ಕಾಫಿ ದಸರಾ ಸಂಭ್ರಮಕ್ಕೆ ಸಕಲ ಸಿದ್ದತೆ : ಜನಾಕಷಿ೯ಸಲಿರುವ 45 ಮಳಿಗೆಗಳು

ಕಾಫಿ ದಸರಾ ಸಂಭ್ರಮಕ್ಕೆ ಸಕಲ ಸಿದ್ದತೆ : ಜನಾಕಷಿ೯ಸಲಿರುವ 45 ಮಳಿಗೆಗಳು

ಮಡಿಕೇರಿ: ಮಡಿಕೇರಿ ಜನೋತ್ಸವ ದಸರಾ ಕಾಯ೯ಕ್ರಮಗಳು ಆಯೋಜಿತವಾಗಿರುವ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.24 ರಂದು ಬುಧವಾರ ಕಾಫಿ ಕಂಪು ಮೇಳೈಸಲಿದೆ. ಕಾಫಿ ದಸರಾದಲ್ಲಿ ಕಾಫಿ ಕೖಷಿಸಂಬಂಧಿತ ಮತ್ತು ಕೆಫೆ ಸೇರಿದಂತೆ 45 ಮಳಿಗೆಗಳು ಜನರ ಗಮನ ಸೆಳೆಯಲಿವೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಪರಿಕಲ್ಪನೆಯಲ್ಲಿ ಕಳೆದ ವಷ೯ದಿಂದ ಮಡಿಕೇರಿ ದಸರಾಕ್ಕೆ ಪರಿಚಯಿಸಲ್ಪಟ್ಟ ಕಾಫಿ ದಸರಾ ಈ ಬಾರಿಯೂ ಉತ್ತಮ ಸ್ಪಂದನ ದೊರಕುವ ನಿರೀಕ್ಷೆಯಿದೆ. ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಸಹಯೋಗ ನೀಡಿರುವ ಕಾಫಿ ದಸರಾವನ್ನು ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ದಿನೇಶ್ ದೇವವೖಂದ ಉದ್ಘಾಟಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ವಹಿಸಲಿದ್ದಾರೆ. ಮುಖ್ಮಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್ ಪೊನ್ನಣ್ಣ, , ಜಿಲ್ಲಾಧಿಕಾರಿ ವೆಂಕಟರಾಜಾ,ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾಯಾ೯ಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾಯ೯ದಶಿ೯ ಅರುಣ್ ಶೆಟ್ಟಿ, ಮಡಿಕೇರಿ ನಗರಾಭಿವೖದ್ದಿ ಪ್ರಾಧಿಕಾರದ ಅದ್ಯಕ್ಷ ಬಿ.ವೈ.ರಾಜೇಶ್ , ಕೂಗ್೯ ಪ್ಲಾಂಟಸ್೯ ಅಸೋಸಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ, ಮಹಿಳಾ ಕಾಫಿ ಜಾಗೖತಿ ಸಂಘದ ಅಧ್ಯಕ್ಷೆ ಜ್ಯುತಿಕಾ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.

ಕಾಫಿ ಕೖಷಿ ಮಾಹಿತಿ:

ಕಾಫಿ ದಸರಾ ಅಂಗವಾಗಿ ಕಾಫಿ ಕೖಷಿಕರಿಗ ಸಾಕಷ್ಟು ಮಾಹಿತಿ ನೀಡುವ ಉಪನ್ಯಾಸ ಕಾಯ೯ಕ್ರಮವನ್ನು ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಏಪ೯ಡಿಸಲಾಗಿದೆ. ಭಾರತೀಯ ಕಾಫಿ ಮಂಡಳಿಯ ಗುಣಮಟ್ಟ ವಿಭಾಗದ ನಿದೇ೯ಶಕ ಡಾ.ಐಚೆಟ್ಟೀರ ಮಂದಪ್ಪ ಕಾಫಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಿಕೆ ವಿಚಾರ ಸಂಬಂಧಿತ ಮಾತನಾಡಲಿದ್ದು, ಸಕಲೇಶಪುರದ ಪ್ರಗತಿಪರ ಕೖಷಿಕ ಕರಣ್ ಅವರು ಕಾಫಿ ಕೖಷಿಯಲ್ಲಿ ಇತ್ತೀಚಿನ ಹೊಸ ತಳಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕುಶಾಲನಗರದ ಪ್ರಗತಿ ಪರ ಕೖಷಿಕ ಜೆಮಿ೯ ಡಿಸೋಜಾ ಅವರು ರೋಬಸ್ಟಾ ಕಾಫಿಯಲ್ಲಿ ಕುಬ್ಜ ತಳಿಯ ಬಗ್ಗೆ ಮಾಹಿತಿ ನೀಡಿದರೆ, ಪಶುವೈದ್ಯ ಇಲಾಖೆಯ ಪಾಲಿ ಕ್ಲಿನಿಕ್ ಆಸ್ಪತ್ರೆಗಳ ಸಹಾಯಕ ನಿದೇ೯ಶಕ ಡಾ. ಚೇಂದ್ರಿಮಾಡ ಕ್ಯಾಪ್ಟನ್ ತಿಮ್ಮಯ್ಯ ಅವರು ಕಾಫಿ ಕೖಷಿಗೆ ಪೂರಕವಾದ ಮಣ್ಣಿನ ಫಲವತ್ತತೆ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಸಾಧಕ ಕಾಫಿ ಬೆಳೆಗಾರರಿಗೆ ಸನ್ಮಾನ':

