ಪ್ರವಾದಿಯವರ 1500 ನೇ ಜನ್ಮ ದಿನ: ಕುಶಾಲನಗರದಲ್ಲಿ ಈದ್ ಮಿಲಾದ್ ಜಾಥಾ

ಕುಶಾಲನಗರ: ಪ್ರವಾದಿ ಪೈಗಂಬರ್ ಮುಹಮ್ಮದ್ ಅವರ ೧೫೦೦ ಜನ್ಮ ದಿನದ ಪ್ರಯುಕ್ತ ಕುಶಾಲನಗರದಲ್ಲಿ ಶಾಂತಿ, ಸಾಹೋದರ್ಯತೆಯನ್ನು ಸಾರುವ ಈದ್ ಮಿಲಾದ್ ಜಾತಾ ನಡೆಯಿತು. ದಾರುಲ್ ಉಲೂಂ ಮದ್ರಸ, ಹಿಲಾಲ್ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ವತಿಯಿಂದ ಪ್ರವಾದಿಯವರ ಜನ್ಮದಿನ ಹಿನ್ನಲೆ ಪ್ರವಾದಿಯವರ ಸಂದೇಶವನ್ನು ಸಾರುವ ಮೆರವಣಿಗೆ ಸಾಗಿದರು. ಕುಶಾಲನಗರದ ದಾರುಲ್ ಉಲೂಂ ಮದ್ರಸದಿಂದ ಹೊರಟ ಮೆರವಣಿಗೆಯು ಕುಶಾಲನಗರದ ಮುಖ್ಯರಸ್ತೆಯ ಮೂಲಕ ಹಾದುಹೋಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.
ಈದ್ ಮಿಲಾದ್ ಮೆರವಣಿಗೆಯಲ್ಲಿ ದಾರುಲ್ ಉಲೂಂ ಮದ್ರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶಿಸಿದರು. ಮದ್ರಸ ವಿದ್ಯಾರ್ಥಿಗಳು ವಿಶೆಷ ಉಡುಗೆಗಳನ್ನು ತೊಟ್ಟು ಸಾರ್ವಜನಿಕರ ಕಣ್ಮನ ಸೆಳೆದರು. ಮೆರವಣಿಗೆಯಲ್ಲಿ ಪ್ರವಾದಿಯವರು ಜೀವನ ಸಂದೇಶಗಳನ್ನು, ಆದರ್ಶಗಳನ್ನು, ಅವರ ನಡೆದು ಬಂದ ಹಾದಿಯನ್ನು ಸಾರಲಾಯಿತು. ಎಲ್ಲರೂ ಜಾತಿ, ಧರ್ಮವನ್ನು ಬಿಟ್ಟು ಪರಸ್ಪರ ಸಹೋದರರಂತೆ, ಶಾಂತಿ ಸಮಾನತೆಯಿಂದ ಬಾಳಿ ಬದುಕಬೇಕು ಎಂದು ಧರ್ಮಗುರುಗಳು ಕರೆ ನೀಡಿದರು. ಪ್ರವಾದಿ ಯವರ ಜನ್ಮ ದಿನ ಪ್ರಯುಕ್ತ ಮಕ್ಕಳಿಗೆ ಸಿಹಿ ಹಾಗೂ ತಂಪು ಪಾನೀಯಗಳನ್ನು ಹಂಚಿದರು. ಈ ಸಂದರ್ಭ ಹಿಲಾಲ್ ಮಸೀದಿ ಕಮಿಟಿ ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸ ಅಧ್ಯಪಕರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ನ ಪ್ರಮುಖರು, ಸಾರ್ವಜನಿಕರು ಇದ್ದರು.