ಬ್ಯಾಡಗೊಟ್ಟ: ವಾಟರ್ ಮ್ಯಾನ್ ಗಳಿಗೆ ಪರಿಕರ ವಿತರಣೆ

ಬ್ಯಾಡಗೊಟ್ಟ: ವಾಟರ್ ಮ್ಯಾನ್ ಗಳಿಗೆ ಪರಿಕರ ವಿತರಣೆ

ಕೊಡ್ಲಿಪೇಟೆ : ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರುಗಂಟಿಗಳಿಗೆ ಅವಶ್ಯಕ ಪರಿಕರಗಳನ್ನು ವಿತರಿಸಲಾಯಿತು. 7 ಜನ ವಾಟರ್ ಮ್ಯಾನ್ ಗಳಿಗೆ ಬೂಟ್ ,ರ‌ಐನ್ ಕೋಟ್ ,ಟಾರ್ಚ್ ಸೇರಿದಂತೆ ಬಳಕೆಗೆ ಅತ್ಯವಶ್ಯಕವಾಗಿರುವ ಸಾಮಾಗ್ರಿಗಳನ್ನು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಂಚಾಯತ್ ಅಧ್ಯಕ್ಷೆ ಪಾವನ ಗಗನ್ ,ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಕಾಂತರಾಜ್ , ಸದಸ್ಯರುಗಳಾದ ಹನೀಫ್ ,ದಿನೇಶ್‌ಕುಮಾರ್ ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ವಿತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ನೌಕರರು,ನೀರು ನಿರ್ವಾಹಕರು ಇದ್ದರು.