ಮೋಹಕ್ಕೆ ಜೀವ ಕಳೆದುಕೊಂಡನೇ ಗುತ್ತಿಗೆದಾರ ಸಂಪತ್!

ಮಡಿಕೇರಿ:ಒಂದು ವಾರಗಳ ಹಿಂದೆ ನಾಪತ್ತೆಯಾಗಿದ್ದ ಸೋಮವಾರಪೇಟೆ ಕಕ್ಕೆಹೊಳೆ ಜಂಕ್ಷನ್ ನಿವಾಸಿ ಗುತ್ತಿಗೆದಾರ ಸಂಪತ್ (ಶಂಭು)ಅವರ ಮೃತದೇಹವು ಬುಧವಾರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಯಸಳೂರು ಬಳಿಯ ಮಾಗೇರಿಯಲ್ಲಿ ರಕ್ತಸಿಕ್ತವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಎಂಟು ದಿನಗಳ ಹಿಂದೆ ಹತ್ಯೆಯಾಗಿದ್ದ ಸಂಪತ್ ಅವರನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಯಶಸ್ಸು ಕಂಡಿದೆ.ಕಿರಣ್ ಮತ್ತು ಗಣಪತಿ ಬಂಧಿತ ಆರೋಪಿಗಳಾಗಿದ್ದು,ಪ್ರಕರಣದ ಬಗ್ಗೆ ಶನಿವಾರ ದಿನ‌ ಜಿಲ್ಲಾ ವರಿಷ್ಠಾಧಿಕಾರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆ ಇದೆ.ಮೂಲಗಳ ಪ್ರಕಾರ ಹೆಣ್ಣಿನ ಮೋಹಕ್ಕೆ ಸಂಪತ್ ಬಲಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.