ಸಿದ್ದಾಪುರ;ಬೆಳೆಗಾರ ಗಣಪತಿಯನ್ನು ಬಲಿಪಡೆದ ಕಾಡಾನೆ ಸೆರೆ

Mar 13, 2026 - 20:36
 0  1.1k
ಸಿದ್ದಾಪುರ;ಬೆಳೆಗಾರ ಗಣಪತಿಯನ್ನು ಬಲಿಪಡೆದ ಕಾಡಾನೆ ಸೆರೆ

ಸಿದ್ದಾಪುರ: ಬೆಳೆಗಾರ ಗಣಪತಿ ಅವರನ್ನು ಬಲಿಪಡೆದ ಸುಮಾರು 34 ವರ್ಷದ ಕಾಡಾನೆಯನ್ನು ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಇಂದು ಸಂಜೆ ಚೆನ್ನೈನಕೋಟೆ ಬಾಡಗ ಬಾಣಂಗಾಲ ಸಮೀಪದ ಕಾಫಿ ತೋಟದಲ್ಲಿ ಸೆರೆ ಹಿಡಿಯಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತರಬೇತಿ ಪಡೆದ ಸಾಕಾನೆಗಳಾದ ಕಂಜನ್, ಸುಗ್ರೀವ, ಧನಂಜಯ್, ಪ್ರಶಾಂತ್ ಹಾಗೂ ಹರ್ಷ ಅಯ್ಯಪ್ಪ ಆನೆ ಗಳನ್ನು ಬಳಸಿಕೊಳ್ಳಲಾಯಿತು. ಪಶುವೈದ್ಯರಾದ ಡಾ. ರಮೇಶ್ ರಂಜನ್ ಅವರ ಮೇಲ್ವಿಚಾರಣೆಯಲ್ಲಿ ಕಾಡಾನೆಗೆ ಮದ್ದು ನೀಡಿ, ಸಾಕಾನೆಗಳ ಸಹಾಯದಿಂದ ಅದನ್ನು ಸುತ್ತುವರಿದು ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು. ಈ ಕಾಡಾನೆ ಗುರುವಾರ ಸಿದ್ದಾಪುರg ಸಮೀಪದ ಕಾಫಿ ತೋಟದಲ್ಲಿ ದಾಳಿ ನಡೆಸಿ ಬೆಳೆಗಾರ ಗಣಪತಿ (49) ಅವರ ಸಾವಿಗೆ ಕಾರಣವಾಗಿತ್ತು.

What's Your Reaction?

Like Like 2
Dislike Dislike 0
Love Love 1
Funny Funny 1
Angry Angry 0
Sad Sad 1
Wow Wow 1