ಗಾಂಜಾ ಸೇವನೆ:ಮೂವರು ಯುವಕರ ಬಂಧನ

ಗಾಂಜಾ ಸೇವನೆ:ಮೂವರು ಯುವಕರ ಬಂಧನ

ಮಂಗಳೂರು: ನಗರದ ಕಾವೂರು ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದಲ್ಲಿ ಮೂವರನ್ನು ಕಾವೂರು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಉಳ್ಳಾಲ ಮೇಲಂಗಡಿಯ ನಿವಾಸಿ ಎಂ.ಸಿರಾಜುದ್ದೀನ್ ಯಾನೆ ಎಂ.ಎಸ್.ಶಾಕೀರ್ ಇಲಿಯಾಸ್ (25), ಕೆ.ಸಿ. ರೋಡ್ ನಿವಾಸಿ ಅಬ್ದುಲ್ ಖಾದ‌ರ್ ಆದೀಫ್ ಯಾನೆ ಆದಿ (18), ಕಾವೂರು ಶಾಂತಿನಗರ ನಿವಾಸಿ ಶಾಹುಲ್ ಅಮೀದ್ ಸಫ್ಘಾನ್ (28) ಬಂಧಿತ ಆರೋಪಿಗಳು. ಇವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.