ಮದ್ಯ ವ್ಯಸನಿಗಳ ಹಾವಳಿ: ಕ್ಯಾಮರಾ ಅಳವಡಿಕೆ

ಮದ್ಯ ವ್ಯಸನಿಗಳ ಹಾವಳಿ:  ಕ್ಯಾಮರಾ ಅಳವಡಿಕೆ

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು‌ ಬಸವೇಶ್ವರ ಬಡಾವಣೆಯ ಸುಬ್ಬಾಜಿ ರಾವ್ ಲೇಔಟ್ ನ ಬಳಿ ಮಧ್ಯ ವ್ಯಸನಿಗಳ ಹಾವಳಿ ಹೆಚ್ಚಾದ ಹಿನ್ನಲೆ ಸುಬ್ಬಾಜಿ ರಾವ್ ಲೇಔಟ್ ನಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ದಿನನಿತ್ಯ ಲೇಔಟ್ ನ ಬಳಿ ರಾತ್ರಿ ಹಗಲೆಂದಿಲ್ಲದೇ ಮಧ್ಯಪಾನ ಮಾಡುವುದು ಹೆಚ್ಚಾಗಿದೆ. ಸ್ಥಳೀಯ ಪೊಲೀಸರಿಗೆ ದೂರು ನೀಡದರೂ ಮಧ್ಯ ವ್ಯಸನಿಗಳ ಹಾವಳಿ‌ಗೆ ಕಡಿವಾಣ ಹಾಕಲು ಸಾಧ್ಯವಾಗದ ಕಾರಣ ಲೇಔಟ್ ನಲ್ಲಿ ಕ್ಯಾಮರಾ ಅಳವಡಿಸಲಾಗಿದೆ.

ಈ ಕುರಿತು ಮಾತನಾಡಿದ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಮಧ್ಯ ವ್ಯಸನಿಗಳ ಹಾವಳಿಯಿಂದ ಮಹಿಳೆಯರು, ಯುವತಿಯರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಆತಂಕದಿಂದ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಬೀಟ್ ಹಾಕದ ಕಾರಣ ಮಧ್ಯ ವ್ಯಸನಿಗಳು,‌ ಗಾಂಜಾ ಸೇವನೆ ಮಾಡುವವರ‌ ಸಂಖ್ಯೆ ಹೆಚ್ಚಾಗಿದೆ. ಇದೀಗ ಸ್ಥಳದಲ್ಲಿ ಕ್ಯಾಮರಾ ಅಳವಡಿಸಲಾಗಿದೆ. ಇದೇ ರೀತಿ ಸುಂದರನಗರ ಹಾಗೂ ನವಗ್ರಾಮದಲ್ಲೂ ಸಮಸ್ಯೆಯಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು. ಪೊಲೀಸರು ಯಾರೊಬ್ಬರೂ ಕೂಡಾ ಬೀಟ್ ಗೆ ಬರುತ್ತಿಲ್ಲ ಎಂದು ಆರೋಪಿಸಿದರು.