ಕುಶಾಲನಗರ: ನಿಯಮ ಉಲ್ಲಂಘಿಸಿದ 5ಡಿಜೆಗಳು ವಶಕ್ಕೆ

ಕುಶಾಲನಗರ: ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾನುವಾರ ಗಣೇಶ ವಿಸರ್ಜನೆ ಬಳಿಕ 5 ಡಿಜೆಗಳನ್ನು ಕುಶಾಲನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಶಬ್ದ ಮಾಲಿನ್ಯ ಆರೋಪದಡಿ ಮಾದಾಪಟ್ಟಣದ 4, ಜನತಾ ಕಾಲನಿಯ 1 ಡಿಜೆಗಳನ್ನು ವಾಹನ ಸಹಿತ ವಶಪಡಿಸಿಕೊಂಡು ಸಮಿತಿಯವರ ಮೇಲೆ ಪ್ರಕರಣ ದಾಖಲಿಸಲಾಗಿದೆ.