ಕಾಫಿ ದಸರಾ ಅಂಗವಾಗಿ ಜಿಲ್ಲೆಯ 10 ಸಾಧಕ ಕೖಷಿಕರಿಗೆ ಮಧ್ಯಾಹ್ನ 1 ಗಂಟೆಗೆ ಸನ್ಮಾನದ ಗೌರವ ನೆರವೇರಲಿದೆ. ಸುಂಟಿಕೊಪ್ಪ ಬಳಿಯ ಬೆಟ್ಟಗೇರಿ ಎಸ್ಟೇಟ್ ಮಾಲೀಕ ವಿನೋದ್ ಶಿವಪ್ಪ, ಕಿರಗಂದೂರು ಗ್ರಾಮದ ಹಿರಿಯ ಕೖಷಿಕರಾದ ಎಸ್.ಎಂ.ಚಂಗಪ್ಪ, ಪ್ರಗತಿಪರ ಬೆಳೆಗಾರ ಲವ ಎಡದಂಟೆ, ಪೊನ್ನಂಪೇಟೆ ಹುದೂರು ಗ್ರಾಮದ ಸಾಧಕ ಕೖಷಿಕ ಬಿ.ಪಿ. ರವಿಶಂಕರ್, , ಕೊಡ್ಲಿಪೇಟೆಯ ಕಾಫಿ ನಸ೯ರಿ ಮಾಲೀಕ ಡಿ.ವೈ.ರಜಾಕ್, ಹಿರಿಯ ಕಾಫಿ ಉದ್ಯಮಿ ಮಡಿಕೇರಿಯ ನಿಜಾಮುದ್ದೀನ್ ಸಿದ್ದಿಕಿ, ತಾಕೇರಿಯ ಸಿರಿ ಸ್ವಸಹಾಯ ಮಹಿಳಾ ಸಂಘ, ಕುಂದಗ್ರಾಮದ ಪ್ರಗತಿ ಪರ ಕೖಷಿಕ ಕೊಡಂದೇರ ನರೇನ್ ಕುಟ್ಟಯ್ಯ,, ಚೆಟ್ಟಳ್ಳಿ ಪೊನ್ನತ್ತಮೊಟ್ಟೆಯ ಮಿಶ್ರಬೆಳೆ ಕೖಷಿಕ ರಾಬಟ್೯ , ಶ್ರೀ ವಿಕ್ರಂ, ಪ್ರಗತಿ ಪರ ಕೖಷಿಕರು, ಮಸಗೋಡು. ಇವರನ್ನು ಸನ್ಮಾನಿಸಲಾಗುತ್ತದೆ. ಅಂತೆಯೇ ಕಾಫಿ ಖಾದ್ಯಗಳ ಸ್ಪಧೆ೯ ಕೂಡ ಆಯೋಜಿತವಾಗಿದ್ದು ಉತ್ತಮ ಸ್ಪಂದನ ದೊರಕಿದೆ. ಕಾಫಿ ಮಂಡಳಿ, ಕೖಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳು, ಕೊಡಗಿನಾದ್ಯಂತಲಿನ 32 ಕಾಫಿ ಕೆಫೆಗಳೂ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತವೆ ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ. .