ಯುವಕ-ಯುವತಿಯರ ಕ್ರೀಡಾ ಪ್ರತಿಭೆಗೆ ಕ್ರೀಡಾಕೂಟಗಳು ಉತ್ತಮ ವೇದಿಕೆ:ಕಾಂಚನ್ ಪೊನ್ನಣ್ಣ

May 6, 2025 - 01:57
 0  39
ಯುವಕ-ಯುವತಿಯರ ಕ್ರೀಡಾ ಪ್ರತಿಭೆಗೆ  ಕ್ರೀಡಾಕೂಟಗಳು ಉತ್ತಮ ವೇದಿಕೆ:ಕಾಂಚನ್ ಪೊನ್ನಣ್ಣ

ಮೈಸೂರು: ಕೊಡವ ಸ್ಟುಡೆಂಟ್ ಅಸೊಸಿಯೇಷನ್, ಮೈಸೂರು ವತಿಯಿಂದ ಆಯೋಜನೆಗೊಂಡಿದ್ದ ಹಾಕಿ ಪಂದ್ಯಾವಳಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರ ಧರ್ಮಪತ್ನಿ ಕಾಂಚನ್ ಪೊನ್ನಣ್ಣ ರವರು ಭಾಗವಹಿಸಿ ಪ್ರಶಸ್ತಿ ವಿತರಣೆ ಮಾಡಿದರು.  ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿನ ಕೊಡವ ವಿದ್ಯಾರ್ಥಿಗಳ ಒಕ್ಕೂಟದ ಈ ಪಂದ್ಯಾವಳಿಯ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು, ಸಮುದಾಯದ ಯುವಕ-ಯುವತಿಯರ ಕ್ರೀಡಾ ಪ್ರತಿಭೆ ಮುನ್ನಲೆಗೆ ತರಲು ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು.    

ಈ ಸಂದರ್ಭದಲ್ಲಿ, ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಆಹ್ವಾನಿತ ಗಣ್ಯರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0