ಕೊಟ್ಟಮುಡಿಯಲ್ಲಿ ಸಂಭ್ರಮದ ಈದ್-ಮಿಲಾದ್ ಆಚರಣೆ

ಕೊಟ್ಟಮುಡಿಯಲ್ಲಿ ಸಂಭ್ರಮದ ಈದ್-ಮಿಲಾದ್ ಆಚರಣೆ

ಮಡಿಕೇರಿ:ಕೊಟ್ಟಮುಡಿಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ.ಅ) ಅವರ 1500ನೇ ಜನ್ಮದಿನದ ಪ್ರಯುಕ್ತ ಕೊಟ್ಟಮುಡಿಯ ಮುಖ್ಯರಸ್ತೆಯಲ್ಲಿ ಶಾಂತಿ-ಸೌಹಾರ್ದತೆ ಸಂದೇಶ ಸಾರುವ ಘೋಷಣೆ ಮೂಲಕ ವಿಜೃಂಭಣೆಯ ಈದ್ ಮೀಲಾದ್ ಜಾಥಾ ನಡೆಯಿತು. ಪುಟಾಣಿ ಮಕ್ಕಳು ದಫ್ ,ಸ್ಕೌಟ್ ಈದ್ ಮಿಲಾದ ಜಾಥಾದಲ್ಲಿ ಗಮನಸೆಳೆಯಿತು. ಕೊಟ್ಟಮುಡಿ ಜಮಾಅತ್ ಅಧ್ಯಕ್ಷರು ಹಂಸ ಎಚ್.ಎ, ಜಮಾಅತ್ ಉಪಾಧ್ಯಕ್ಷರ ಮೈಸಿ ಕತ್ತಣಿರ, ಖತೀಬರಾದ ಅಬ್ದುಲ್ ಮಲೀಕ್, ಪಂಚಾಯತ್ ಸದಸ್ಯರಾದ ಮೊಯ್ದು, ಕಾರ್ಯದರ್ಶಿ ಅಲಿ ಗಫೂರ್, ಖಾಸಿಂ, ರಫೀಕ್, ಅಬ್ದುಲ್ಲ, ರಫೀಕ್, ಹಮೀದ್, ಕರೀಂ ಹಾಜಿ ಅಬೂಬಕ್ಕರ್ ಇದ್ದರು.