ಕಾಟಕೇರಿ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಎ.ಎಸ್.ಪೊನ್ನಣ್ಣ ಭಾಗಿ

ಕಾಟಕೇರಿ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಎ.ಎಸ್.ಪೊನ್ನಣ್ಣ ಭಾಗಿ

ಮಡಿಕೇರಿ:ತಾಲೂಕಿನ ಕಾಟಕೇರಿ ಗ್ರಾಮದಲ್ಲಿ ಭಗತ್ ಸಿಂಗ್ ಫ್ರೆಂಡ್ಸ್ ಕ್ಲಬ್‌ ಯುವಕ ಸಂಘ,ಅಪ್ಪೇಂದ್ರ ದೇವಸ್ಥಾನ ಸಮಿತಿ ಹಾಗೂ ಕಾಟಕೇರಿ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಕಾಟಕೇರಿ ಜಂಕ್ಷನ್ (ಕಾವೇರಿ ಬಕ್ಕ) ನಲ್ಲಿ ಜರುಗಿದ ಏಳನೇ ವರ್ಷದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರು ಪಾಲ್ಗೊಂಡಿದ್ದರು.

 ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಪೊನ್ನಣ್ಣ ನವರು ಸಾರ್ವಜನಿಕ ಉತ್ಸವಗಳು ನಮ್ಮಲ್ಲಿ ಸಹಬಾಳ್ವೆ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನಪ್ರತಿನಿಧಿಯಾಗಿ ಜನರ ನಡುವೆ ಬೆರೆಯುವ ಕ್ಷಣಗಳು ತೃಪ್ತಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತಕ್ಕರಾದ ಚಿಮ್ಮಂಡ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಮಿತಿ ಪ್ರಮುಖರಾದ ಅಶ್ವಥ್. ಬಿ.ಎಸ್. ಬಾಳಾಡಿರ ಪ್ರತಾಪ್, ವಾಟೆಕೊಲ್ಲಿ ಬೆಳ್ಯಪ್ಪ,ನಾಡುಮನಿ ಸುಭಾಷ್, ಕಾಸ್ಪಾಡಿ ಅಪ್ಪಯ್ಯ,ಗ್ರಾಮ ಪಂಚಾಯತ್ ಸದಸ್ಯರಾದ ಜಯರಾಜ್,ಇಸ್ಮಾಯಿಲ್, ಕೊಲ್ಯದ ಗಿರೀಶ್, ಪಿ.ಎಲ್.ಸುರೇಶ್. ಕೇಟೋಳಿ ಮೋಹನ್ ರಾಜ್,ರಂಜಿತ್ ವಿ.ಬಿ.ಅಕ್ಷಯ್ ಕೆ.ಎಂ.,ಪೈಕೆ ಜೀವನ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ವಿವಿಧ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಗಣ್ಯರಿಂದ ಬಹುಮಾನ ವಿತರಣೆ ಮಾಡಲಾಯಿತು. ನಂತರ ಅದ್ದೂರಿ ಶೋಭಾ ಯಾತ್ರೆಯ ಮೂಲಕ ಕಾಟಕೇರಿ ನದಿಯಲ್ಲಿ ವಿನಾಯಕ ವಿಸರ್ಜನೆ ನಡೆಯಿತು.